Advertisment

ಸಾವಿನಲ್ಲೂ ಒಂದಾದ ಬೀಳಗಿ ಪಟ್ಟಣದ ದಂಪತಿ!: ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹೃದಯಾಘಾತ!!

ಬೀಳಗಿ ಪಟ್ಟಣದಲ್ಲಿ ಗಂಡ-ಹೆಂಡತಿ ಸಾವಿನಲ್ಲೂ ಒಂದಾಗಿದ್ದಾರೆ. ಕಷ್ಟ- ಸುಖಗಳಲ್ಲಿ ಜೊತೆಯಾಗಿದ್ದ ದಂಪತಿ ಈಗ ಸಾವಿನಲ್ಲೂ ಒಬ್ಬರನ್ನೂ ಒಬ್ಬರು ಇರಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಪತಿ ಶಶಿಧರ್ ಸಾವಿನ ಸುದ್ದಿ ಕೇಳಿ ಪತ್ನಿ ಸರೋಜಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ!.

author-image
Chandramohan
Bilagi town couple united in death too

ಬೀಳಗಿ ಪಟ್ಟಣದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ!

Advertisment
  • ಬೀಳಗಿ ಪಟ್ಟಣದಲ್ಲಿ ಸಾವಿನಲ್ಲೂ ಒಂದಾದ ದಂಪತಿ
  • ಪತಿ ಶಶಿಧರ್ ಹೃದಯಾಘಾತದಿಂದ ವಿಧಿವಶ, ಪತಿ ಸಾವಿನ ಸುದ್ದಿ ಕೇಳಿ ಪತ್ನಿಗೆ ಹಾರ್ಟ್ ಅಟ್ಯಾಕ್‌!


ಜೀವನದಲ್ಲಿ ಕಷ್ಟ ಸುಖದಲ್ಲಿ ಜೊತೆಯಾಗಿರುವ  ಲಕ್ಷಾಂತರ, ಕೋಟ್ಯಾಂತರ ದಂಪತಿಗಳನ್ನು ನೋಡಿದ್ದೇವೆ.  ಆದರೇ ಸಾವಿನಲ್ಲೂ ಜೊತೆಯಾಗಿರುವ ದಂಪತಿಗಳು ಅಪರೂಪ.  ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಗಂಡ- ಹೆಂಡತಿ ಜೋಡಿಯೊಂದು ಸಾವಿನಲ್ಲೂ ಜೊತೆಯಾಗಿದ್ದಾರೆ.  ಬೀಳಗಿ ಪಟ್ಟಣದಲ್ಲಿ ಚಿನ್ನದ ಅಂಗಡಿ ನಡೆಸುತ್ತಿದ್ದ ಶಶಿಧರ್(40) ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.  ಪತಿ ಶಶಿಧರ್ ಸಾವಿನ ಸುದ್ದಿ ಕೇಳಿದ ಪತ್ನಿ ಸರೋಜಾ( 35) ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.  ಸಾವಿನಲ್ಲೂ ಈ ದಂಪತಿ ಒಂದಾಗಿದ್ದಾರೆ.  15 ವರ್ಷದ ಹಿಂದೆ ಶಶಿಧರ್ ಮತ್ತು ಸರೋಜಾ ವಿವಾಹವಾಗಿದ್ದರು. ಮೃತ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  ಬೀಳಗಿ ಪಟ್ಟಣದ ಮನೆಯಲ್ಲಿ ಮಕ್ಕಳು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

BILAGI COUPLE UNITED IN DEATH TOO
Advertisment
Advertisment
Advertisment