/newsfirstlive-kannada/media/media_files/2026/01/13/janardhan-reddy-border-depiction-and-mining-2026-01-13-13-34-50.jpg)
ಜನಾರ್ಧನ ರೆಡ್ಡಿಯಿಂದ ಗಡಿ ಅತಿಕ್ರಮಣ ಸಾಬೀತು
ಮಾಜಿ ಸಚಿವ, ಹಾಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಗಡಿ ಒತ್ತುವರಿ ಮಾಡಿರುವ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಉರುಳಾಗೋ ಸಾಧ್ಯತೆ ಇದೆ.
ಗಡಿ ಒತ್ತುವರಿ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ನೇಮಿಸಲಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುಧಾಂಶು ದುಲಿಯಾ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಸುಧಾಂಶ ದುಲಿಯಾ ನೇತೃತ್ವದ ತಂಡ ಮಾಡಿದ್ದ ಸರ್ವೇಯಲ್ಲಿ ಅಕ್ರಮ ಸಾಬೀತಾಗಿದೆ. ಗಡಿಯಲ್ಲಿರೋ ಸುಂಕಲಮ್ಮ ದೇವಸ್ಥಾನದ ಬಳಿ ಅಕ್ರಮ ಮೈನಿಂಗ್ ಮಾಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.
ಜನಾರ್ದನ ರೆಡ್ಡಿ ಒಡೆತನದ ಗಣಿ ಕಂಪನಿಗಳು ಕರ್ನಾಟಕದ ಗಡಿ ಒತ್ತುವರಿ ಮಾಡಿದ್ದಕ್ಕೆ ಸರ್ವೇ ತಂಡ ಸಾಕ್ಷಿ ನೀಡಿದೆ. ಸುಪ್ರೀಂ ಕೋರ್ಟಿನ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಆಂಧ್ರದ ಗಡಿ ಭಾಗದಲ್ಲಿರೋ ಜನಾರ್ದನ ರೆಡ್ಡಿ ಒಡೆತನದ ನಾಲ್ಕು ಗಣಿ ಕಂಪನಿ ಸೇರಿ ಒಟ್ಟು ಆರು ಗಣಿ ಕಂಪನಿಯ ವಿರುದ್ಧ ಕಳೆದ ತಿಂಗಳು ಸರ್ವೇ ಮಾಡಲಾಗಿತ್ತು. ಸರ್ವೇ ಮಾಡಿದ ನಕ್ಷೆ ಮತ್ತು ಸುಂಕಲಮ್ಮ ದೇವಸ್ಥಾನ ಇದ್ದ ಸ್ಥಳದ ನಕ್ಷೆಯ ಪ್ರತಿ ಲಭ್ಯವಾಗಿದೆ.
ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ಸಾಗಾಟ, ಪರಿಸರದ ಮೇಲಾದ ಪರಿಣಾಮ, ಮತ್ತು ಕರ್ನಾಟಕ ಆಂಧ್ರದ ಪರ್ಮಿಟ್ ದುರ್ಬಳಕೆ ಬಗ್ಗೆ ತನಿಖೆ ನಡೆಸಿತ್ತು. ಡ್ರೋಣ್ ಸರ್ವೇ ಸೇರಿದಂತೆ ಅತ್ಯಾಧುನಿಕ ಮಾದರಿಯಲ್ಲಿ ಸರ್ವೇ ಕಾರ್ಯ ಮಾಡಲಾಗಿತ್ತು. ಈ ಸರ್ವೇ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಜನವರಿ ಮೊದಲ ವಾರದಲ್ಲಿ ನೀಡಬೇಕಿತ್ತು. ಆದರೇ, ಜನಾರ್ದನ ರೆಡ್ಡಿ ಅವರು ಜನವರಿ 20ರವರೆಗೆ ತಮ್ಮ ಪರವಾಗಿ ವಿವರಣೆ ನೀಡಲು ಸಮಯಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ಜನವರಿ ಕೊನೆ ಭಾಗದಲ್ಲಿ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಕೆ ಆಗಲಿದೆ.
ವರದಿ ಸಲ್ಲಿಕೆಯಾಗುತ್ತಿದ್ದಂತೆ ಜನಾರ್ದನ ರೆಡ್ಡಿಗೆ ಮತ್ತೆ ಗಣಿ ಸಂಕಷ್ಟ ಶುರುವಾಗುತ್ತೆ.
ಸುಪ್ರೀಂ ಕೋರ್ಟ್ ಆದೇಶ ನೀಡಿದ ಪ್ರದೇಶದಲ್ಲಿ ಯಾವ್ಯಾವ ಗಣಿಗಳು ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿರುವ ಮಾಹಿತಿ.
ಜನಾರ್ದನ ರೆಡ್ಡಿ ಒಡೆತನದ
( ಓಬಳಪುರಂ ಮೈನಿಂಗ್ ಕಂಪನಿ)
Omc 1 ... 25.98 ಹೆಕ್ಟೇರ್
Omc 2 ..39.59 ಹೆಕ್ಟೇರ್
Omc 3 ..68.52 ಹೆಕ್ಟೇರ್ ಮತ್ತು
AMC ( ಅನಂತಪುರಂ ಮೈನಿಂಗ್ ಕಂಪನಿ.) . 6.50.. ಹೆಕ್ಟೇರ್ ಪ್ರದೇಶದಲ್ಲಿ ಮೈನಿಂಗ್ ಮಾಡಿದೆ
ಇದರ ಜೊತೆಗೆ ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿ. 27.12 ಹೆಕ್ಟೇರ್
ವೈ.ಮ.& ಸನ್ಸ್.. ಕಂಪನಿ 20.24 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದೆ
ಇದರಲ್ಲಿ (Omc 3) ಓಬಳಾಪುರಂ ಮೈನಿಂಗ್ ಕಂಪನಿಯೊಂದರಲ್ಲಿಯೇ ಅತಿಹೆಚ್ಚು ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ ಎಂದು ಸಿಬಿಐ ವರದಿ ಕೊಟ್ಟಿತ್ತು
ಆಂಧ್ರದ ಗಡಿಯಲ್ಲಿರೋ ಎಲ್ಲಾ ಮೈನಿಂಗ್ ಕಂಪನಿಯ ಅಕ್ರಮಕ್ಕೆ ಸಂಬಂಧಿಸಿದಂತೆ ಆಂಧ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸರ್ವೇ ಮಾಡಿ ಇದೀಗ ಸುಪ್ರೀಂ ಕೋರ್ಟ್ ಗೆ ವರದಿಯನ್ನು ನಿವೃತ್ತ ಜಸ್ಟೀಸ್ ಸುಧಾಂಶು ಧುಲಿಯಾ ನೇತೃತ್ವದ ತಂಡ ಸಲ್ಲಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us