ಈ ಹರಕೆ ತೀರಿಸದಕ್ಕೆ ದರ್ಶನ್​ಗೆ ಸಂಕಷ್ಟ? ಅರ್ಚಕ ಬಿಚ್ಚಿಟ್ಟ ಸತ್ಯವೇನು..?

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆರೋಪಿ ದರ್ಶನ್​ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಕನಕ ದರ್ಗಮ್ಮ ದೇಗುಲದಲ್ಲಿ ಹರಕೆ ಮಾಡಿಕೊಂಡಿದ್ದಾರೆ.

author-image
Veenashree Gangani
darshan Kanaka Durgamma
Advertisment

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಆರೋಪಿ ದರ್ಶನ್​ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಕನಕ ದರ್ಗಮ್ಮ ದೇಗುಲದಲ್ಲಿ ಹರಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು

ಅದರಂತೆ ನಾಲ್ಕು ಬಾರಿ ಕನಕ ದುರ್ಗಮ್ಮ ದೇಗುಲಕ್ಕೆ ವಿಜಯಲಕ್ಷ್ಮಿ ಭೇಟಿ ನೀಡಿದ ಬಳಿಕ ದರ್ಶನ್​ಗೆ ಜಾಮೀನು ಮಂಜೂರು ಆಗಿತ್ತು. ಆದ್ರೆ, ದರ್ಶನ್​ ಬಿಡುಗಡೆ ಬಳಿಕ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿಗೆ ಬಾರದೇ ಇದ್ದಿದ್ರಿಂದ ದರ್ಶನ್​ಗೆ ಮತ್ತೆ ಸಂಕಷ್ಟ ಶುರುವಾಗಿದೆ.

Darshan and vijayalaxmi

ದರ್ಶನ್​ ಬಿಡುಗಡೆಯಾದ್ರೆ ಕನಕ ದುರ್ಗಮ್ಮ ದೇಲಗುಕ್ಕೆ ಭೇಟಿ ನೀಡಿ ಹರಕೆ ತೀರಿಸೋದಾಗಿ ವಿಜಯಲಕ್ಷ್ಮೀ ಹೇಳಿಕೊಂಡಿದ್ರು. ಆದ್ರೆ ದರ್ಶನ್​ ಬಿಡುಗಡೆ ಬಳಿಕ ವಿಜಯಲಕ್ಷ್ಮೀ ದೇವಾಲಯಕ್ಕೆ ಬಾರದೇ ಇದ್ದಿದ್ರಿಂದ ಮತ್ತೊಮ್ಮೆ ದರ್ಶನ್​ಗೆ ಸಂಕಷ್ಟ ಎದುರಾಗಿದೆ ಎನ್ನಲಾಗ್ತಿದೆ.

ಇನ್ನೂ, ಈ ಬಗ್ಗೆ ನ್ಯೂಸ್​ಫಸ್ಟ್​ನೊಂದಿಗೆ ಮಾತಾಡಿದ ಪ್ರಧಾನ ಅರ್ಚಕ, ವಿಜಯಲಕ್ಷ್ಮೀ ಅವರು ಎರಡು ಸಲ ಬಂದಿದ್ದರು. ಬಿಡುಗಡೆಯಾದ ಮೇಲೆ ಒಂದು ಸಲ ಬಂದಿದ್ದರು. ಆದರೆ ಇನ್ನೊಂದು ಸಾರಿ ಬಂದು ಪೂಜೆ ಮಾಡಿಸಿ ಎಂದು ಹೇಳಲಾಗಿತ್ತು. ಆದರೆ ದರ್ಶನ್​ ಬಿಡುಗಡೆ ಆದ ಮೇಲೆ ವಿಜಯಲಕ್ಷ್ಮಿ ಅವರು ಬಂದಿಲ್ಲ. ದುರ್ಗಮ್ಮನಿಗೆ ಹರಕೆ ತೀರಿಸಿದರೆ ಎಲ್ಲವೂ ಪರಿಹಾರ ಆಗುತ್ತೆ ಅನ್ನೋದು ಎಲ್ಲರ ನಂಬಿಕೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Darshan in jail
Advertisment