newsfirstkannada.com

ದೇವಸ್ಥಾನ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ.. ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ

Share :

Published July 25, 2024 at 6:39am

    ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಡಿಸಿ ಕಚೇರಿ ನೌಕರ

    ಭರ್ತಿಯಾಗುವ ಹಂತ ತಲುಪಿದ ನಾರಾಯಣಪುರ ಜಲಾಶಯ

    ವರುಣಾ ಇಂದು ಸಹ ಶಾಲೆಗಳಿಗೆ ಬೀಗ ಬೀಳುವಂತೆ ಮಾಡಿದ್ದಾನೆ

ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಜಲರಾಶಿಯ ಬಲೆ ಬೀಸಿ ಕರುನಾಡನ್ನ ಕಂಗೊಳಿಸುವಂತೆ ಮಾಡಿದ್ದಾನೆ. ವರುಣಾರ್ಭಟಕ್ಕೆ ತುಂಬಿ ತುಳುಕುತ್ತಿರೋ ಹಳ್ಳ-ಕೊಳ್ಳಗಳು ಅನ್ನದಾತರ ಮೊಗದಲ್ಲಿ ಮಂದಹಾಸತುಂಬಿವೆ. ಜಲಾಶಯಗಳು ಭರ್ತಿಯಾಗುವ ಹಂತ ತಲುಪಿವೆ.

ಪ್ರಸಿದ್ಧ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತ!

ಬಾಗಲಕೋಟೆಯ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಅಪಾರ ಪ್ರಮಾಣದ‌ ನೀರು ಬಿಡುಗಡೆ ಮಾಡಲಾಗ್ತಿದೆ. ಈ ಹಿನ್ನೆಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಘಟಪ್ರಭಾ ನದಿ ದಂಡೆ‌‌ಯ ಮೇಲಿರುವ ಪ್ರಸಿದ್ಧ ಹೊಳೆ ಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 8 ಶವ ಹೊರಕ್ಕೆ, ಪತ್ತೆಯಾಗದ ಇನ್ನೂ ಮೂರು ಜನ

ಸೇತುವೆಯಿಂದ ನದಿಗೆ ಹಾರಿದ ಡಿಸಿ ಕಚೇರಿ ನೌಕರ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರ ನದಿಗೆ ಹಾರಿರೋ ಘಟನೆ ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಕೊಪ್ಪ ಸೇತುವೆ ಬಳಿ ನಡೆದಿದೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ನದಿಗೆ ಹಾರಿ ಕೊಚ್ಚಿಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸೇತುವೆಯ ಬಳಿ ಅರುಣ್​ಗೆ ಸೇರಿದ ಗುರುತಿನ ಚೀಟಿ ಹಾಗೂ ದಾಖಲೆ ಪತ್ತೆಯಾಗಿದೆ. ಅರುಣ್​ಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಭರ್ತಿಯಾಗುವ ಹಂತ ತಲುಪಿದ ನಾರಾಯಣಪುರ ಜಲಾಶಯ

ರಾಯಚೂರಿನ ನಾರಾಯಣಪುರ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ ಹಿನ್ನೆಲೆ ಕೃಷ್ಣಾ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗ್ತಿದೆ. 25 ಗೇಟ್​ಗಳಿಂದ 2 ಲಕ್ಷ ಕ್ಯೂಸೆಕ್​ ನೀರನ್ನ ‌ಕೃಷ್ಣಾ ನದಿಗೆ ಬಿಡಲಾಗ್ತಿದೆ.. 33 TMC ಸಾಮರ್ಥ್ಯದ ಜಲಾಶಯದಲ್ಲಿ 26 TMC ನೀರು ಸಂಗ್ರಹವಾಗಿದೆ. ಕೃಷ್ಣಾ ನದಿ ತೀರದ ಜನರು ಎಚ್ಚರದಿಂದ ಇರುವಂತೆ ರಾಯಚೂರು ಜಿಲ್ಲಾಡಳಿತ ಸೂಚನೆ ನೀಡಿದೆ.

ಇದನ್ನೂ ಓದಿ: PHD ವಿದ್ಯಾರ್ಥಿಗೆ ಸರ್ಕಾರದಿಂದ ಅನ್ಯಾಯ; ಮಗಳ ಫೀಸ್​ಗಾಗಿ ಕಿಡ್ನಿ ಮಾರಲು ಮುಂದಾದ ಪೋಷಕರು

ಹಂಪಿಯ ಐತಿಹಾಸಿಕ ಸ್ಮಾರಕ ಮಂಟಪ ಜಲಾವೃತ

ವಿಜಯನಗರದ ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿರೋ ಹಿನ್ನೆಲೆ ಹೊಸಪೇಟೆ ತಾಲೂಕಿನ ಹಂಪಿಯ ಐತಿಹಾಸಿಕ ಸ್ಮಾರಕ ಮಂಟಪ ಸಂಪೂರ್ಣ ಜಲಾವೃತವಾಗಿದೆ. ವಿಧಿ ವಿಧಾನ ಮಂಟಪ, ಸ್ನಾನ ಗೃಹ‌ಗಳು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಕಂಬಳಿ, ಬೆಡ್ ಶೀಟ್, ಜಮ್ಕಾನ.. ಜೈಲಿನಲ್ಲಿ ದರ್ಶನ್‌ಗೆ ನಿಜಕ್ಕೂ ನರಕ; ಬಿಡುಗಡೆಯಾದ ಸಹಕೈದಿ ಹೇಳಿದ್ದೇನು?

ಮುಂದುವರೆದ ಮಳೆ ಅಬ್ಬರ.. ಬಂದ್ ಆಯ್ತು ಶಾಲೆಗಳು

ಮಳೆಗೂ ಶಾಲೆಗೂ ಅವಿನಾಭಾವ ಸಂಬಂಧ ಅನ್ನೋಹಾಗೆ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ಇಂದು ಸಹ ಶಾಲೆಗಳಿಗೆ ಬೀಗ ಬೀಳುವಂತೆ ಮಾಡಿದ್ದಾನೆ.

ಇದನ್ನೂ ಓದಿ: ವೃತ್ತಿಯಲ್ಲಿ ಭಾರೀ ಅವಮಾನ; ಈ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಿ; ಇಲ್ಲಿದೆ ಇಂದಿನ ಭವಿಷ್ಯ

ಶಾಲಾ-ಕಾಲೇಜಿಗೆ ರಜೆ

ಉತ್ತರ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆಯಾಗ್ತಿರೋ ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ, ಕುಮಟಾ, ಭಟ್ಕಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕಿನ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರೆದ ಹಿನ್ನೆಲೆ ಇಂದು ಮತ್ತು ನಾಳೆ ಬೆಳಗಾವಿ, ಬೈಲಹೊಂಗಲ, ಖಾನಾಪುರ, ಕಿತ್ತೂರು, ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗಿನಲ್ಲೂ ಭಾರೀ ಮಳೆ ಹಿನ್ನಲೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಮತ್ತು ಟಿ. ಶೆಟ್ಟಿಗೇರಿ ಕ್ಲಸ್ಟರ್‌ನ 40 ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ. ಇನ್ನೂ ಧಾರವಾಡದಲ್ಲಿ ನಿರಂತರ ಮಳೆ ಹಿನ್ನೆಲೆ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಮಳೆಗಾಗಿ ಪ್ರಾರ್ಥಿಸಿ ಹೊಳಿಗೆ ಅಮ್ಮ ದೇವಿಗೆ ವಿಶೇಷ ಪೂಜೆ

ರಾಜ್ಯದ ಹಲವೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿರೋ ವರುಣಾ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಮೇಲೆ ಮಾತ್ರ ಕೃಪೆತೋರಿಲ್ಲ. ಅರ್ಧ ಮಳೆಗಾಲ ಕಳೆದರೂ ಮಳೆ ಬಾರದ ಕಾರಣ ಕಂಗಾಲಾಗಿರೋ ಚಂದ್ರಶೇಖರಪುರ ಗ್ರಾಮದ ಜನರು ಮಳೆಗಾಗಿ ಪ್ರಾರ್ಥಿಸಿ ಹೊಳಿಗೆ ಅಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ಮನೆಯೂಟ ಕೊಡಿಸಲು ಪತ್ನಿ ವಿಜಯಲಕ್ಷ್ಮಿ ದಿಟ್ಟ ಹೋರಾಟ; ಡಿಸಿಎಂ ಭೇಟಿಯಾಗಿದ್ದೇಕೆ?

ಒಟ್ಟಿನಲ್ಲಿ ಕೆಲವೆಡೆ ಮಳೆ ಇನ್ನೂ ಆರಂಭದ ಹಂತದಲ್ಲಿದ್ರೂ ಹಲವೆಡೆ ಅಬ್ಬರಿಸಿ ಬೊಬ್ಬಿರಿದು ಜನರನ್ನ ತಲ್ಲಣಗೊಳಿಸಿದೆ. ಕಳೆದ ಬಾರಿ ಕೈಕೊಟ್ಟಿದ್ದ ವರುಣಾ ಈ ಬಾರಿ ಕೃಪೆತೋರಿದ್ದನ್ನ ಕಂಡು ರಾಜ್ಯದ ಅನ್ನದಾತರು ಫುಲ್ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವಸ್ಥಾನ ಜಲಾವೃತ, ಶಾಲಾ-ಕಾಲೇಜುಗಳಿಗೆ ರಜೆ.. ರಾಜ್ಯದಲ್ಲಿ ಮುಂದುವರೆದ ವರುಣಾರ್ಭಟ

https://newsfirstlive.com/wp-content/uploads/2024/07/hampi-smaraka.jpg

Load More