/newsfirstlive-kannada/media/post_attachments/wp-content/uploads/2024/10/malaprabha.jpg)
ಮುಂಗಾರು, ಹಿಂಗಾರು ಮಳೆಯ ಅಬ್ಬರ ಏನು ಕಮ್ಮಿಯಾಗಿಲ್ಲ. ರಸ್ತೆಗಳೆಲ್ಲಾ ಹೊಳೆಯಂತಾಗಿವೆ. ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡ್ತಿದ್ದಾರೆ. ಜಮೀನುಗಳಿಗೆ ಜಲದಿಗ್ಬಂಧನವಾಗಿದೆ. ಅಪಾರ ಪ್ರಮಾಣ ಬೆಳೆ ಹಾನಿಯಾಗಿ ರೈತರ ಕಣ್ಣಂಚಿನಲ್ಲಿ ನೀರು ತುಂಬಲಾರಂಭಿಸಿದೆ.
ಮಳೆ ಎಫೆಕ್ಟ್.. ಕಾಲು ಜಾರಿ ಮಲಪ್ರಭಾ ನದಿಗೆ ಬಿದ್ದ ಯುವಕ
ಬೆಳಗಾವಿಯಲ್ಲಿ ಮಳೆಯ ಎಫೆಕ್ಟ್​ಗೆ ಬೈಲಹೊಂಗಲ ತಾಲೂಕಿನ ಜಾಲಿಕೊಪ್ಪ ಬಳಿ ಯುವಕ ಸತೀಶ್ ಕುಸಲಾಪುರ ಕಾಲು ಜಾರಿ ಮಲಪ್ರಭಾ ನದಿಗೆ ಬಿದ್ದಿದ್ದಾನೆ. ಸತೀಶ್​ಗಾಗಿ ಅಗ್ನಿಶಾಮಕ ಸಿಬ್ಬಂದಿ, ಬೈಲಹೊಂಗಲ ಪೊಲೀಸರ ಶೋಧ ಕಾರ್ಯ ಮುಂದುವರೆದಿದೆ.
ಬೆಣ್ಣೆಹಳ್ಳ ಪ್ರವಾಹಕ್ಕೆ ಸಿಲುಕಿದ್ದ ಲಕ್ಷ್ಮಣ ಬಾರಕೇರ್ ರಕ್ಷಣೆ
ಮಳೆರಾಯನ ಅವಾಂತರ ಧಾರವಾಡದಲ್ಲೂ ಹೆಚ್ಚಾಗಿದೆ. 2 ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿದ್ದ ಲಕ್ಷ್ಮಣ ಬಾರಕೇರ್​ ಎಂಬಾತ ನವಲಗುಂದದ ಕಾಲವಾಡ ಗ್ರಾಮದ ಬೆಣ್ಣೆಹಳ್ಳ ಪ್ರವಾಹದಲ್ಲಿ ಸಿಲುಕಿದ್ದ. ಸದ್ಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಲಕ್ಷ್ಮಣನ ರಕ್ಷಣೆಯಾಗಿದೆ.
ರಾತ್ರಿ ಸುರಿದ ಭಾರೀ ಮಳೆಗೆ 30 ಹೆಚ್ಚು ಮನೆಗೆ ನುಗ್ಗಿದ ನೀರು!
ಚಿತ್ರದುರ್ಗದಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಆಗ್ತಿದ್ದು, ಚಳ್ಳಕೆರೆ ನಗರದ ಬೊಮ್ಮಸಂದ್ರ ರಸ್ತೆಯ ಮೈರಾಡ ಕಾಲೋನಿಯ . ಮನೆಯಲ್ಲಿ ದವಸ ಧಾನ್ಯ ಸೇರಿದಂತೆ ಮಕ್ಕಳ ಶಾಲಾ ಪಠ್ಯ ಪುಸ್ತಕಗಳು ನೀರುಪಾಲಾಗಿವೆ..
ಹೊಲಗದ್ದೆಗಳಲ್ಲಿ ನಿಂತ ನೀರು.. ಹಲವು ಬೆಳೆಗಳಿಗೆ ಹಾನಿ!
ಬಾಗಲಕೋಟೆಯಲ್ಲಿ ಮಳೆಗೆ ನಗರದ ರೈಲ್ವೆ ನಿಲ್ದಾಣದ ಹೊರವಲಯವನ್ನ ಮುಳುಗಿಸಿದೆ. ಬೆಳೆದ ಈರುಳ್ಳಿ, ಜೋಳ ಸೇರಿ ಹಲವು ಬೆಳೆಗಳು ಹಾನಿಗೊಂಡಿದ್ದು, ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ..
ಮೇಲ್ದಂಡೆ ಕಾಲುವೆ ಢಮಾರ್, ಹೊಳೆಯಂತೆ ಹರಿದ ನೀರು
ಎಡಬಿಡದೇ ಸುರಿದ ಭಾರೀ ಮಳೆಗೆ ಹಾವೇರಿಯ ಕನಕಪುರ ಹತ್ತಿರ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಹೋಗಿದೆ. ಕಾಲುವೆ ನೀರು ಹೊಳೆಯಂತೆ ಹರಿಯುತ್ತಿದ್ದು, ಸಾವಿರಾರು ಎಕರೆ ಪ್ರದೇಶಕ್ಕೆ ನುಗ್ಗಿದ ನೀರು ಬೆಳೆಗಳನ್ನ ನುಂಗಿಹಾಕಿದೆ..
ಮಲಪ್ರಭಾ ನದಿ-ಬೆಣ್ಣೆ ಹಳ್ಳ ಅಬ್ಬರ.. ಹೊಳೆಯಂತಾದ ಜಮೀನು
ಭಾರಿ ಮಳೆಗೆ ಮಲಪ್ರಭಾ ನದಿ-ಬೆಣ್ಣೆ ಹಳ್ಳ ಅಬ್ಬರ ದಿನೇ ದಿನೆ ಹೆಚ್ಚಾಗ್ತಿದೆ. ಗದಗ ಜಿಲ್ಲೆ ನರಗುಂದ, ರೋಣ ತಾಲೂಕಿನ ಹಲವು ಗ್ರಾಮದ ರೈತರ ಜಮೀನುಗಳು ಕೆರೆಯಂತಾಗಿದ್ದು, ರೈತರು ಕಂಗಾಲಾಗಿದ್ದಾರೆ..
ಒಟ್ಟಾರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆನೂ ತಗ್ಗಿಲ್ಲ. ಮಳೆಯ ಅವಾಂತರನೂ ತಗ್ಗಿಲ್ಲ. ಈಗ ಮತ್ತೆ ಹವಾಮಾನ ಇಲಾಖೆಯು ಮಳೆ ಮುನ್ಸೂಚನೆ ನೀಡಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ