/newsfirstlive-kannada/media/media_files/2026/01/02/ballari-rajashekara-2-2026-01-02-09-44-39.jpg)
ಬಳ್ಳಾರಿ: ಬ್ಯಾನರ್ ಗಲಾಟೆಯಲ್ಲಿ ಗುಂಡೇಟಿಗೆ ಜೀವ ಕಳೆದುಕೊಂಡ ರಾಜಶೇಖರ್​ ಅವರ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದೆ. ವಿಷಯ ತಿಳಿದು ಶವಗಾರಕ್ಕೆ ಬಂದಿದ್ದ ರಾಜಶೇಖರ್ ತಾಯಿ ಕಣ್ಣೀರಿಟ್ಟಿದ್ದಾರೆ.
ಮಗನ ಜೀವ ಹೋಗಿದೆ. ನಮ್ಮ ಪಾಡಿಗೆ ನಾವಿದ್ವಿ. ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೇವು. ಮಗ ಭರತ್ ರೆಡ್ಡಿ ಹಿಂದೆ ಆತ ಓಡಾಡುತ್ತಿದ್ದ, ನಮ್ಮ ಮನೆಯವರು ಬಿಜೆಪಿಯಲ್ಲಿದ್ರು. ನನ್ನ ಮಗ ಕಾಂಗ್ರೆಸ್​ನಲ್ಲಿ ಓಡಾಡುತ್ತಿದ್ದ. ನನ್ನ ಮಗನಿಗೆ ಅಪಘಾತವಾಗಿದೆ ಎಂದು ಕರೆದುಕೊಂಡು ಬಂದಿದ್ದರು. ಇಲ್ಲಿ ನೋಡಿದ್ರೆ ಈ ರೀತಿ ಆಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಬಳ್ಳಾರಿ ವಿಮ್ಸ್​ ಶವಗಾರದ ಮುಂದೆ ತಾಯಿ ಕಣ್ಣೀರು ಇಟ್ಟಿದ್ದಾರೆ.
ಮೃತ ರಾಜಶೇಖರ್ ತಂದೆ ತಾಯಿಗೆ ನಾಲ್ವರು ಮಕ್ಕಳು. ಇಬ್ಬರು ಸಹೋದರಿಯರು, ಇಬ್ಬರು ಸಹೋದರರು. ಇಬ್ಬರೂ ಸಹೋದರಿಗೆ ಮದುವೆಯಾಗಿದೆ. ಮೃತ ರಾಜಶೇಖರ್ ಮತ್ತು ಸಹೋದರ ಈಶ್ವರ್ ರೆಡ್ಡಿಗೆ ಇನ್ನೂ ಮದುವೆಯಾಗಿಲ್ಲ. ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆ.. ಗುಂಡೇಟಿಗೆ ಕಾಂಗ್ರೆಸ್​ ಕಾರ್ಯಕರ್ತ ಬಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us