ನ್ಯೂಸ್​ ಫಸ್ಟ್​ ಬಿಗ್​ ಇಂಪ್ಯಾಕ್ಟ್​​; ಮುಡಾ ಹಗರಣ ಭೇದಿಸಲು ಸರ್ಕಾರದಿಂದ ಮಹತ್ವದ ಹೆಜ್ಜೆ..!

author-image
Ganesh Nachikethu
Updated On
ಆತಂಕ ಬೇಡ.. ಎಚ್ಚರದಿಂದ ಇರಿ; ರಾಜ್ಯದಲ್ಲಿ ಹೊಸ ರೂಲ್ಸ್ ಜಾರಿಯಾಗುತ್ತಾ? ಸಿಎಂ ಹೇಳಿದ್ದೇನು?
Advertisment
  • ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಭಾರೀ ಅಕ್ರಮ
  • ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ ಮುಡಾ ಹಗರಣ
  • ನ್ಯೂಸ್ ​ಫಸ್ಟ್​ ವರದಿ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟೇ ಅಲ್ಲದೇ ಮುಡಾದಲ್ಲಿ ಸಾವಿರಾರು ಕೋಟಿ ಅವ್ಯವಹಾರದ ಆರೋಪ ಕೂಡ ಕೇಳಿ ಬಂದಿದೆ.

ಇನ್ನು, ಈ ಸುದ್ದಿಯನ್ನು ನ್ಯೂಸ್​ಫಸ್ಟ್​ ನಿರಂತರ ಪ್ರಸಾರ ಮಾಡುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಇದರ ಪರಿಣಾಮ ಮುಡಾ ಪ್ರಕರಣ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಪಿ.ಎನ್​​ ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚಿಸಿ ಆದೇಶಿಸಿದೆ. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜು ಅವರೇ ಆದೇಶ ಹೊರಡಿಸಿದ್ದಾರೆ. ಜತೆಗೆ ಮುಂದಿನ 6 ತಿಂಗಳ ಒಳಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

publive-image

ಈ ಹಿಂದೆಯೇ ಮುಡಾ 50:50 ಸೈಟ್​ ಹಂಚಿಕೆ ಹಗರಣದ ಕುರಿತು ನ್ಯೂಸ್​ಫಸ್ಟ್​​ ವರದಿ ಮಾಡಿತ್ತು. ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಸರ್ಕಾರ ಮುಡಾ ಆಯುಕ್ತರು ಮತ್ತು ಅಧಿಕಾರಿಗಳನ್ನು ಎತ್ತಂಗಡಿ ಮಾಡಿತ್ತು. ಹಾಗೆಯೇ ಐಎಎಸ್​ ಅಧಿಕಾರಿಗಳ ನೇತೃತ್ವದಲ್ಲೂ ತನಿಖೆಗೆ ಆದೇಶ ಹೊರಡಿಸಿತ್ತು ಸರ್ಕಾರ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್​​; ನಟ ದರ್ಶನ್​​ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment