/newsfirstlive-kannada/media/media_files/2026/01/07/ballary-new-igp-and-sp-appointment-2026-01-07-14-36-42.jpg)
ಬಳ್ಳಾರಿ ವಲಯ ಐಜಿಪಿ ಆಗಿ ಡಾ.ಪಿ.ಎಸ್. ಹರ್ಷ ನೇಮಕ
ಬಳ್ಳಾರಿ ವಲಯಕ್ಕೆ ನೂತನ ಐಜಿಪಿ ಹಾಗೂ ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ನೇಮಕ ಮಾಡಲಾಗಿದೆ. ಬಳ್ಳಾರಿ ವಲಯ ಐಜಿಪಿಯಾಗಿ ಹರ್ಷ ಗುಪ್ತಾ ನೇಮಕ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಗೆ ನೂತನ ಎಸ್ಪಿ ಆಗಿ ಡಾ. ಸುಮನ್ ಡಿ ಪೆನ್ನೇಕರ್ ನೇಮಕ ಮಾಡಲಾಗಿದೆ.
/filters:format(webp)/newsfirstlive-kannada/media/media_files/2026/01/07/ballary-new-igp-and-sp-appointment-1-2026-01-07-14-41-16.jpg)
ರಾಜಕೀಯವಾಗಿ ಸೂಕ್ಷ್ಮ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಜನವರಿ 1 ರಂದು ರಾಜಕೀಯ ಘರ್ಷಣೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ನಾಯಕರ ನಡುವೆ ನಡೆದ ಘರ್ಷಣೆಯಲ್ಲಿ ರಾಜಶೇಖರ್ ರೆಡ್ಡಿ ಎಂಬ ಕಾರ್ಯಕರ್ತನ ಹತ್ಯೆಯಾಗಿದೆ.
ಹೀಗಾಗಿ ಸರ್ಕಾರ ಬಳ್ಳಾರಿ ವಲಯ ಐಜಿಪಿ ಹಾಗೂ ಎಸ್.ಪಿ. ಆಗಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿದೆ. ಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಅಧಿಕಾರಿಗಳನ್ನು ನೇಮಕ ಮಾಡಿದೆ. ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರು ಅಮಾನತ್ತಿನ ಬಳಿಕ ನೂತನ ಎಸ್ಪಿ ಆಗಿ ಸುಮನ್ ಡಿ ಪನ್ನೇಕರ್ ರನ್ನು ನೇಮಿಸಿದೆ.
ಬಳ್ಳಾರಿಯಲ್ಲಿ ರಾಜಕೀಯ ಘರ್ಷಣೆಯಾದ ಬಳಿಕ ಜನವರಿ 2 ರಂದೇ ಎಸ್‌ಪಿ ಆಗಿ ನೇಮಕವಾಗಿದ್ದ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿತ್ತು. ಈಗ ಆ ಸ್ಥಾನಕ್ಕೆ ಸುಮನ್ ಡಿ ಪನ್ನೇಕರ್ ಅವರನ್ನು ನೇಮಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us