/newsfirstlive-kannada/media/media_files/2026/01/07/bellary-firing-reveals-gun-shots-truth-2026-01-07-18-10-48.jpg)
ಬಳ್ಳಾರಿ ಫೈರಿಂಗ್ ವಿಡಿಯೋ ಸಾಕ್ಷ್ಯ ಲಭ್ಯ
ಜನವರಿ 1 ರಂದು ಬಳ್ಳಾರಿ ನಗರದ ಜನಾರ್ಧನ ರೆಡ್ಡಿ ಮನೆ ಮುಂದೆ ನಡೆದ ರಾಜಕೀಯ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಘಟನೆ ಸಂಭವಿಸಿದ ಸಂದರ್ಭದ ವಿಡಿಯೋಗಳು ಈಗ ಒಂದೊಂದಾಗಿ ಹೊರಬರುತ್ತಿವೆ. ಘಟನೆ ಹೇಗಾಯಿತು? ಯಾರ ಬಂದೂಕಿನ ಗುಂಡಿನಿಂದ ರಾಜಶೇಖರ್ ರೆಡ್ಡಿ ಮೃತಪಟ್ಟ ಎಂಬುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ರಾಜಶೇಖರ್ ಹತ್ಯೆಗೆ ಕಾರಣವಾದ ಬಂದೂಕು ಯಾರದ್ದು? ಯಾರ ಬಂದೂಕಿನಿಂದ ಹಾರಿದ ಗುಂಡು ರಾಜಶೇಖರ್ ರೆಡ್ಡಿ ಜೀವ ಬಲಿ ಪಡೆಯಿತು? ಎಂಬುದು ವಿಡಿಯೋಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಜನವರಿ 1ರ ಸಂಜೆ ಜನಾರ್ಧನರೆಡ್ಡಿ ಮನೆ ಬಳಿ ಬ್ಯಾನರ್ ಹಾಕುವ ವಿಚಾರವಾಗಿ ಗಲಾಟೆ ಶುರುವಾಗಿದೆ. ಆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ಜನಾರ್ಧನ ರೆಡ್ಡಿ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಕೂಡ ಕಲ್ಲು ತೆಗೆದುಕೊಂಡು, ಬಿಜೆಪಿ ಕಾರ್ಯಕರ್ತರು ಹಾಗೂ ಜನಾರ್ಧನ ರೆಡ್ಡಿ ಮನೆ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಈ ವೇಳೆ ಮುಂದೆಯಿಂದ ಹಿಂದಕ್ಕೆ ರಾಜಶೇಖರ್ ರೆಡ್ಡಿ ಓಡಿ ಹೋಗುವಾಗ, ಕಾಂಗ್ರೆಸ್ ನಾಯಕ ಸತೀಶ್ ರೆಡ್ಡಿ ಗನ್ ಮ್ಯಾನ್‌ನ ಗನ್ ಮೇಲೆ ರಾಜಶೇಖರ್ ರೆಡ್ಡಿ ಬಿದ್ದಿದ್ದಾರೆ. ಆಗ ಗನ್ ನಿಂದ ಗುಂಡು ಫೈರ್ ಆಗಿದೆ. ಜೊತೆಗೆ ಸತೀಶ್ ರೆಡ್ಡಿಯ ಬಿಹಾರದ ಗನ್ ಮ್ಯಾನ್ ಗಳು ಯದ್ವಾತದ್ವಾ ಫೈರ್ ಮಾಡಿದ್ದಾರೆ. ಜನಾರ್ಧನ ರೆಡ್ಡಿ ಮನೆ ಮೇಲೆ ಫೈರಿಂಗ್ ಮಾಡಿದ್ದಾರೆ. ಈ ವೇಳೆಯೇ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದರಿಂದ ಹಿಂದಕ್ಕೆ ಓಡಿ ಹೋಗುವಾಗ, ರಾಜಶೇಖರ್ ರೆಡ್ಡಿ ಗನ್ ಮೇಲೆಯೇ ಬಿದ್ದಿದ್ದಾರೆ.
ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ, ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಮಾಡಿದ ಫೈರಿಂಗ್ ನಿಂದಲೇ ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ. ಇದಕ್ಕೆ ವಿಡಿಯೋಗಳೇ ಸ್ಪಷ್ಟ ಸಾಕ್ಷ್ಯಗಳಾಗಿವೆ. ನ್ಯೂಸ್ ಫಸ್ಟ್ ಗೆ ಬಳ್ಳಾರಿ ಫೈರಿಂಗ್ ಘಟನೆಯ ವಿಡಿಯೋಗಳು ಲಭ್ಯವಾಗಿವೆ. ಅದರ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ತಾವು ನೋಡಬಹುದು.
ಇನ್ನೂ ಸಿಎಂ ಸಿದ್ದರಾಮಯ್ಯ ಕೂಡ ಈಗಾಗಲೇ ಖಾಸಗಿ ಗನ್ ಮ್ಯಾನ್ ಗಳು ಹಾರಿಸಿದ ಗುಂಡಿನಿಂದಲೇ ರಾಜಶೇಖರ್ ರೆಡ್ಡಿ ಮೃತಪಟ್ಟಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪೊಲೀಸರು ಹಾರಿಸಿದ ಗುಂಡಿನಿಂದ ರಾಜಶೇಖರ್ ರೆಡ್ಡಿ ಸಾವನ್ನಪ್ಪಿಲ್ಲ ಎಂದಿದ್ದಾರೆ.
ಇನ್ನೂ ಇಂದು ದಾವಣಗೆರೆ ಜಿಲ್ಲೆಯಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಕೂಡ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳ ಗನ್ ಗುಂಡಿನಿಂದಲೇ ರಾಜಶೇಖರ್ ರೆಡ್ಡಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಹೀಗಾಗಿ ಬಳ್ಳಾರಿ ಪೊಲೀಸರು ಈಗಾಗಲೇ ಬಿಹಾರ ಮೂಲದ ನಾಲ್ಕು ಮಂದಿ ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us