Advertisment

ರಾಜ್ಯದಲ್ಲಿ ಮಳೆಯ ಅಬ್ಬರ, ನೂರಾರು ಎಕರೆ ಬೆಳೆ ಜಲಮಯ.. ಭೂಕುಸಿತದ ಆತಂಕ

author-image
AS Harshith
Updated On
ಶಿರೂರು ಗುಡ್ಡ ಕುಸಿತದಲ್ಲಿ ತುಂಬಾ ಸಾವು, ನೋವು.. ಮೃತರ ಸಂಖ್ಯೆ 12ಕ್ಕೆ ಏರಿಕೆ ಸಾಧ್ಯತೆ.. ಆಗಿದ್ದೇನು..
Advertisment
  • ಬಿರುಗಾಳಿ ಮಳೆಗೆ ಹಾರಿ ಹೋದ ಮನೆಯ ಮೇಲ್ಛಾವಣಿಗಳು
  • ಕಾಫಿನಾಡಲ್ಲಿ ವರುಣನ ಆರ್ಭಟ.. ಜನ ಜೀವನಕ್ಕೆ ಸಂಕಷ್ಟ
  • ಮುಂಗಾರು ಮಳೆಯ ಅನಾಹುತದ ದೃಶ್ಯಗಳು ಇಲ್ಲಿವೆ

ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಅವಾಂತರಗಳು ಸೃಷ್ಟಿಯಾಗಿದೆ. ನದಿಗಳ ಅಬ್ಬರಕ್ಕೆ ರೈತರ ಬೆಳೆ ಹಾನಿ ಸಂಭವಿಸಿದೆ. ಮನೆಗಳು ಕುಸಿಯುತ್ತಿವೆ. ಅಲ್ಲಲ್ಲಿ ಸಂಭವಿಸುತ್ತಿರುವ ಭೂಕುಸಿತ ಜನರನ್ನು ಆತಂಕಕ್ಕೆ ತಳ್ಳಿದೆ.

Advertisment

ವಿಜಯನಗರ

ಹೊಸಪೇಟೆ ಬಳಿ ಇರೋ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು ಜಲವೈಭವ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರ್ತಿದೆ. ಇದೇ ಹೊತ್ತಲ್ಲೇ ಪ್ರವಾಸಿಗರು ಡ್ಯಾಂ ಹಿನ್ನೀರಿನಲ್ಲಿ ಹುಚ್ಚಾಟ ಮೆರೆಯುತ್ತಿದ್ದಾರೆ. ಜಲಾಶಯ ತುಂಬಿತುಳುಕುತ್ತಿದ್ರೆ ಬೃಹತ್ ಮೊಸಳೆಗಳು ಕೂಡ ಜಲಾಶಯದಲ್ಲಿವೆ. ಹೀಗಿದ್ರೂ ಸ್ವಲ್ಪವೂ ಆತಂಕವಿಲ್ಲದೇ ಜನರು ನೀರಿಗಿಳಿದು ಮೋಜಿನಾಟ ಆಡುತ್ತಿದ್ದಾರೆ.

publive-image

ಬಾಗಲಕೋಟೆ:

ಇತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭೆಯ ಪ್ರವಾಹ ರೈತರ ಬೆಳೆಗಳನ್ನು ಮುಳಿಗಿಸಿದೆ. ಬೀಳಗಿಯ ಕಾತರಕಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ತಹಶೀಲ್ದಾರ್ ಸುಹಾಸ್ ಇಂಗಳೆ ಪರಿಶೀಲನೆಗೆ ತೆರಳಿದ್ದ ವೇಳೆ ರೈತರ ಆಕ್ರೋಶದ ಕಟ್ಟೆಯೊಡೆದಿದೆ. ಚೆಂಡು ಹೂವು, ಗೋವಿನಜೋಳ, ಕಬ್ಬು ಬೆಳೆ ಹಾನಿ ಸಂಭವಿಸಿದ್ದು ಪರಿಹಾರ ಕೊಡಿ ಇಲ್ಲ, ನೇಣು ಹಾಕಿಕೊಳ್ಳಲು ಹಗ್ಗ ಕೊಡಿ ಅಂತ ರೈತನೋರ್ವ ಪಟ್ಟು ಹಿಡಿದು ಕುಳಿತ ಪ್ರಸಂಗ ಮನಕಲಕುವಂತಿದೆ.

publive-image

ಉತ್ತರ ಕನ್ನಡ:

ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ಬಿರುಗಾಳಿ ಮಳೆಗೆ ಅಂಕೋಲದ ಹಾರವಾಡ ಸೀಬರ್ಡ್ ಕಾಲೋನಿಯಲ್ಲಿ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ಕೆಲವರ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಮಳೆ ನೀರು ಬಿದ್ದು ಮನೆಯಲ್ಲಿದ್ದ ವಸ್ತುಗಳಿಗೂ ನಷ್ಟ ಸಂಭವಿಸಿದ್ದು ನಿವಾಸಿಗಳು ಕಂಗಾಲಾಗಿದ್ದಾರೆ.

Advertisment

publive-image

ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು ನಿನ್ನೆ ರಾತ್ರಿಯಿಂದಲೇ ನಾಲೆಗಳಿಗೆ ನೀರು ಹರಿಸಲಾಗ್ತಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮಲವಗೊಪ್ಪದ ಭದ್ರಾ ಕಚೇರಿಯಲ್ಲಿ ಸಭೆ ನಡೆಸಿದ್ದರು. ನೀರಿನ ಲಭ್ಯತೆ ಹಾಗೂ ಮಳೆಯ ಪ್ರಮಾಣ ಆಧರಿಸಿ ಬಲ ಹಾಗೂ ಎಡ ದಂಡೆಯ ನಾಲೆಗಳಿಗೆ ನೀರು ಹರಿಸಲು ಸೂಚಿಸಿದ್ದರು.

publive-image

ಅತ್ತ ಕೊಡಗು ಭಾಗದಲ್ಲಿ ಮಳೆ ಮುಂದುವರಿದಿದ್ದು ಇಂದು ಕೂಡ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇತ್ತ ಮಂಡ್ಯದ ಕನ್ನಂಬಾಡಿ ಕಟ್ಟೆ ಭರ್ತಿಯಾಗಿದ್ದು 68 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗ್ತಿದ್ದು ನೀರು ಭೋರ್ಗರೆಯುತ್ತಿರುವ ಮನಮೋಹಕ ದೃಶ್ಯ ನ್ಯೂಸ್​ಫಸ್ಟ್​ಗೆ ಲಭ್ಯ ಆಗಿದೆ.

publive-image

ಒಟ್ಟಾರೆ, ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಿಗೆ ಜೀವಕಳೆ ಬಂದಿದ್ದು ಖುಷಿ ತಂದಿದೆ, ಮತ್ತೊಂದೆಡೆ ಪ್ರವಾಹದಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ನ್ಯೂಸ್ ಫಸ್ಟ್ ಬ್ಯೂರೋ

Advertisment
Advertisment
Advertisment
Advertisment