/newsfirstlive-kannada/media/media_files/2026/01/02/bellary-sp-pavan-nejjur-suspended-2-2026-01-02-20-05-16.jpg)
ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರು ಸೇವೆಯಿಂದ ಸಸ್ಪೆಂಡ್
ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಿನ್ನೆ ಬೆಳಿಗ್ಗೆಯಷ್ಟೆ ಬಳ್ಳಾರಿ ಎಸ್‌ಪಿಯಾಗಿ ಚಾರ್ಜ್ ತೆಗೆದುಕೊಂಡಿದ್ದ ಪವನ್ ನೆಜ್ಜೂರು ಅವರನ್ನು ಇಂದು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಾರ್ಜ್ ತೆಗೆದುಕೊಂಡ ಕೆಲವೇ ಗಂಟೆಯಲ್ಲಿ ಬಳ್ಳಾರಿಯಲ್ಲಿ ಗಲಾಟೆ ನಡೆದಿತ್ತು. ಗುಂಡು ಹಾರಿಸಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿಯನ್ನು ಹತ್ಯೆ ಮಾಡಲಾಗಿತ್ತು. ಶಾಸಕ ಗಾಲಿ ಜನಾರ್ಧನ ರೆಡ್ಡಿ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಗಲಾಟೆಗಳನ್ನು ನಿಯಂತ್ರಿಸಲು ವಿಫಲವಾದ ಕಾರಣಕ್ಕಾಗಿ ಜಿಲ್ಲಾ ಎಸ್‌ಪಿ ಪವನ್ ನೆಜ್ಜೂರ್ ರನ್ನು ಅಮಾನತು ಮಾಡಲಾಗಿದೆ.
ಬಳ್ಳಾರಿಯಲ್ಲಿ ನಿನ್ನೆ ಬೆಳಿಗ್ಗೆಯವರೆಗೂ ಶೋಭಾರಾಣಿ ಎಸ್ಪಿಯಾಗಿದ್ದರು. ಶೋಭಾರಾಣಿ ಅವರನ್ನು ಡಿಸೆಂಬರ್ 31ರ ರಾತ್ರಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಪವನ್ ನೆಜ್ಜೂರು ಅವರನ್ನು ನೇಮಕ ಮಾಡಲಾಗಿತ್ತು. ಜನವರಿ 1ರ ಬೆಳಿಗ್ಗೆ ಅಧಿಕಾರ ವಹಿಸಿಕೊಂಡಿದ್ದರು.
ಬಳ್ಳಾರಿ ಗಲಾಟೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ವಿಫಲವಾಗಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳಿಗೂ ಸರಿಯಾಗಿ ಮಾಹಿತಿ ನೀಡಿಲ್ಲ ಎಂಬ ಕಾರಣದಿಂದ ಬಳ್ಳಾರಿ ಎಸ್.ಪಿ. ಪವನ್ ನೆಜ್ಜೂರು ವಿರುದ್ಧ ಕ್ರಮಕ್ಕೆ ಬಳ್ಳಾರಿ ಡಿಐಜಿ ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸು ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್‌ಪಿ ಪವನ್ ನೆಜ್ಜೂರ್ ರನ್ನು ಸೇವೆಯಿಂದ ಅಮಾನತು ಮಾಡಿದೆ.
/filters:format(webp)/newsfirstlive-kannada/media/media_files/2026/01/02/bellary-sp-pavan-nejjur-suspended-1-2026-01-02-19-59-27.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us