ನ್ಯೂ ಇಯರ್​ ಸೆಲೆಬ್ರೇಷನ್​ ಮಾಡೋರಿಗೆ ಸರ್ಕಾರ ಬಿಗ್​ ಶಾಕ್​​; ಈ ರೂಲ್ಸ್​ ಫಾಲೋ ಮಾಡಲೇಬೇಕು

author-image
Ganesh Nachikethu
Updated On
ನ್ಯೂ ಇಯರ್​ಗೆ ಮದ್ಯಪಾನ ಬಿಡುಬೇಕು ಅಂದುಕೊಂಡ್ರಾ..? ಹಾಗಾದ್ರೆ 10 ದಿನದ ಒಳಗೆ ಈ ಆಸ್ಪತ್ರೆಗೆ ಭೇಟಿ ನೀಡಿ
Advertisment
  • ನ್ಯೂ ಇಯರ್ ಸೆಲೆಬ್ರೇಷನ್‌ ಮಾಡೋಕೆ ನೀವು ರೆಡಿನಾ?
  • ಸಂಭ್ರಮಾಚರಣೆಗೆ ರೂಲ್ಸ್‌ ಫಾಲೋ ಮಾಡೋದು ಪಕ್ಕಾ
  • ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲು ಸಿದ್ಧತೆ

ಬೆಂಗಳೂರು: 2024 ಮುಗಿಯೋಕೆ ದಿನಗಣನೆ ಶುರುವಾಗಿದೆ. 2025 ಅನ್ನ ವೆಲ್‌ಕಮ್ ಮಾಡೋಕೆ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ತಾವು ಇರೋ ಪಿಜಿ.. ಆದ್ರೆ ಹತ್ರ ಇರೋ ಪಬ್‌, ರೆಸ್ಟೋರೆಂಟ್‌ ಹೋಗಿ ಸೆಲೆಬ್ರೇಷನ್ ಮಾಡ್ಬೇಕು ಅಂದು ಕೊಳ್ತಿದ್ದವ್ರಿಗೆ ಈ ವಿಷಯ ಕೇಳಿ ಬೇಸರ ಆಗಬಹುದು.

ನ್ಯೂಇಯರ್‌ ಸೆಲೆಬ್ರೇಷನ್ ತಯಾರಿ ಆಲ್‌ ರೆಡಿ ಶುರುವಾಗಿಬಿಟ್ಟಿದೆ. ಆದ್ರೆ ಹೊಸ ವರ್ಷ ಸಂಭ್ರಮಾಚರಣೆಗೆ ಪೊಲೀಸ್ರು ಗೈಡ್‌ಲೈನ್ಸ್ ಹೊರಡಿಸಲು ಸಿದ್ಧತೆ ಮಾಡ್ಕೊಂಡಿದ್ದಾರೆ. ಠಾಣಾ ಮಟ್ಟದಲ್ಲಿ ಆಯಾ ಠಾಣೆಯ ಇನ್ಸ್​ಪೆಕ್ಟರ್​ಗಳ ಜೊತೆ ಸಭೆಗೆ ತಯಾರಿ ಮಾಡಲಾಗಿದ್ದು, ಪಬ್‌ & ರೆಸ್ಟೋರೆಂಟ್, ಪಿಜಿ ಮಾಲೀಕರಿಗೆ ಮಾರ್ಗಸೂಚಿ ಕೊಡೋದಕ್ಕೆ ಪೊಲೀಸ್ರು ರೆಡಿಯಾಗಿದ್ದಾರೆ.

ಪಿಜಿ ಮಾಲೀಕರಿಕೆ ಗೈಡ್​ಲೈನ್ಸ್​

ಪಿಜಿಯಲ್ಲಿ ಇರುವವರ ಆಗಮನ ಹಾಗೂ ನಿರ್ಗಮನದ ನಿಖರ ಸಮಯವನ್ನ ಮಾಲೀಕರು ಲೆಡ್ಜರ್‌ನಲ್ಲಿ ನಮೂದಿಸಬೇಕು. ಪಿಜಿಯಲ್ಲಿ ಟೆರೇಸ್ ಮೇಲೆ ಪಾರ್ಟಿ ಮಾಡುವವರ ಮಾಹಿತಿ ಸಂಗ್ರಹಿಬೇಕು. ಹೊಸ ವರ್ಷದ ದಿನ ಅಪರಿಚಿತರನ್ನ ಪಿಜಿಗೆ ಸೇರಿಸಿಕೊಳ್ಳಬಾರದು. ಪಿಜಿಗಳ ಮುಂಭಾಗದ ರಸ್ತೆಗಳಲ್ಲಿ ಕೇಕ್ ಕಟಿಂಗ್ ಮಾಡಬಾರ್ದು. ಅಷ್ಟೇ ಅಲ್ಲದೇ ಮಹಿಳಾ ಪಿಜಿಗಳಿಗೆ ವಿಶ್ ಮಾಡಲು ಪುರುಷರಿಗೆ ಎಂಟ್ರಿ ಕೊಡಬಾರ್ದು.

ಪಬ್ & ರೆಸ್ಟೋರೆಂಟ್‌ಗಳಿಗೆ ಗೈಡ್​ಲೈನ್ಸ್​

ಪಬ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಸೂಕ್ತ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳವುದು. ಕಾರ್ಯಕ್ರಮಕ್ಕೆ ಬರುವ ಗ್ಯಾಹಕರ ಬ್ಯಾಗ್ ಮತ್ತು ಲಗೇಜ್ ಚೆಕ್ ಮಾಡೋದು. ಆಯುಧ, ಸ್ಫೋಟಕ, ಗಾಂಜಾ, ಮಾದಕ ವಸ್ತು ಇಲ್ಲದಿರುವ ಖಚಿತ ಪಡಿಸಿಕೊಳ್ಳುವುದು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ ಪ್ರವೇಶ ನೀಡಬಾರದು. ಮದ್ಯಪಾನ ಮಾಡಿದವರು ಸುಧಾರಿಸಿಕೊಳ್ಳಲು ಐಸ್‌ಲ್ಯಾಂಡ್ ಸ್ಥಳ ಇರ್ಬೇಕು. ಮಹಿಳೆಯರ ಭದ್ರತೆ, ಸುರಕ್ಷತೆಗಾಗಿ ಮಹಿಳಾ ಬೌನ್ಸರ್​ಗಳ ನೇಮಕ ಮಾಡ್ಬೇಕು, ಅದಲ್ಲದೇ ಅನುಚಿತವಾಗಿ ವರ್ತಿಸುವ ಮಹಿಳೆಯರನ್ನು ಮನೆಗೆ ಕಳುಹಿಸಬೇಕು. ಮುಖ್ಯವಾಗಿ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಮತ್ತು ಧ್ವನಿವರ್ಧಕ ಬಳಸಲು ಪೊಲೀಸ್ ಇಲಾಖೆಯ ಅನುಮತಿ ಪಡೆಯಬೇಕು.

ಸದ್ಯ ಪಿಜಿ, ಪಬ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಗೈಡ್‌ಲೈನ್ಸ್‌ ಹೊರಡಿಸಲು ಮುಂದಾಗಿರೋ ಪೊಲೀಸ್ರು, ಜನ್ರಿಗೂ ಕೆಲವೊಂದಿಷ್ಟು ಮಾರ್ಗಸೂಚಿ ನೀಡೋದ್ರಲ್ಲಿ ಡೌಟೇ ಇಲ್ಲ. ಗೈಡ್‌ಲೈನ್ಸ್‌ ಫಾಲೋ ಮಾಡಿದ್ರೆ ಓಕೆ. ಪಾಲಿಸಲಿಲ್ಲ ಅಂದ್ರೆ ಕಾನೂನು ಕ್ರಮ ಆಗೋದಂತು ಪಕ್ಕಾ.

ಇದನ್ನೂ ಓದಿ:ನೋಡುವಷ್ಟು ನೋಡಿ ತಾಳ್ಮೆ ಕಳೆದುಕೊಂಡ ಕೊಹ್ಲಿ; ಏರ್ಪೋರ್ಟ್​ನಲ್ಲಿ ಮಹಿಳೆಗೆ ತರಾಟೆ ತೆಗೆದುಕೊಂಡಿದ್ದೇಕೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment