Advertisment

ಕರ್ನಾಟಕಕ್ಕೆ 6862 ಎಲೆಕ್ಟ್ರಿಕ್ ಬಸ್! ಬೆಂಗಳೂರು ಒಂದಕ್ಕೆ ಸಾವಿರಕ್ಕೂ ಹೆಚ್ಚು ಬಸ್​ಗಳ ನಿಯೋಜನೆ

ಪ್ರಸ್ತುತ ಒಟ್ಟು 6,862 ಮತ್ತು ಪಿ.ಎಂ. ಇ-ಡ್ರೈವ್ ಯೋಜನೆಯಡಿ 13,800 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ (ಬಿಎಂಟಿಸಿ) ಫೇಮ್-2 ಯೋಜನೆಯಡಿಯಲ್ಲಿ 1,221 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ.

author-image
Ganesh Kerekuli
bmtc electric buses
Advertisment

ಬೆಂಗಳೂರು: ಕರ್ನಾಟಕಕ್ಕೆ ನೂತನವಾಗಿ 6862 ಎಲೆಕ್ಟ್ರಿಕ್ ಬಸ್​ಗಳನ್ನ ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು. 

Advertisment

ಇದಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ರಾಜ್ಯ ಖಾತೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಉತ್ತರ ನೀಡಿದ್ದಾರೆ. ಫೇಮ್ (FAME) ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆ ಮಾಡಲಾಗಿದೆ. ಫೇಮ್-2 ಯೋಜನೆಯಡಿ ಕರ್ನಾಟಕಕ್ಕೆ ಎಷ್ಟು ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲಾಗಿದೆ ಎನ್ನುವ ಮಾಹಿತಿ ಹೀಗಿದೆ.. 

ಪ್ರಸ್ತುತ ಒಟ್ಟು 6,862 ಮತ್ತು ಪಿ.ಎಂ. ಇ-ಡ್ರೈವ್ ಯೋಜನೆಯಡಿ 13,800 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ಬೆಂಗಳೂರು ನಗರಕ್ಕೆ (ಬಿಎಂಟಿಸಿ) ಫೇಮ್-2 ಯೋಜನೆಯಡಿಯಲ್ಲಿ 1,221 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗಿದೆ.

ಎಂ. ಇ-ಡ್ರೈವ್ ಯೋಜನೆಯ ಮೊದಲ ಹಂತದ 10,900 ಇ-ಬಸ್‌ಗಳ ಹಂಚಿಕೆಯಲ್ಲಿ ಬೆಂಗಳೂರಿಗೆ 4,500 ಇ-ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಫೇಮ್-2 ಯೋಜನೆಗೆ ಒಟ್ಟು 517.23 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

electric vehicle electric bus
Advertisment
Advertisment
Advertisment