ಮಂಗಳಮುಖಿ, ಆಟೋ ಚಾಲಕನ ಮಧ್ಯೆ ಪ್ರೀತಿ-ಪ್ರೇಮ -ಈಗ ದುರಂತ ಅಂತ್ಯ, ಆಗಿದ್ದೇನು?

ಪ್ರೀತಿ ಪ್ರೇಮ ಎಂದು ನಂಬಿಸಿ ಕೊನೆಗೆ ಹಣಕ್ಕಾಗಿ ಕೊ* ಮಾಡಿದ್ದಾನೆ ಎಂಬ ಗಂಭೀರ ಆರೋಪಗಳ ನಡುವೆಯೇ ಬಳ್ಳಾರಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಈ ದಾರುಣ ಘಟನೆ ನಡೆದಿದೆ.

author-image
Ganesh Kerekuli
ballari lovers
Advertisment

ಪ್ರೀತಿ ಪ್ರೇಮ ಎಂದು ನಂಬಿಸಿ ಕೊನೆಗೆ ಹಣಕ್ಕಾಗಿ ಕೊ* ಮಾಡಿದ್ದಾನೆ ಎಂಬ ಗಂಭೀರ ಆರೋಪಗಳ ನಡುವೆಯೇ ಬಳ್ಳಾರಿಯಲ್ಲಿ ಪ್ರೇಮಿಗಳಿಬ್ಬರ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ನಗರದ ಕೆಎಂಎಫ್ (KMF) ಡೈರಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ಈ ದಾರುಣ ಘಟನೆ ನಡೆದಿದೆ.

ಮೃತ ದುರ್ದೈವಿಗಳನ್ನು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಆಟೋ ಚಾಲಕ ಶೇಖರ್ ಅಲಿಯಾಸ್ ಮಣಿ (31) ಹಾಗೂ ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ನಿವಾಸಿ, ಮಂಗಳಮುಖಿ ಸುಹಾಸಿನಿ (29) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ನೀಟ್ ಪಿ.ಜಿ.ಕೋರ್ಸ್ ಪ್ರವೇಶಕ್ಕೆ 800 ರಲ್ಲಿ 9 ಅಂಕ ಪಡೆದರೂ ಸಾಕು!!: ಸೀಟು ಖಾಲಿ ಉಳಿಯದಂತೆ ತಡೆಯಲು ಕಡಿಮೆ ಕಟ್ ಆಫ್ ಮಾರ್ಕ್ಸ್ ನಿಗದಿ!!

ಕಿಡಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಇವರಿಬ್ಬರ ಮೃತದೇಹಗಳು ಮನೆಯ ಕಿಡಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದು ಆತ್ಮ*ತ್ಯೆಯೋ ಅಥವಾ ಕೊ*ಯೋ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಬ್ರೂಸ್‌ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

6 ವರ್ಷಗಳ ಪ್ರೇಮ - ಹಣಕ್ಕಾಗಿ ಹ* ಆರೋಪ?

ಶೇಖರ್ ಮತ್ತು ಸುಹಾಸಿನಿ ಕಳೆದ ಆರು ವರ್ಷಗಳಿಂದ ಒಟ್ಟಿಗೆ ವಾಸವಿದ್ದರು. ಸುಹಾಸಿನಿ ಮಂಗಳಮುಖಿ ಎಂದು ತಿಳಿದಿದ್ದರೂ ಶೇಖರ್ ಆಕೆಯ ಹಿಂದೆ ಬಿದ್ದು ಪ್ರೀತಿಸುತ್ತಿದ್ದ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಶೇಖರ್, ಹಣಕ್ಕಾಗಿಯೇ ಸುಹಾಸಿನಿ ಜೊತೆಗಿದ್ದ ಎಂದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಚೀನಾದ ರೋಬೋಟಿಕ್ ಡಾಗ್ ಪ್ರದರ್ಶನ : ಜಾಗ ಖಾಲಿ ಮಾಡಲು ಗಾಲ್ಗೋಟಿಯಸ್ ವಿವಿಗೆ ಸೂಚನೆ

ಸುಹಾಸಿನಿ ಬಳಿ ಹಣ ಇರುವುದನ್ನು ಗಮನಿಸಿ ನಾಟಕವಾಡಿದ್ದ. ಈಗ ಆಕೆಯನ್ನು ಕೊ* ಮಾಡಿ, ತಾನು ನೇಣು ಹಾಕಿಕೊಂಡಿದ್ದಾನೆ ಎಂದು ಸುಹಾಸಿನಿ ಕಡೆಯವರು ಶೇಖರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲಿಸ್ ತನಿಖೆ ಚುರುಕು

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿಯ ವಿಮ್ಸ್ (BIMS) ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಇದು ಜೋಡಿ ಆತ್ಮಹತ್ಯೆಯೋ ಅಥವಾ ಕೊ* ಮಾಡಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೋ ಎಂಬ ಸತ್ಯ ಹೊರಬರಬೇಕಿದೆ. ಸದ್ಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಭಾರತಕ್ಕೆ ಯಾವಾಗ ಬರುತ್ತೇನೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ- ಬಾಂಬೆ ಹೈಕೋರ್ಟ್ ಗೆ ತಿಳಿಸಿದ ಉದ್ಯಮಿ ವಿಜಯ ಮಲ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ballari news
Advertisment