/newsfirstlive-kannada/media/media_files/2025/11/24/cec-submits-report-to-supreme-court-2025-11-24-16-28-55.jpg)
CEC ಮುಖ್ಯಸ್ಥ ಸಿದ್ದಾಂತ್ ದಾಸ್
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಗಣಿ ಬ್ಲಾಕ್ ಗಳನ್ನು ಹರಾಜು ಹಾಕಲಾಗಿದೆ ಎಂದು ಕೇಂದ್ರೀಯ ಉನ್ನತಾಧಿಕಾರ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸಂಡೂರಿನ ಐದು ಗಣಿ ಬ್ಲಾಕ್ ಹರಾಜಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಸಿಇಸಿ ಹೇಳಿದೆ.
ಬಳ್ಳಾರಿ ಜಿಲ್ಲೆ ಸಂಡೂರ ತಾಲೂಕುನಲ್ಲಿ ರಾಜ್ಯ ಸರ್ಕಾರ ಹರಾಜು ಹಾಕಿರುವ 4,480 ಎಕರೆ ಗಣಿ ಪ್ರದೇಶದ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದೆ. ಐದು ಕಬ್ಬಿಣದ ಅದಿರು ಗಣಿ ಬ್ಲಾಕ್‌ಗಳ ಸಂಯೋಜನೆ & ಕೋರ್ಟ್ ಆದೇಶ ಉಲ್ಲಂಘನೆ ಆಗಿರುವ ಬಗ್ಗೆ ಸಿಇಸಿ ವರದಿಯಲ್ಲಿ ಉಲ್ಲೇಖಿಸಿದೆ. ಸುಪ್ರೀಂ ಕೋರ್ಟ್ ಗೆ ಕೇಂದ್ರದ ಉನ್ನತಾಧಿಕಾರಿಗಳ ಸಮಿತಿ (ಸಿಇಸಿ) ವರದಿಯು ಸಲ್ಲಿಕೆಯಾಗಿದೆ. ಹೊಸದಾಗಿ ಸಂಯೋಜಿಸಿ, ರಚಿಸಿರುವ ಐದು ಗಣಿ ಬ್ಲಾಕ್‌ಗಳು ತ್ವರಿತ ಕಾರ್ಯಾಚರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಕರ್ನಾಟಕ ಕಬ್ಬಿಣ & ಉಕ್ಕು ತಯಾರಿಕಾ ಸಂಘ (ಕಿಸ್ಮಾ) & ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿವೆ. ಈ ಅರ್ಜಿಯನ್ನ ಪರಿಶೀಲನೆ ಮಾಡಿದ್ದ ಸುಪ್ರೀಂ ಕೋರ್ಟ್ ಈ ಕುರಿತು ವರದಿ ಸಲ್ಲಿಸುವಂತೆ ಸಿಇಸಿಗೆ ಸೂಚನೆ ನೀಡಿತ್ತು. ಸೆಪ್ಟೆಂಬರ್ 18 ರಂದು ಸಿಇಸಿಗೆ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ನವೆಂಬರ್ 3 ರಂದು ಸುಪ್ರೀಂ ಕೋರ್ಟ್‌ಗೆ 55 ಪುಟಗಳ ವರದಿಯನ್ನು ಸಲ್ಲಿಸಿದೆ.
ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಐದು ಗಣಿ ಬ್ಲಾಕ್‌ಗಳು ಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಗಣಿಭಾದಿತ ಪ್ರದೇಶದಲ್ಲಿ ಅರಣ್ಯ ಸೃಷ್ಟಿ & ಪುನಶ್ಚೇತನ ಕಡ್ಡಾಯ ಮಾಡಲಾಗಿತ್ತು.
ಹೊಸ ಗಣಿ ಬ್ಲಾಕ್‌ಗಳು 217.20 ಎಕರೆ ಈವರೆಗೆ ಗಣಿಗೆ ಬಳಕೆಯಾಗದ ಅರಣ್ಯ ಭೂಮಿಯನ್ನ ಹೊಂದಿದೆ. ಅರಣ್ಯ ಪ್ರದೇಶವನ್ನ ಗಣಿಗೆ ಬಳಕೆ ಮಾಡಬೇಕಾದ್ರೆ ಕಾನೂನಾತ್ಮಕ & ಪರಿಹಾರಾತ್ಮಕ ಕ್ರಮಗಳ ಪಾಲನೆ ಕಡ್ಡಾಯ. ಹೊಸ ಪ್ರದೇಶವನ್ನ ಗಣಿಗಾರಿಕೆಗೆ ಬಳಕೆ ಮಾಡುವ ಮೊದಲೇ, ಈಗಾಗಲೇ ಗಣಿಗಾರಿಕೆಯಿಂದ ನಾಶವಾಗಿರುವ ಅರಣ್ಯ ಪ್ರದೇಶವನ್ನ ಪುನಶ್ಚೇತನ ಮಾಡುವುದು ಕಡ್ಡಾಯ ಎಂದು ಸಿಇಸಿ ಹೇಳಿದೆ.
ಜೈಸಿಂಗಪುರ ದಕ್ಷಿಣ - 1221. 83 ಎಕರೆ ಗಣಿ ಪ್ರದೇಶ. ಜೈಸಿಂಗಪುರ ಉತ್ತರ - 1490.99 ಎಕರೆ ಗಣಿ ಪ್ರದೇಶ. ಸೋಮನಹಳ್ಳಿ ಅದಿರು ಬ್ಲಾಕ್ 670.94 ಎಕರೆ ಗಣಿ ಪ್ರದೇಶ. ವ್ಯಾಸನಕೇರಿ ಬ್ಲಾಕ್ - 1001.76 ಎಕರೆ ಗಣಿ ಪ್ರದೇಶ. ಎಚ್. ಆರ್. ಗವಿಯಪ್ಪ ಗಣಿ ಬ್ಲಾಕ್ - 98.94 ಎಕರೆ ಗಣಿ ಪ್ರದೇಶ ಹೊಂದಿವೆ.
ಈ ಐದು ಗಣಿ ಬ್ಲಾಕ್ ನಿಂದ 108.62 ದಶಲಕ್ಷ ಟನ್ (10.8 ಕೋಟಿ ಟನ್) ಅದಿರು ದಾಸ್ತಾನು ನಿರೀಕ್ಷೆ ಇದೆ.
/filters:format(webp)/newsfirstlive-kannada/media/media_files/2025/11/24/mining-area-in-ballery-2025-11-24-16-32-50.jpg)
ಸಂಡೂರು ತಾಲ್ಲೂಕಿನ 4 ಗಣಿ ಬ್ಲಾಕ್ ಗಳ ಗಡಿಯನ್ನು ರಾಜ್ಯ ಸರ್ಕಾರ ತಾನಾಗಿಯೇ ಬದಲಾವಣೆ ಮಾಡಿದೆ. ಸುಪ್ರೀಂಕೋರ್ಟ್ , ಸಿಇಸಿ ಈ ಹಿಂದೆಯೇ ಗಣಿ ಬ್ಲಾಕ್ ಗಳ ಗಡಿಯನ್ನು ಬದಲಾವಣೆ ಮಾಡದಂತೆ ಸೂಚಿಸಿದ್ದವು. ಸಿ ಕೆಟಗರಿಯ ಗಣಿ ಬ್ಲಾಕ್ ಗಳ ಗಡಿಯನ್ನು ಬದಲಾಯಿಸಿ ಅವುಗಳನ್ನು ಎ ಮತ್ತು ಬಿ ಕೆಟಗರಿ ಗಣಿ ಬ್ಲಾಕ್ ಗಳ ಜೊತೆ ಸೇರ್ಪಡೆ ಮಾಡಿ ಅರಣ್ಯ ಪ್ರದೇಶ ನಾಶವಾಗದೇ ಇರುವಂತೆ ತೋರಿಸಲಾಗಿದೆ. ಈ ಮೂಲಕ 2013, 2015, 2017ರ ಸುಪ್ರೀಂಕೋರ್ಟ್ ಆದೇಶಗಳನ್ನು ಕರ್ನಾಟಕ ರಾಜ್ಯ ಸರ್ಕಾರ ಉಲಂಘಿಸಿದೆ. ನಾಲ್ಕು ಗಣಿ ಬ್ಲಾಕ್ ಗಳನ್ನು ಬೇರೆ ಕೆಟಗರಿಯ ಗಣಿ ಬ್ಲಾಕ್ ಗಳ ಜೊತೆ ವಿಲೀನ ಮಾಡಲಾಗಿದೆ. 80 ಹೆಕ್ಟೇರ್ ಅಸಲಿ ಅರಣ್ಯವನ್ನು 5 ಬ್ಲಾಕ್ ಗಳಿಗೂ ಸೇರ್ಪಡೆ ಮಾಡಿ ಹರಾಜು ಹಾಕಲಾಗಿದೆ. ದಾಲ್ಮಿಯಾ ಮೈನ್ ಬ್ಲಾಕ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಿ, ಹರಾಜು ಹಾಕಲಾಗಿದೆ. ಸಿ ಕೆಟಗರಿಯ ಬ್ಲಾಕ್ ನ ಕೆಲ ಪ್ರದೇಶಗಳನ್ನು ಹೊರಗಿಟ್ಟು ಹರಾಜು ಹಾಕಲಾಗಿದೆ. ರಾಜ್ಯ ಸರ್ಕಾರವು ನಾಲ್ಕು ಗಣಿ ಬ್ಲಾಕ್ ಗಳ ಹರಾಜು ಅನ್ನು ಮರುಪರಿಶೀಲಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕೆಂದು ಸಿಇಸಿ ಶಿಫಾರಸ್ಸು ಮಾಡಿ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದೆ.
ಈ ವರದಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ, ಕರ್ನಾಟಕ ರಾಜ್ಯ ಸರ್ಕಾರದ ವಾದವನ್ನು ಆಲಿಸಿದ ಬಳಿಕ ಸೂಕ್ತ ಆದೇಶ ಹೊರಡಿಸಬಹುದು. ಸಿಇಸಿ ವರದಿಗೆ ಸುಪ್ರೀಂಕೋರ್ಟ್ ಮನ್ನಣೆ ನೀಡುವ ಸಾಧ್ಯತೆಯೇ ಹೆಚ್ಚು .
ಸಿ ಕೆಟಗರಿಯಲ್ಲಿ 51 ಗಣಿ ಲೀಸ್ ಗಳಿದ್ದವು . ಸಿ ಕೆಟಗರಿ ಲೀಸ್ ಗಳಲ್ಲಿ ಆಕ್ರಮಗಳು ಹೆಚ್ಚಾಗಿದ್ದ ಕಾರಣದಿಂದ ಇವುಗಳ ಲೀಸ್ ಅನ್ನು ಈ ಹಿಂದೆ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಬಳಿಕ ಜಂಟಿ ಟೀಮ್ ಸರ್ವೇ ಪ್ರಕಾರ, ಸಿ ಕೆಟಗರಿ ಗಣಿ ಲೀಸ್ ಗಳ ಗಡಿಯನ್ನು ಗುರುತಿಸಲಾಗಿತ್ತು. 2013ರ ಏಪ್ರಿಲ್ 18ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಗಣಿ ಲೀಸ್ ಗಳ ಗಡಿ ಬದಲಾವಣೆ ಮಾಡದಂತೆ ಸೂಚಿಸಲಾಗಿತ್ತು.
ಆದರೇ, ರಾಜ್ಯ ಸರ್ಕಾರವು ಗಣಿ ಬ್ಲಾಕ್ ಗಳ ಗಡಿಯನ್ನು ಬದಲಾವಣೆ ಮಾಡಿದೆ ಎಂದು ಸಿಇಸಿ ಈಗ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us