ತಂದೆ-ತಾಯಿ, ತಂಗಿಯ ಕತ್ತು ಕೊಯ್ದು ಕೊಂದ ಕಿರಾತಕ: ಅಕ್ಷಯ್​ನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಕೊಟ್ಟೂರಿನ ಜನರು

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಅಕ್ಷಯ್ ಎಂಬಾತ ತನ್ನ ಹೆತ್ತ ತಂದೆ, ತಾಯಿ ಹಾಗೂ ಒಡಹುಟ್ಟಿದ ತಂಗಿಯನ್ನು ರಹಸ್ಯವಾಗಿ ಕೊಂದು ಹೂತು ಹಾಕಿದ್ದ. ಬಳಿಕ ಬೆಂಗಳೂರಿಗೆ ಬಂದು ತನ್ನ ಹೆತ್ತ ತಂದೆ, ತಾಯಿ, ತಂಗಿ ಮಿಸ್ಸಿಂಗ್ ಆಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಇಂದು ಶವಗಳನ್ನು ಹೊರ ತೆಗೆಯಲಾಗಿದೆ.

author-image
Chandramohan
KOTTURU AKSHAYA TRIPLE MURDER
Advertisment

    ಒಂದು ಕುಟುಂಬಕ್ಕೆ ಆಸರೆಯಾಗಿ, ತಂಗಿ ಬದುಕಿಗೆ ಬೆಳಕಾಗಬೇಕಿದ್ದ ಯುವಕನೊಬ್ಬ ಅವರೆಲ್ಲರ ಪಾಲಿಗೆ ಯಮನಾಗಿಬಿಟ್ಟಿದ್ದಾನೆ.. ಹೆತ್ತು-ಹೊತ್ತು ಸಾಕಿದವರನ್ನ, ರಕ್ತ ಹಂಚ್ಕೊಂಡು ಹುಟ್ಟಿದೋಳನ್ನ ಕತ್ತು ಸೀಳಿ ಕೊಂದು ರಾಕ್ಷಸನಂತೆ ವರ್ತಿಸಿದ್ದಾನೆ.. ಅಣ್ಣನ ಕ್ರೌರ್ಯಕ್ಕೆ ಬಲಿಯಾದ ತಂಗಿ, ಮಗನ ಮುನಿಸಿಗೆ ಮಂಕಾದ ಹೆತ್ತವರು ಸಾವಿನ ಮನೆ ಸೇರಿದ್ದಾರೆ.
     ತಂದೆ-ತಾಯಿ, ತಂಗಿಯ ಕತ್ತು ಕೊಯ್ದು ಕೊಂದ ಕಿರಾತಕ
    ಅಕ್ಷಯ್​ನ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಕೊಟ್ಟೂರಿನ ಜನರು

    ಈತನ ಹೆಸರು ಅಕ್ಷಯ್​, ವಿಜಯ ನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆಯ ಎಲ್​ಬಿ ಬಡಾವಣೆ ನಿವಾಸಿ.. ಈ ಅಕ್ಷಯ್​ನ ಅಟ್ಟಹಾಸಕ್ಕೆ ಸದ್ಯ ಇಡೀ ಕೊಟ್ಟೂರು ಪಟ್ಟಣವೇ ಬೆಚ್ಚಿಬಿದ್ದಿದೆ.. ಹೆತ್ತು ಹೊತ್ತು ಸಾಕಿದವರನ್ನೇ ಕಿತ್ತು ತಿಂದ ಈ ಕಿರಾತಕನ ಕಂಡು ಕುಟುಂಬಸ್ಥರು ಹಿಡಿ ಶಾಪ ಹಾಕಿದ್ದಾರೆ.. ಈ ಅಕ್ಷಯ್​ ಕುಮಾರ್​ ತನ್ನ ತಂದೆ-ತಾಯಿ ಹಾಗೂ ತಂಗಿಯನ್ನ ಕತ್ತುಕೊಯ್ದು ಭೀಕರವಾಗಿ ಹತ್ಯೆಗೈದಿದ್ದಾನೆ.. ಈ ಕೃತ್ಯ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
    ಇಡೀ ಕುಟುಂಬವನ್ನ ಕೊಂದು ಮನೆಯೊಳಗೆ ಹೂತಿದ್ದ ರಾಕ್ಷಸ!
    ಈ ಅಕ್ಷಯ್​ ಕುಮಾರ್ ತನ್ನ​ ತಂದೆ ಭೀಮರಾಜ್, ತಾಯಿ ಜಯಲಕ್ಷ್ಮೀ, ಸಹೋದರಿ ಅಮೃತಳನ್ನ ಹತ್ಯೆಗೈದು ಮೂವರನ್ನೂ ಮನೆಯೊಳಗೆ ಹೂತುಹಾಕಿದ್ದ.. ಕಳೆದ ಜನವರಿ 26ರಂದು ಈ ಕೃತ್ಯ ಎಸಗಿದ್ದ ಪಾಪಿ ಮೂವರ ಕಾಲನ್ನೂ ಕಟ್ಟಿ ಮನೆಯೊಳಗೆ 4 ಅಡಿ ಆಳ, 2 ಅಡಿ ಅಗಲದ ಗುಂಡಿ ತೋಡಿ ಮನೆಯ ಹಾಲ್​ನಲ್ಲಿ ಹೂತುಹಾಕಿದ್ದ.

    KOTTURU AKSHAYA TRIPLE MURDER (2)


    ತಂದೆಯ ಕಾಲನ್ನೇ ಕತ್ತರಿಸಿ ಕ್ರೌರ್ಯ ಮೆರೆದಿದ್ದ ಅಕ್ಷಯ್​
    ಅಕ್ಷಯ್ ಹೆತ್ತವರ ಮೇಲೆ​ ಅದೆಷ್ಟರ ಮಟ್ಟಿಗೆ ಕ್ರೌರ್ಯ ಮರೆದಿದ್ದಾನೆ ಅಂದ್ರೆ ತನ್ನ ತಂದೇ ಕಾಲನ್ನೇ ಕತ್ತರಿಸಿ ಚಿತ್ರ ಹಿಂಸೆ ಮಾಡಿದ್ದಾನೆ.. ಸ್ಪ್ರೇ ಸಿಂಪಡಿಸಿ ತಂದೆ, ತಾಯಿ, ತಂಗಿ ಕತ್ತು ಸೀಳಿ ಹತ್ಯೆ ಮಾಡಿರೋ ಅಕ್ಷಯ್​ ಯಾರೂ ಮಾಡಬಾರದ ಪಾಪ ಕೃತ್ಯ ಎಸಗಿಬಿಟ್ಟಿದ್ದಾನೆ.. ಅಕ್ಷಯ್​ ಅಟ್ಟಹಾಸವನ್ನ ಕಂಡು ಕುಟುಬಂಸ್ಥರು ಹಿಡಿಶಾಪ ಹಾಕ್ತಿದ್ದಾರೆ.

    ಮನೆಯ ಹಾಲ್​ನಲ್ಲಿ ಹೂತುಹಾಕಲಾಗಿದ್ದ ಮೂವರ ಮೃತದೇಹಗಳನ್ನ ಹೊರತೆಗೆಯುವಾಗ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.. ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಎಸ್​ಪಿ ಎಸ್. ಜಾಹ್ನವಿ ಘಟನೆ ಬಗ್ಗೆ ಮಾಹಿತಿ ಪಡೆದ್ರು.. ಆರೋಪಿ ಅಕ್ಷಯ್ ಕುಟುಂಬ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನಾಯಕನಹಟ್ಟಿ ಗ್ರಾಮದವರು ಅಂತ ಹೇಳಲಾಗ್ತಿದ್ದು, ಕೆಲಸ ಅರಸಿ ಕೊಟ್ಟೂರಿಗೆ ಬಂದಿದ್ರು ಎನ್ನಲಾಗ್ತಿದೆ.. ಹಲವು ವರ್ಷಗಳಿಂದ ಕೊಟ್ಟೂರು ಪಟ್ಟಣದ ಹರಪನಹಳ್ಳಿ ರಸ್ತೆ ಎಲ್.ಬಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಅಕ್ಷಯ್ ಕುಟುಂಬ ವಾಸವಿತ್ತು.
    ಇನ್ನೂ ಜನವರಿ 26ರಂದು ಕೊಲೆ ಮಾಡಿ ಬೆಂಗಳೂರಿಗೆ ತೆರಳಿದ್ದ ಅಕ್ಷಯ್​, ಬೆಂಗಳೂರಿನ‌ ತಿಲಕ ನಗರ ಠಾಣೆಯಲ್ಲಿ ಮಿಸ್ಸಿಂಗ್ ದೂರು ಕೊಡಲು ಹೋಗಿದ್ದ.. ಈತನ ವರ್ತನೆ ನಡವಳಿಕೆಯಿಂದ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದಾಗ ಕೊಲೆ ಮಾಡಿರೋ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದ.. ತಿಲಕ್ ನಗರ ಠಾಣೆ ಪೊಲೀಸರ ಮಾಹಿತಿ ಮೇರೆಗೆ ಕೊಲೆ ನಡೆದಿರೋ ಸ್ಥಳಕ್ಕೆ ಕೊಟ್ಟೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆ ಸತ್ಯ ಬಯಲಾಗಿದೆ.
     ಒಟ್ಟಿನಲ್ಲಿ ಅಕ್ಷಯ್​ನ ಅಟ್ಟಹಾಸಕ್ಕೆ ಇಡೀ ಕುಟುಂಬವೇ ಬಲಿಯಾಗಿದೆ.. ಅಷ್ಟಕ್ಕೂ ಈ ಅಕ್ಷಯ್​ ಹೆತ್ತವರನ್ನೂ ಕೊಂದು ತನ್ನ ಒಡ ಹುಟ್ಟಿದವಳ ಪಾಲಿಗೆ ರಾಕ್ಷಸನಾಗಿದ್ದು ಯಾಕೆ ಅನ್ನೋ ಸತ್ಯ ಪೊಲೀಸರ ತನಿಖೆ ಬಳಿಕ ಹೊರಬರಬೇಕಿದೆ. 

    KOTTURU AKSHAYA TRIPLE MURDER (3)

    ಹಂತಕ ಅಕ್ಷಯ್

    ಶಿವಾನಂದ್​, ನ್ಯೂಸ್​ ಫಸ್ಟ್,​ ವಿಜಯನಗರ

    kotturu triple murder case
    Advertisment