/newsfirstlive-kannada/media/media_files/2026/01/06/complaiant-against-zameer-ahmed-khan-2026-01-06-16-03-24.jpg)
ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಪೊಲೀಸರ ವೈಫಲ್ಯವನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಒಪ್ಪಿಕೊಂಡಿದ್ದಾರೆ. ಜನವರಿ 1 ರಂದು ಮಧ್ಯಾಹ್ನ 2.30 ಕ್ಕೆ ಗಲಾಟೆ ಶುರುವಾಗಿದೆ. ಗಲಾಟೆಯನ್ನು ತಡೆಯಬಹುದಿತ್ತು. ಆದರೇ, ಗಲಾಟೆ ತಡೆಗೆ ವಿಫಲವಾದ ಹಿನ್ನೆಲೆಯಲ್ಲಿ ಐಜಿಪಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಜಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/07/zameer-admits-police-failure-in-ballary-clash-2026-01-07-14-09-46.jpg)
ಬಳ್ಳಾರಿ ಶಾಸಕ ಭರತ್ ರೆಡ್ಡಿ ಬಂದಿರಲಿಲ್ಲ ಅಂದ್ರೆ ಸಮಸ್ಯೆ ದೊಡ್ಡದಾಗುತ್ತಿತ್ತು. ಐಜಿಪಿ ಅವರು ನನಗೆ ಹಾಗೂ ಡಿಸಿಎಂಗೆ ಮಾಹಿತಿ ನೀಡಿದ್ದಾರೆ. ಶಾಸಕ ಭರತ್ ರೆಡ್ಡಿ 7 ಗಂಟೆ ಮೇಲೆ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಐಜಿಪಿ ವರ್ಗಾವಣೆ ಬಗ್ಗೆ ಸಿಎಂರನ್ನು ಕೇಳಬೇಕು. ಬ್ಯಾನರ್ ವಿಚಾರ ಮಧ್ಯಾಹ್ನ 2.30ಕ್ಕೆ ನಡೆಯುತ್ತಾ ಇತ್ತು. ಪೊಲೀಸರು ತಡೆಯಬಹುದಿತ್ತು, ಅವಾಯ್ಡ್ ಮಾಡಬಹುದಿತ್ತು. ಸತೀಶ್ ರೆಡ್ಡಿ ಸಂಜೆ 4.30ಕ್ಕೆ ಹೋಗಿದ್ದಾರೆ. ಎಸ್‌ಪಿ, ಐಜಿ ಅಲ್ಲಿಯವರೆಗೂ ಘಟನಾ ಸ್ಥಳಕ್ಕೆ ಹೋಗಿಲ್ಲ . ಸತೀಶ್ ರೆಡ್ಡಿ ಗನ್ ಮ್ಯಾನ್ ಗುಂಡಿನಿಂದಲೇ ರಾಜಶೇಖರ ಸತ್ತಿದ್ದಾರೆ. ಸತೀಶ್ ರೆಡ್ಡಿರನ್ನು ಹೀನಾಯವಾಗಿ ಹೊಡೆದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us