/newsfirstlive-kannada/media/media_files/2025/11/14/farmer-protest-11-2025-11-14-07-27-00.jpg)
/newsfirstlive-kannada/media/media_files/2025/11/14/farmer-protest-14-2025-11-14-07-27-29.jpg)
ಸರ್ಕಾರದ ಬೆನ್ನಿಗೆ ಬಿದ್ದ ರೈತರು
ಕಬ್ಬು ಬೆಳೆಗಾರರ ಕೋಪ ವಿಕೋಪಕ್ಕೆ ತಿರುಗಿದೆ. ದೇಶದ ಬೆನ್ನೆಲುಬಾಗಿರೋ ರೈತರು ನಾವು ಕೇಳಿದಷ್ಟು ದರ ನಿಗದಿ ಮಾಡಿ ಅಂತ ಸರ್ಕಾರದ ಬೆನ್ನಿಗೆ ಬಿದ್ದಿದ್ದಾರೆ. ಅಲ್ಲಿ ಸೈದಾಪುರ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಸುಟ್ಟಿದ್ರೆ.. ಇಲ್ಲಿ ಸಮಿರವಾಡಿ ಗೋದಾವರಿ ಕಾರ್ಖಾನೆ ಬಳಿ ಕಲ್ಲು ತೂರಾಟವಾಗಿದೆ. ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ಮುಂದೆ ಕಟ್ಟಿಗೆ ಕೋಲು ಹಿಡಿದ ಕೆಲ ರೈತರು ಕಾವಲಿಗೆ ನಿಂತಿದ್ರು.
/newsfirstlive-kannada/media/media_files/2025/11/14/farmer-protest-9-2025-11-14-07-28-25.jpg)
ಹೆದರಿ ಕಾಲ್ಕಿತ್ತ ಪೊಲೀಸರು
ಬ್ಯಾರಿಕೇಡ್ ತಳ್ಳಿದ್ರು.. ಪೊಲೀಸರನ್ನ ಅಟ್ಟಾಡಿಸಿದ್ರು.. ಕಲ್ಲುಗಳನ್ನ ತೂರಿದ್ರು.. ಕೋಪದಲ್ಲಿದ್ದ ರೈತರನ್ನ ತಡೆಯೋದಕ್ಕೆ ಆಗದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ರೈತರ ಪ್ರತಿಭಟನೆ.. ಸಮಿರವಾಡಿ ಗೋದಾವರಿ ಕಾರ್ಖಾನೆಯಲ್ಲಿ ಕಲ್ಲು ತೂರಾಟ ಮತ್ತು ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಬಾಗಲಕೋಟೆಯಲ್ಲಿ ಉದ್ವಿಘ್ನತೆ ಹೆಚ್ಚಿಸಿದೆ. ಕಲ್ಲು ತೂರಾಟದ ವಿಡಿಯೋಗಳು ನ್ಯೂಸ್ ಫಸ್ಟ್ಗೆ ಲಭ್ಯವಾಗಿದೆ.
/newsfirstlive-kannada/media/media_files/2025/11/14/farmer-protest-6-2025-11-14-07-29-15.jpg)
ವಾಹನಗಳು ಭಸ್ಮ!
ಸಮಿರವಾಡಿ ಗೋದಾವರಿ ಕಾರ್ಖಾನೆ ಬಳಿಗೆ ಎರಡು ಗುಂಪಿನ ರೈತರು ಜಮಾಯಿಸಿದ್ರು. ಕಾರ್ಖಾನೆ ಒಳಗೆ-ಹೊರಗಡೆ ಇದ್ದ ಜನರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದುಕೊಂಡು, ಕೂಗಾಡಿದ್ದಾರೆ. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಏಕಾಏಕಿ ಕಲ್ಲುಗಳು ತೂರಿಬಂದಿದೆ. ಕಲ್ಲು ಬಿಳ್ಳುತ್ತಿದ್ದಂತೆ ಕಾರ್ಖಾನೆ ಒಳಗಿದ್ದವರಿಂದ ಹೊರಗಿದ್ದವ್ರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬ್ಯಾರಿಕೇಡ್ ನುಗ್ಗಿ ಒಳ ಪ್ರವೇಶಿಸಲು ಪ್ರತಿಭಟನಾಕಾರರ ಯತ್ನಿಸಿದ್ದಾರೆ. ಈ ವೇಳೆ ನೂಕಾಟ... ತಳ್ಳಾಟ.. ನಡೆದಿದ್ದು, ಕೆಲ ಕಿಡಿಗೇಡಿಗಳು ಬೈಕ್ಗಳನ್ನ ಕೂಡ ಸುಟ್ಟಿದ್ದಾರೆ.
/newsfirstlive-kannada/media/media_files/2025/11/14/farmer-protest-5-2025-11-14-07-29-40.jpg)
ಮುಧೋಳ ರೈತರ ವಿರುದ್ಧ ಜಮಖಂಡಿ ರೈತರು ಎಚ್ಚರಿಕೆ
ಸೈದಾಪುರ ಕಾರ್ಖಾನೆ ಬಳಿ ಟ್ರ್ಯಾಕ್ಟರ್ ಸುಟ್ಟ ಬೆನ್ನಲ್ಲೇ ಇತ್ತ ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ಬಳಿ ಕೆಲ ರೈತರು ಅಲರ್ಟ್ ಆಗಿದ್ದಾರೆ. ಸಾಯಿ ಪ್ರಿಯಾ ಸಕ್ಕರೆ ಕಾರ್ಖಾನೆ ಎದುರು ಕಟ್ಟಿಗೆ ಕೋಲು ಹಿಡಿದು ರೈತರು ಕಾವಲು ನಿಂತಿದ್ದಾರೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಕಾರ್ಖಾನೆ ಹಾಗೂ ಟ್ರ್ಯಾಕ್ಟರ್ಗಳ ಸುರಕ್ಷತೆಗಾಗಿ ಕಾವಲು ಕಾಯುತ್ತಿದ್ದಾರೆ. ಸಂಗಮೇಶ್ ನಿರಾಣಿಯವರಿಗೆ ಸೇರಿದ ಸಕ್ಕರೆ ಕಾರ್ಖಾನೆ ಇದಾಗಿದೆ. ಸರ್ಕಾರದ ಜೊತೆ ಮಾತಾಡಿಕೊಳ್ಳಿ.. ಸಾಯಿಪ್ರಿಯಾ ಕಡೆ ಬಂದ್ರೆ ಸುಮ್ಮನಿರೋದಿಲ್ಲ ಅಂತ ಮುಧೋಳ ರೈತರ ವಿರುದ್ಧ ಜಮಖಂಡಿ ರೈತರು ಎಚ್ಚರಿಕೆ ನೀಡಿದ್ದಾರೆ.
/newsfirstlive-kannada/media/media_files/2025/11/14/farmer-protest-8-2025-11-14-07-30-41.jpg)
ಸಮೀರವಾಡಿ ಕಾರ್ಖಾನೆ ಹಿನ್ನೆಲೆ!
ಸಮೀರವಾಡಿ ಸಕ್ಕರೆ ಕಾರ್ಖಾನೆ ಮಹಾರಾಷ್ಟ್ರ ಮುಂಬೈ ಮೂಲದ ಸಮೀರ ಸೋಮಯ್ಯ ಮಾಲೀಕತ್ವದಲ್ಲಿದೆ. ಆಖಂಡ ವಿಜಯಪುರ ಜಿಲ್ಲೆಯ ಮೊದಲ ಸಕ್ಕರೆ ಕಾರ್ಖಾನೆ ಇದಾಗಿದೆ. 1972 ರಲ್ಲಿ ಸಕ್ಕರೆ ನುರಿಸುವಿಕೆ ಪ್ರಾರಂಭವಾಗಿದ್ದು, 1973 ರಲ್ಲಿ ಡಿಸೆಂಬರ್ 13 ರಂದು ಸುಟ್ಟಿದ್ರು. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಗಲಾಟೆಯಲ್ಲಿ ಕಾರ್ಖಾನೆಗೆ ಬೆಂಕಿ ಇಟ್ಟಿದ್ರು. ಸಮೀರವಾಡಿ ಸಕ್ಕರೆ ಕಾರ್ಖಾನೆಯದ್ದೇ ಒಂದು ಸೆಪರೇಟ್ ರೈತ ಸಂಘಟನೆ ಇದೆ. ಈ ಸಂಘದ ಜೊತೆಗೆ ಮಾತುಕತೆ ಮಾಡಿ ಕಾರ್ಖಾನೆ ಪ್ರಾರಂಭ ಮಾಡಲಾಯ್ತು
/newsfirstlive-kannada/media/media_files/2025/11/08/sugarcane_farmers_protest_bagalkote-2025-11-08-07-35-19.jpg)
ಹೋರಾಟ.. ಟ್ರ್ಯಾಕ್ಟರ್ಗಳಿಗೆ ಬೆಂಕಿ.. ಮಾಹಿತಿ ಪಡೆದ ಸಿಎಂ!
ಮುಧೋಳದಲ್ಲಿ ಕಬ್ಬು ಬೆಳೆಗಾರರ ಹೋರಾಟದಲ್ಲಿ 100ಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದೆ. ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ ಘಟನೆ ಬಗ್ಗೆ ಎಸ್ಪಿ, ಡಿಸಿಗೆ ಕರೆ ಮಾಡಿ ಸಿಎಂ ಮಾಹಿತಿ ಪಡೆದಿದ್ದಾರೆ. ಉಸ್ತುವಾರಿ ಸಚಿವ ತಿಮ್ಮಾಪುರ ಜೊತೆಗೂ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.
/newsfirstlive-kannada/media/media_files/2025/11/14/farmer-protest-10-2025-11-14-07-31-38.jpg)
ಕಾಂಗ್ರೆಸ್ ಸರ್ಕಾರದ ವೈಫಲ್ಯ
ಮುದೋಳ ಟ್ರ್ಯಾಕ್ಟರ್ಗಳು ಬೆಂಕಿಗೆ ಆಹುತಿ ಕಂಡ ಕೇಂದ್ರ ಸಚಿವ ಹೆಚ್ಡಿಕೆ ದಿಗ್ಭ್ರಮೆಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ. ಬೆಳಗಾವಿ ರೈತರ ಮೂಗಿಗೆ ತುಪ್ಪ ಸವರಿದ ಸರಕಾರ.. ಇಡೀ ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ನಿರ್ವಹಿಸುವಲ್ಲಿ ಘೋರ ವೈಫಲ್ಯ ಕಂಡಿದೆ.. ಮುಧೋಳದ ರೈತರ ಜತೆ ನಾನೂ ಇದ್ದೇನೆ ಎಂದಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us