ಸಿಎಂ ಸಿದ್ದರಾಮಯ್ಯ ಆಕಾಶದಿಂದ ನೋಡ್ತಾರೋ, ಭೂಮಿಯಿಂದ ನೋಡ್ತಾರೋ ಉತ್ತರ ಕರ್ನಾಟಕಕ್ಕೆ ಹೋಗುವುದಕ್ಕಿಂತ ಮೊದಲು ಸರ್ಕಾರದ ಪರಿಹಾರ ಹಣದ ಬಗ್ಗೆ ಹೇಳಲಿ. ಮನೆಗಳಿಗೆ, ಬೆಳೆಗಳಿಗೆ ಎಷ್ಟು ಪರಿಹಾರ ಕೊಡುತ್ತೀರಿ. ಹಿಂದೆ ಬಿಜೆಪಿ ಸರ್ಕಾರ ಕೊಟ್ಟಿದ್ದಕ್ಕಿಂತ ಹೆಚ್ಚಿಗೆ ಕೊಡುತ್ತಾರೆ ಎಂದು ಜನ ಕಾಯುತ್ತಿದ್ದಾರೆ. ಪರಿಹಾರ ಕೊಡಲು ಒಂದು ತಿಂಗಳಿನಿಂದ ಜಿಲ್ಲಾಧಿಕಾರಿಗಳು ಕೂಡ ಕಾಯುತ್ತಿದ್ದಾರೆ. ಆದರೆ ಸರ್ಕಾರ ಆದೇಶನೇ ಹೊರಡಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ಅವರು ಹೇಳಿದ್ದಾರೆ.
ಕಲಬುರಗಿಯ ಪಿಡಿ ಅಕೌಂಟ್​ನಲ್ಲಿ ಡಿಸಿ ಬಳಿ 80, 100 ಕೋಟಿ ಹಣ ಇದೆ ಎಂದು ಸಿಎಂ ಹೇಳುತ್ತಾರೆ. ಆದರೆ ಪಿಡಿ ಅಕೌಂಟ್ ಹಣ ಪ್ರವಾಹಕ್ಕೆ ಖರ್ಚು ಮಾಡೋ ಹಣ ಅಲ್ಲ. ಪ್ರವಾಹದ ಸಂತ್ರಸ್ತರಿಗೆ ಹಣ ಕೊಡಲು ಸರ್ಕಾರ 3,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರದ ಬಗ್ಗೆ ಹೇಳಬಾರದು. ಎನ್​ಡಿಆರ್​ಎಫ್​ಗೆ ಏನು ಹಣ ಕೊಡಬೇಕೋ ಅದನ್ನು ಪ್ರತಿ 4 ತಿಂಗಳಿಗೆ ಕೇಂದ್ರ ಸರ್ಕಾರ ಕೊಡುತ್ತಿದೆ. ಉತ್ತರ ಕರ್ನಾಟಕಕ್ಕೆ ಈ ಕೂಡಲೇ ಸರ್ಕಾರ 3000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಆರ್​.ಅಶೋಕ್ ಅವರು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ