25 ನಿಮಿಷಕ್ಕೆ 1 ಮೆಟ್ರೋ ಟ್ರೈನ್​​.. ಹಳದಿ ಮಾರ್ಗ ಪರಿಶೀಲಿಸಿದ DCM ಡಿ.ಕೆ ಶಿವಕುಮಾರ್​, ಏನ್ ಹೇಳಿದರು?

ಆಗಸ್ಟ್​ 10 ರಂದು ಪ್ರಧಾನಿ ಮೋದಿ ಅವರು ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್​​.ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ ಪರಿಶೀಲನೆ ಮಾಡಲಾಯಿತು ಎಂದು ಡಿಸಿಎಂ ತಿಳಿಸಿದ್ದಾರೆ.

author-image
Bhimappa
DK_SHIVAKUMAR_METRO
Advertisment

ಬೆಂಗಳೂರು: ನಗರದ ಆರ್​​.ವಿ ರಸ್ತೆಯಿಂದ ಬೊಮ್ಮಸಂದ್ರದ ಮಧ್ಯೆ ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line)ಕ್ಕೆ ಆ.10 ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಇವತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹಳದಿ ಮಾರ್ಗ ಮೆಟ್ರೋವನ್ನು ಪರಿಶೀಲನೆ ಮಾಡಿದರು. ಜೊತೆಗೆ ಪ್ರತಿ 25 ನಿಮಿಷಕ್ಕೆ ಒಂದು ಮೆಟ್ರೋ ಸಂಚಾರ ಮಾಡಲಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು, ಆಗಸ್ಟ್​ 10 ರಂದು ಪ್ರಧಾನಿ ಮೋದಿ ಅವರು ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್​​.ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗೆ ಪರಿಶೀಲನೆ ಮಾಡಲಾಯಿತು ಎಂದು ತಿಳಿಸಿದ್ದಾರೆ.   

DK_SHIVAKUMAR (1)

ಇನ್ನು ಈ ಹಳದಿ ಮಾರ್ಗದಲ್ಲಿ ಪ್ರತಿ 25 ನಿಮಿಷಕ್ಕೆ ಒಂದು ಮೆಟ್ರೋ ಟ್ರೈನ್ ಸಂಚಾರ ಮಾಡುತ್ತದೆ. ಒಟ್ಟು 19.15 ಕಿಲೋ ಮೀಟರ್​ ಉದ್ದವಿದ್ದು 16 ಮೆಟ್ರೋ ನಿಲ್ದಾಣಗಳು ಇವೆ. ಆರಂಭಿಕವಾಗಿ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಇದೇ ತಿಂಗಳಿನಿಂದ ಮತ್ತೊಂದು 4ನೇ ಮೆಟ್ರೋ ರೈಲು ಸಂಚಾರ ಆರಂಭ ಮಾಡಲಿದೆ ಎಂದು ಹೇಳಿದ್ದಾರೆ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Organ Transport Metro DK Shivakumar Namma metro
Advertisment