Advertisment

ಹೃದಯಾಘಾತ.. ಮಂಡ್ಯ ಕಬಡ್ಡಿ ಪಂದ್ಯಾವಳಿ ಬಳಿಕ ರಾಜ್ಯಮಟ್ಟದ ಆಟಗಾರ ದುರಂತ ಅಂತ್ಯ

author-image
admin
Updated On
ಹೃದಯಾಘಾತ.. ಮಂಡ್ಯ ಕಬಡ್ಡಿ ಪಂದ್ಯಾವಳಿ ಬಳಿಕ ರಾಜ್ಯಮಟ್ಟದ ಆಟಗಾರ ದುರಂತ ಅಂತ್ಯ
Advertisment
  • ಸಾಯುವ ಕೆಲ ಕ್ಷಣಗಳ ಮುನ್ನ ಕಬ್ಬಡಿ ಆಡಿದ್ದ ಪ್ರೀತಮ್ ಶೆಟ್ಟಿ
  • ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ 24 ವರ್ಷದ ಕಬಡ್ಡಿ ಆಟಗಾರ
  • ಉಡುಪಿ ಜಿಲ್ಲೆ ಹೆಬ್ರಿ ಮೂಲದ ಪ್ರೀತಮ್ ಶೆಟ್ಟಿ ದಾರುಣ ಅಂತ್ಯ

ಮಂಡ್ಯ: ರಾಜ್ಯ ಮಟ್ಟದ ಆಟಗಾರ ಕಬಡ್ಡಿ ಪಂದ್ಯಾವಳಿ ಬಳಿಕ ಸಾವನ್ನಪ್ಪಿರುವ ದಾರುಣ ಘಟನೆ ನಾಗಮಂಗಲದಲ್ಲಿ ನಡೆದಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.

Advertisment

ಉಡುಪಿ ಜಿಲ್ಲೆ ಹೆಬ್ರಿ ಮೂಲದ ಪ್ರೀತಮ್ ಶೆಟ್ಟಿ ಅವರು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಕಬಡ್ಡಿ ಪಂದ್ಯಾವಳಿ ಮುಗಿದ ಮೇಲೆ ಪ್ರೀತಂ ಶೆಟ್ಟಿ ಅವರು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ. ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರೀತಮ್ ಶೆಟ್ಟಿ ಅವರ ಮೃತದೇಹ ಇರಿಸಲಾಗಿದೆ.

publive-image

ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ಅವರಿಗೆ 24 ವರ್ಷ. ಸಣ್ಣ ವಯಸ್ಸಿನಲ್ಲೇ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಕಬಡ್ಡಿ ಆಟಗಾರನಾಗಿ ಸಾಕಷ್ಟು ಹೆಸರು ಮಾಡುವ ಆಸೆ ಹೊಂದಿದ್ದ ಪ್ರೀತಮ್ ಶೆಟ್ಟಿ ಅವರು ದುರಂತ ಅಂತ್ಯ ಕಂಡಿದ್ದಾರೆ. ಪ್ರೀತಮ್ ಶೆಟ್ಟಿ ಅವರು ಸಾಯುವ ಕೆಲ ಕ್ಷಣಗಳ ಮುನ್ನ ಕಬ್ಬಡಿ ಆಡುತ್ತಿರುವ ವಿಡಿಯೋ ಮನಕಲಕುವಂತಿದೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಬಿಡುಗಡೆ ತಡ ಆಗಿದ್ದೇಕೆ? ಸೇಡು ತೀರಿಸಿಕೊಂಡ್ರಾ ತೆಲಂಗಾಣ ಸಿಎಂ? ಕಾರಣ ಆ ಘಟನೆ 

Advertisment

ಹನುಮ ಜಯಂತಿ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಸಲಾಗಿತ್ತು. ಕೊನೇ ಬಾರಿಗೆ ಕಬಡ್ಡಿ ಆಟದಲ್ಲಿ ಪಾಲ್ಗೊಂಡಿದ್ದ ಪ್ರೀತಮ್ ಶೆಟ್ಟಿ ಅವರು ಸಣ್ಣ ವಯಸ್ಸಿಗೆ ಜೀವ ಕಳೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment