ಉಚಿತ ಪ್ಲ್ಯಾಸ್ಟಿಕ್ ಸರ್ಜರಿ ಯಶಸ್ವಿ.. ಬಾಲಗಂಗಾಧರನಾಥ ಶ್ರೀಗಳ ಕನಸು ಈಡೇರಿತು - ನಿರ್ಮಲಾನಂದನಾಥ ಶ್ರೀ

ಪೂಜ್ಯ ಗುರುಗಳಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಆಶಯದಂತೆ ಗ್ರಾಮೀಣ ಭಾಗದ ಬಡ ಜನರ ಸೇವೆ ಇಂದಿಗೂ ನಡೆದುಕೊಂಡು ಬರುತ್ತಿದೆ - ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪೂಜ್ಯಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು

author-image
Ganesh Nachikethu
Ravi 3
Advertisment

ಮಂಡ್ಯ: ಎಷ್ಟೋ ಜನ ತಂದೆ  ತಾಯಂದಿರು ಮಕ್ಕಳನ್ನು ಮನೆಯಿಂದ ಯಾವುದೇ ಸಭೆ ಸಮಾರಂಭಕ್ಕೂ ಕರೆದುಕೊಂಡು ಹೋಗಲಾಗದ ಪರಿಸ್ಥಿತಿಯಲ್ಲಿದ್ದರು. ಅದಕ್ಕೆ ಕಾರಣ ಮಕ್ಕಳಲ್ಲಿದ್ದ ಸೀಳು ತುಟಿ, ಸೀಳು ಅಂಗಳ ಹಾಗೂ ಗಂಭೀರವಾಗಿ ಸುಟ್ಟಗಾಯಗಳಿಂದ ಉಂಟಾಗಿದ್ದ ತೊಂದರೆ. ಈಗ ಇದರಿಂದ ಎಷ್ಟೋ ಜನ ನಿಟ್ಟುಸಿರು ಬಿಟ್ಟಿದ್ದು, ಅದಕ್ಕೆ ಕಾರಣ ಸಂಕಲ್ಪ 2025ರ ಸೀಳು ತುಟಿ ಮತ್ತು ಸೀಳು ಅಂಗಳ ಅನ್ನೋ ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರ. 

Ravi new

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿ.ಜಿ ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆಯ ಆಶ್ರಯದಲ್ಲಿ ಅಮೇರಿಕಾದ  ರೋಟಾಪ್ಲಾಸ್ಟ್ ಇಂಟರ್‌ನ್ಯಾಷನಲ್ ಮತ್ತು ರೋಟರಿ ಬೆಂಗಳೂರು ನಾರ್ತ್ ಸಹಯೋಗದೊಂದಿಗೆ ಸಂಕಲ್ಪ 2025ರ ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ನವೆಂಬರ್ 30 ರಿಂದ  ಡಿಸೆಂಬರ್ 11ರವರೆಗೆ ನಡೆದ ಈ ಶಿಬಿರ ಯಶಸ್ವಿಯಾಗಿ ನೆರವೇರಿತು.

Ravi Sir 4

Ravi new 1

ಇಂದು ಶಿಬಿರದ ಸಮಾರೋಪ ಸಮಾರಂಭ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೆರವೇರಿತು. ಇಲ್ಲಿ ಮಾತಾಡಿದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪೂಜ್ಯಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು, ಪೂಜ್ಯ ಗುರುಗಳಾದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಆಶಯದಂತೆ ಗ್ರಾಮೀಣ ಭಾಗದ ಬಡ ಜನರ ಸೇವೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಸೀಳು ತುಟಿ ಸುಟ್ಟ ಗಾಯಗಳಂತಹ ಅನೇಕ ವಿರೂಪಗಳಿಗೆ ಆದಿಚುಂಚನಗಿರಿ ಆಸ್ಪತ್ರೆ ರೋಟೋಪ್ಲಾಸ್ಟ್ ಜೊತೆಗೂಡಿ ಚಿಕಿತ್ಸೆ ನೀಡುತ್ತಿದೆ. ಈ ಮೂಲಕ ನೊಂದ ಬಡಜನರ ತಾಯಂದಿರು ಹಾಗೂ ಮಕ್ಕಳ ಮುಖದಲ್ಲಿ ನಗು ತರಿಸುವುದು ಹೆಮ್ಮೆಯ ವಿಷಯವಾಗಿದೆ ಎಂದರು.

New1

ಇನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ನ್ಯೂಸ್​​​ಫಸ್ಟ್ ಸಂಸ್ಥೆಯ ಎಂಡಿ ಹಾಗೂ ಸಿಇಓ ಎಸ್. ರವಿಕುಮಾರ್ ಅವ್ರು, ಈ ಹಿಂದೆ ಡಾ.ರಾಜ್ ಕುಮಾರ್ ಅವರು ಬಾಲಗಂಗಾಧರನಾಥ ಸ್ವಾಮಿಗಳ ಬಳಿ ತಮ್ಮ ಮೊಮ್ಮಗನ ಸೀಳು ತುಟಿ ಆಪರೇಷನ್​​​ ಮಾಡಿಸಲು ವೀಸಾ ಪರ್ಮಿಷನ್ ಬೇಕೆಂದು ಬಂದ ಹಿನ್ನಲೆ ಪ್ರಸ್ತಾಪಿಸಿದರು. ಅಂದು ಬಾಲಗಂಗಾಧರನಾಥ ಮಹಾಸ್ವಾಮಿಗಳು ಸೀಳು ತುಟಿ ಎಷ್ಟು ದೊಡ್ಡ ಸಮಸ್ಯೆ ಇದೆ ಅಂತ ಯೋಚನೆ ಮಾಡಿ ಆರಂಭಿಸಿದ ಶಿಬಿರವನ್ನು ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಇಂದಿಗೂ  ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು. 

Ravi Sir 1

ಕಳೆದ 11 ವರ್ಷದಲ್ಲಿ 1200 ಆಪರೇಷನ್ ಅಂದ್ರೆ ಸುಮ್ಮನೆ ಅಲ್ಲ. ಇವತ್ತು ಆಪರೇಷನ್ ಆದ ಎಲ್ಲಾ ಮಕ್ಕಳ ತಾಯಂದಿರು ಎಲ್ಲರಂತೆ ನಮ್ಮ ಮಕ್ಕಳು ಬೆಳೆಯುತ್ತಾರೆ. ಊಟ ಮಾಡುತ್ತಿದ್ದಾರೆ ಎಂದು ಖುಷಿ ಪಟ್ಟಿದ್ದಾರೆ. ಇದಕ್ಕಾಗಿ ಶ್ರಮಿಸಿದ ಆದಿಚುಂಚನಗಿರಿ ಆಸ್ಪತ್ರೆ ಮತ್ತು ರೋಟಾ ಪ್ಲಾಸ್ಟ್ ಇಂಟರ್ ನ್ಯಾಶನಲ್ ಹಾಗೂ ರೋಟರಿ ಬೆಂಗಳೂರು ಸಂಸ್ಥೆಯ ಎಲ್ಲರಿಗೂ ಧನ್ಯವಾದ ತಿಳಿಸಿದರು. 

Ravi Sir

ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಬೆಂಗಳೂರಿನ ಬ್ರೈನ್ ಹಾಸ್ಪಿಟಲ್‌ ಖ್ಯಾತ ನ್ಯೂರೋ ಸರ್ಜನ್ Dr. N. K. ವೆಂಕಟರಮಣ ಹಾಗೂ ಅಮೇರಿಕಾದ ರೋಟೋ ಪ್ಲಾಸ್ಟ್ ಇಂಟರ್ನ್ಯಾಷನಲ್ ಸಂಸ್ಥೆಯ ಮಿಷನ್ ಡೈರೆಕ್ಟರ್ ಡಾ.ಥಾಮಸ್ ಕೆನ್ನೆಥ್ ಫಾಕ್ಸ್, ಮೆಡಿಕಲ್ ಡೈರೆಕ್ಟರ್ ಡಾ.ಗ್ಯಾರಿ ಡೇವಿಡ್ ಸಲೊಮೊ ಹಾಗೂ ಪ್ರೊ. ಎಲಿಜಬೆತ್ ಚೆರಿಯನ್, ಶ್ರೀ ಸತ್ಕೀರ್ತಿನಾಥ ಸ್ವಾಮೀಜಿಗಳು, ಉಪಕುಲಪತಿಗಳಾದ ಡಾ. ಎಸ್. ಎನ್. ಶ್ರೀಧರ್​​, ರಿಜಿಸ್ಟ್ರಾರ್ ಡಾ. ಸಿ.ಕೆ ಸುಬ್ಬರಾಯ, ಡಾ. ಎಂ.ಜಿ ಶಿವರಾಮು ಆಸ್ಪತ್ರೆ ಮುಖ್ಯಸ್ಥರಾದ ಡಾ. ಕೆ.ಎಂ ಶಿವಕುಮಾರ್, ಆಸ್ಪತ್ರೆಯ ಉಪಮುಖ್ಯಸ್ಥರಾದ ಡಾ. ರವಿ ಕೆ.ಎಸ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ಶ್ರೀ ಧರ್ಮೇಂದ್ರ ಸೇರಿದಂತೆ  ರೋಟೋಪ್ಲಾಸ್ಟ್ ಸಿಬ್ಬಂದಿ ವರ್ಗ ಹಾಗೂ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ವೈದ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Adichunchanagiri Mutt Nirmalananda Swamiji NewsFirst CEO Ravikumar
Advertisment