/newsfirstlive-kannada/media/media_files/2025/08/20/sujatha-bhat4-2025-08-20-21-27-43.jpg)
ಅನನ್ಯಾ ಭಟ್ ನಾಪತ್ತೆ ದೂರು ಸುಳ್ಳು ಎಂದು ಒಪ್ಪಿಕೊಂಡ ಸುಜಾತ ಭಟ್
ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಕೇಸ್ ಈಗ ಮುಕ್ತಾಯವಾಗಿದೆ. ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸಿ ಕೇಸ್ ಕ್ಲೋಸ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದ ಸುಜಾತ ಭಟ್ , ತಾನು ನೀಡಿದ್ದು ಸುಳ್ಳು ದೂರು ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅನನ್ಯ ಭಟ್ ನಾಪತ್ತೆ ಕೇಸ್‌ನ ತನಿಖೆಯನ್ನು ಮುಕ್ತಾಯಗೊಳಿಸಿ, ದೂರಿಗೆ ಹಿಂಬರಹವನ್ನು ಎಸ್‌ಐಟಿ ಅಧಿಕಾರಿಗಳು ನೀಡಿದ್ದಾರೆ.
ಟಿ.ಜಯಂತ್, ಗೀರೀಶ್ ಮಟ್ಟಣ್ಣನವರ್ ಮುಂತಾದವರ ಒತ್ತಡದಿಂದ ಸುಳ್ಳು ಹೇಳಿದ್ದೆ ಎಂದು ಸುಜಾತ ಭಟ್ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.
ತಮ್ಮ ಮಗಳು ಅನನ್ಯಾ ಭಟ್ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಳು. ಆಕೆ ಮಣಿಪಾಲ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದಳು ಎಂದು ಸುಜಾತ್ ಭಟ್ ದೂರು ನೀಡಿದ್ದರು. ಆದರೇ, ಆ ದೂರು ಸುಳ್ಳು ದೂರು ಎಂದು ತಪ್ಪೊಪ್ಪಿಗೆ ಹೇಳಿಕೆಯನ್ನು ಎಸ್‌ಐಟಿ ಪೊಲೀಸರ ಎದುರು ನೀಡಿದ್ದಾರೆ.
ಸುಜಾತಾ ಭಟ್ ದೂರು ಅರ್ಜಿ ವಿಲೇ ಮಾಡಲಾಗಿರುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ಹಿಂಬರಹ ನೀಡಿದ್ದಾರೆ.
/filters:format(webp)/newsfirstlive-kannada/media/media_files/2025/08/30/sujatha-bhat5-2025-08-30-12-06-49.jpg)
SIT ಹಿಂಬರಹ ಪತ್ರದಲ್ಲೇನಿದೆ?
ನೀವು (ಸುಜಾತ ಭಟ್ )15.07.2025 ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರು ಅರ್ಜಿಯನ್ನು ಎಸ್‌ಐಟಿ ಕಛೇರಿಗೆ ವರ್ಗಾಯಿಸಿಕೊಂಡು ಕೂಲಂಕುಷವಾಗಿ ನಿಮ್ಮನ್ನು ವಿಚಾರಣೆ ಮಾಡಲಾಗಿದೆ. ದೂರು ಅರ್ಜಿಯ ವಿಚಾರಣೆ ಸಮಯ ನೀವು " ನನಗೆ ಅನನ್ಯ ಭಟ್ ಎಂಬ ಮಗಳು ಇರುವುದಾಗಲೀ , ಆಕೆ ಎಂಬಿಬಿಎಸ್ ಓದಿದಾಗಲೀ, ಧರ್ಮಸ್ಥಳದಲ್ಲಿ ಕಾಣೆಯಾಗುವುದಾಗಲೀ, ನಾನು ಕೋಲ್ಕತ್ತಾದ ಸಿಬಿಐ ಕಛೇರಿಯಲ್ಲಿ ಸ್ಟೈನೋ ಗ್ರಾಫರ್ ಆಗಿರುವುದಾಗಲೀ ಸಂಪೂರ್ಣ ಸುಳ್ಳು ಆಗಿರುತ್ತದೆ ಎಂದು ಹೇಳಿಕೆ ನೀಡಿದ್ದೀರಿ.
ಉಡುಪಿಯ ಪರೀಕಾ ಗ್ರಾಮದ ನನ್ನ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ, ನಾನು ಸತ್ತು ಹೋಗಿರುತ್ತೇನೆ ಎಂದು ನನ್ನ ಸಂಬಂಧಿಕರು ಸುಳ್ಳು ಹೇಳಿ ಆ ಜಾಗವನ್ನು ನನ್ನ ಗಮನಕ್ಕೆ ಬಾರದೇ ಧರ್ಮಸ್ಥಳದವರಿಗೆ ನೀಡಿದ್ದರಿಂದ , ಧರ್ಮಸ್ಥಳದವರ ವಿರುದ್ಧ ಕೇಸು ಮಾಡಿ ನ್ಯಾಯ ಪಡೆಯಬೇಕೆಂದು , ನನಗೆ ಬೆಂಗಳೂರಿನಲ್ಲಿ ಪರಿಚಯಸ್ಥರಾದ ಶಿವಶಂಕರರವರ ಜೊತೆ ಪ್ರಸ್ತಾಪ ಮಾಡಿರುತ್ತೇನೆ. ಅದರಂತೆ ಶಿವಶಂಕರ ರವರ ಮೂಲಕ ಹಾಯ್ ಕರುನಾಡು ಯೂ-ಟ್ಯೂಬರ್ ವಿಜಯ ರವರ ಪರಿಚಯವಾಗಿ ಅಲ್ಲಿಂದ ಟಿ ಜಯಂತ, ಗಿರೀಶ್ ಮಟ್ಟಣ್ಣನವರ್ ಮುಂತಾದವರು ಎಲ್ಲರೂ ಸೇರಿ ನನ್ನ ಮೇಲೆ ಒತ್ತಡ ತಂದು, ಸತ್ಯ ಇಲ್ಲದೇ ಇರುವ ವಿಷಯವನ್ನು ಸುಳ್ಳು ಎಂದು ತಿಳಿದಿದರೂ ಕೂಡ ಪ್ರಾಧಿಕಾರಿಗಳಿಗೆ ಸುಳ್ಳು ದೂರು ನೀಡಿ ಮಾಧ್ಯಮಗಳ ಮುಂದೆ ಸುಳ್ಳು ಮಾಹಿತಿ ನೀಡಿಸಿ ನನ್ನಿಂದ ಈ ಕೃತ್ಯ ಮಾಡಿಸಿರುತ್ತಾರೆ.
ಆದ್ದರಿಂದ ದೂರಿನಲ್ಲಿ ತಿಳಿಸಿರುವ ವಿಷಯಗಳು ಸಂಪೂರ್ಣ ಸುಳ್ಳಾಗಿರುತ್ತದೆ . ದಿನಾಂಕ 26.08.2025 ರಿಂದ ದಿನಾಂಕ 29.08.2025 ರ ವರೆಗೆ ನಡೆದ ವಿಚಾರಣೆ ಸಮಯ ನುಡಿದು ಹೇಳಿಕೆ ನೀಡಿರುವುದರಿಂದ ನಿಮ್ಮ ದೂರು ಅರ್ಜಿಯನ್ನು ವಿಲೇ ಮಾಡಲಾಗಿರುತ್ತದೆ ಎಂದು ಎಸ್‌ಐಟಿ ಅಧಿಕಾರಿಗಳು ಸುಜಾತ ಭಟ್ ಗೆ ಹಿಂಬರಹ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us