ಸಾವಿನಲ್ಲೂ ಒಂದಾದ ದಂಪತಿಗಳು!! ಬೀಳಗಿ ತಾಲ್ಲೂಕಿನ ಹೊಸ ರೊಳ್ಳಿ ಗ್ರಾಮದಲ್ಲಿ ಮನಮಿಡಿಯುವ ಘಟನೆ

ಬೀಳಗಿ ತಾಲ್ಲೂಕಿನ ಹೊಸ ರೊಳ್ಳಿ ಗ್ರಾಮದಲ್ಲಿ ಅಪರೂಪದ ಹಾಗೂ ಮನ ಮಿಡಿಯುವ ಘಟನೆ ನಡೆದಿದೆ. ವೃದ್ಧ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. 50 ರಿಂದ 60 ವರ್ಷ ಒಟ್ಟಾಗಿ ಸಂಸಾರ ನಡೆಸಿದವರು ನಿನ್ನ ಬಿಟ್ಟು ನಾ ಇರಲಾರೆ ಎಂದು ಒಂದೇ ದಿನ ಸ್ವರ್ಗ ಸೇಿರಿದ್ದಾರೆ.

author-image
Chandramohan
COUPLE DIED ON SAME DAY
Advertisment

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಹೊಸ ರೊಳ್ಳಿ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.  ದಂಪತಿಗಳು ಸಾವನ್ನಪ್ಪಿದ ಬಳಿಕ  ಮರು ಮದುವೆ ಮಾಡಿದ ಗ್ರಾಮಸ್ಥರು ಭಾವಪೂರ್ಣ   ಅಂತ್ಯಸಂಸ್ಕಾರ ನೆರವೇರಿಸಿ ವಿದಾಯ ಹೇಳಿದ್ದಾರೆ.  ಹೊಸ ರೊಳ್ಳಿ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ.  ಜೀವನದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಇದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಇಂದು ಬೆಳಿಗ್ಗೆ ಪತಿ ಅಪ್ಪಣ್ಣ ಭೀಮಪ್ಪ ಗಲಗಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬಸ್ಥರು ಬಾಡಗಂಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಪತಿ ಅಪ್ಪಣ್ಣ ಭೀಮಪ್ಪ ಗಲಗಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಮನೆಗೆ ತಂದು ಪೂಜೆ ಸಲ್ಲಿಸಿದ ಬಳಿಕ ಪತ್ನಿ ಯಲ್ಲವ್ವಗೆ ಎದೆನೋವು ಕಾಣಿಸಿಕೊಂಡಿದೆ. ಪತ್ನಿ ಯಲ್ಲವ್ವರನ್ನು ಬಾಡಗಂಡಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೇ, ಅದೇ ಬಾಡಗಂಡಿ ಆಸ್ಪತ್ರೆಯಲ್ಲಿ ಪತ್ನಿ ಯಲ್ಲವ್ವ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
ಬಳಿಕ ಯಲ್ವವ್ವ ಪಾರ್ಥೀವ ಶರೀರವನ್ನು ಗ್ರಾಮದ ಮನೆಗೆ ತಂದು ಪತಿ- ಪತ್ನಿಯ ಪಾರ್ಥೀವ ಶರೀರಗಳನ್ನು ಅಕ್ಕಪಕ್ಕ ಕೂರಿಸಿ ಮರು ಮದುವೆ ಮಾಡಿ ಅಕ್ಷತೆ ಹಾಕಿದ ಗ್ರಾಮಸ್ಥರು ವೀರಶೈವ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. 

COUPLE DIED ON SAME DAY (1)




ಪತಿ ಅಪ್ಪಣ್ಣ ಭೀಮಪ್ಪ ಗಲಗಲಿ ಅವರಿಗೆ 84 ವರ್ಷಗಳಾದರೇ, ಪತ್ನಿ ಯಲ್ಲವ್ವ ಅವರಿಗೆ 72 ವರ್ಷ ವಯಸ್ಸಾಗಿತ್ತು. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Couple died on same day
Advertisment