/newsfirstlive-kannada/media/media_files/2025/12/20/ayyappa-swamy-2025-12-20-12-21-31.jpg)
ಬಳ್ಳಾರಿ: ಕೇರಳದ ಅಯ್ಯಪ್ಪಸ್ವಾಮಿ ದೇಗುಲದಲ್ಲಿ 4.5 ಕೆಜಿ ಚಿನ್ನ ಕಳವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಳ್ಳಾರಿಯ ಗೋವರ್ಧನ್​​ನ ಬಂಧನವಾಗಿದೆ.
ಗೋವರ್ಧನ್, ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ. ರೊದ್ದಂ ಜ್ಯುವೆಲ್ಲರಿ ಮಾಲೀಕರಾಗಿದ್ದಾರೆ. ಕಳ್ಳತನ ಪ್ರಕರಣದ ತನಿಖೆ ನಡೆಸ್ತಿರುವ ಕೇರಳದ ಎಸ್​ಐಟಿ ಅಧಿಕಾರಿಗಳು, ಗೋವರ್ಧನ್​​ನನ್ನ ಬಂಧಿಸಿದ್ದಾರೆ. ಈ ಹಿಂದೆ ಎಸ್​ಐಟಿ ಅಧಿಕಾರಿಗಳು, ಇವರ ಮನೆ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿತ್ತು. ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್​ನಿಂದ ಗೋವರ್ಧನ್ ಚಿನ್ನ ಖರೀದಿಸಿರೋ ಆರೋಪವಿದೆ. ವಿಚಾರಣೆಗೆಂದು ಕರೆಸಿ ಇದೀಗ ಬಂಧನಕ್ಕೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ಇನ್ಶೂರೆನ್ಸ್ ಹಣಕ್ಕಾಗಿ ಅಪ್ಪನಿಗೆ ಹಾವಿನಿಂದ ಕಚ್ಚಿಸಿ ಜೀವ ತೆಗೆದ ಮಕ್ಕಳು.. ಸತ್ಯ ಬಯಲಾಗಿದ್ದೇ ರೋಚಕ..!
/filters:format(webp)/newsfirstlive-kannada/media/media_files/2025/10/25/ayyappa-2025-10-25-19-27-08.jpg)
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ಕಾರ್ಯದ (2019) ಸಂದರ್ಭದಲ್ಲಿ ಸುಮಾರು 4.5 ಕೆಜಿ ಚಿನ್ನದ ಕವಚಗಳು ನಾಪತ್ತೆಯಾಗಿವೆ. ಈ ಸಂಬಂಧ ಕೇರಳ ಹೈಕೋರ್ಟ್ ವಿಶೇಷ ತನಿಖಾ ತಂಡದಿಂದ (SIT) ತನಿಖೆಗೆ ಆದೇಶಿಸಿದ್ದು, ತನಿಖೆ ಬಳ್ಳಾರಿ, ಬೆಂಗಳೂರಿನವರೆಗೂ ತಲುಪಿದೆ. ವಿಜಯ್ ಮಲ್ಯ ದಾನ ನೀಡಿದ್ದ ಚಿನ್ನದ ಲೇಪನದಲ್ಲೇ ಈ ಅವ್ಯವಸ್ಥೆಯಾಗಿದ್ದು, ದಾಖಲೆಗಳಿಲ್ಲದೆ ಚಿನ್ನ ಕೊಂಡೊಯ್ಯಲಾಗಿತ್ತು ಎಂಬ ಆರೋಪಗಳಿವೆ.
ಇತ್ತೀಚೆಗೆ ಕೇರಳ ಹೈಕೋರ್ಟ್ ಪ್ರಕರಣ ತನಿಖೆ ವಿಳಂಭ ಆಗ್ತಿರೋದು ಅಸಮಾಧಾನ ವ್ಯಕ್ತಪಡಿಸಿತ್ತು. ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪಡೆದುಕೊಂಡ ಎಸ್ಐಟಿ ತ್ವರಿತಗತಿಯಲ್ಲಿ ವಿಚಾರಣೆ ನಡೆಸ್ತಿದೆ. ಅಂತೆಯೇ ಬಂಧಿತರ ಸಂಖ್ಯೆ 9ಕ್ಕೆ ಏರಿಕೆ ಆಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us