Advertisment

ಡೆಂಘೀ ಬೆನ್ನಲ್ಲೇ ಡೇಂಜರಸ್​​ ವೈರಸ್​ ಎಂಟ್ರಿ.. ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

author-image
Ganesh Nachikethu
Updated On
ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಘೀ ಜ್ವರ.. ಬೆಂಗಳೂರು, ಮೈಸೂರಿನಲ್ಲಿ ಎಷ್ಟು ಪ್ರಕರಣಗಳು ಪತ್ತೆಯಾಗಿವೆ ಗೊತ್ತಾ?
Advertisment
  • ಕೋವಿಡ್​​ 19 ಆಯ್ತು.. ಈಗ ಝೀಕಾ ವೈರಸ್​ ಎಂಟ್ರಿ!
  • ಡೆಂಘೀ ಜೊತೆ ಆಟ ಶುರುಮಾಡಿದ ಝೀಕಾ ವೈರಸ್
  • ಝೀಕಾ ಬಗ್ಗೆ ಮುಂಜಾಗ್ರತವಾಗಿ ಇರುವಂತೆ ಸೂಚನೆ

ಡೆವಿಲ್​ ಡೆಂಘೀ ಜ್ವರ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಈ ಮಧ್ಯೆ ಮತ್ತೊಂದು ಡೇಂಜರಸ್​​ ಝೀಕಾ ವೈರಸ್​ ಮತ್ತಷ್ಟು ಉಸಿರು ಬಿಗಿಯಾಗಿಸ್ತಿದೆ. ಈಗಾಗಲೇ ಝೀಕಾ ವೈರಸ್​​ಗೆ ವೃದ್ಧ ಬಲಿಯಾಗಿದ್ದು, ನಡುಕ ಹೆಚ್ಚಾಗ್ತಿದೆ. ಈ ಬೆನ್ನಲ್ಲೇ ಅಲರ್ಟ್​​ ಆದ ಆರೋಗ್ಯ ಇಲಾಖೆ ಝೀಕಾ ಬಗ್ಗೆ ಹೆಲ್ತ್​​ಗೈಡ್​ಲೈನ್​ ರಿಲೀಸ್​​ ಮಾಡಿದೆ.

Advertisment

‘ಝೀಕಾ’ ಡೆಂಘೀ ಹಾಗಲ್ಲ. ಕೋವಿಡ್​​ ವೈರಸ್​ ಇದ್ದಂತೆ. ಡೆಂಘೀಯಂತೆ ಬೆಳ್ಳಗ್ಗೆ ಹೊತ್ತು ಕಚ್ಚೋ ಈಡಿಸ್​ ಸೊಳ್ಳೆಯಿಂದ್ಲೇ ಝೀಕಾ ವೈರಸ್​​ ಸೋಂಕು ಕಾಣಿಸಿಕೊಳುತ್ತೆ. ಬಳಿಕ ಕೋವಿಡ್​ನಂತೆ ಹರಡುತ್ತೆ. ಹೀಗಾಗಿ ಅಲರ್ಟ್​ ಆದ ಆರೋಗ್ಯ ಇಲಾಖೆ ಝೀಕಾ ಬಗ್ಗೆ ಮುಂಜಾಗ್ರತಾ ಕ್ರಮವಹಿಸಿ ಅಂತ ಹೆಲ್ತ್ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ.

ಝೀಕಾ ಗುಣಲಕ್ಷಣ

ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ಗಂಧೆಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಝೀಕಾ ಗುಣಲಕ್ಷಣಗಳು. ಒಂದು ವೇಳೆ ಝೀಕಾ ಬಂದ್ರೆ 2 ರಿಂದ 7 ದಿನಗಳ ವರೆಗೆ ಇರುತ್ತೆ. ಈ ಸೋಂಕು ಗರ್ಭಿಣಿಯರಲ್ಲಿ ಕಾಣಿಸಿಕೊಂಡ್ರೆ ಹುಟ್ಟುವ ಮಕ್ಕಳಲ್ಲಿ ಬೆಳವಣಿಗೆ ದೋಷ ಕಂಡು ಬರಲಿದ್ಯಂತೆ.

‘ಝೀಕಾ’ ತಡೆಗಟ್ಟುವಿಕೆ

ಝೀಕಾ ವೈರಸ್​​ಗೆ ನಿರ್ಧಿಷ್ಟ ಚಿಕಿತ್ಸೆ ಇರೋದಿಲ್ಲ. ರೋಗ ಲಕ್ಷಣ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು. ಮನೆಯಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುವುದು. ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನಾಂಶವಿರುವ ಆಹಾರ ಸೇವಿಸುವುದು. ರೋಗ ಲಕ್ಷಣಗಳು ಹೆಚ್ಚಾದ್ರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಅದ್ರಂತೆ ಸೋಂಕಿತರು ಮಲಗುವಾಗ ಸೊಳ್ಳೆ ಪರದೆಯನ್ನು ಬಳಸುವುದು ಮುಖ್ಯ.

Advertisment

‘ಝೀಕಾ’ ಮುಂಜಾಗ್ರತಾ ಕ್ರಮ

ಈಡಿಸ್​ ಸೊಳ್ಳೆಗಳು ಕಚ್ಚುವಿಕೆಯಿಂದ ಪಾರಾಗಲು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು. ಮನೆ ಒಳಾಂಗಣ ಮತ್ತು ಹೊರಾಂಗಣವನ್ನ ಸ್ವಚ್ಚವಾಗಿಟ್ಟುಕೊಳ್ಳುವುದು. ನೀರು ಸಂಗ್ರಹಣಾ ಪರಿಕರಗಳನ್ನ ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದು. ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಉಪಯೋಗಿಸುವುದು.

ಇದನ್ನೂ ಓದಿ:ಮೈಸೂರಲ್ಲಿ 3 ದಿನಕ್ಕೆ ಡೆಂಘೀಗೆ 2ನೇ ಬಲಿ; ಜಯದೇವ ಹೃದ್ರೋಗ ಆಸ್ಪತ್ರೆ ಸಿಬ್ಬಂದಿ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment