/newsfirstlive-kannada/media/media_files/2025/09/01/bng_living_together-2025-09-01-11-25-04.jpg)
ವಿಠಲನಿಂದ ಹತ್ಯೆಯಾದ ವನಜಾಕ್ಷಿ
ಬೆಂಗಳೂರು: ಲಿವಿಂಗ್ ಟುಗೆದರ್ನಲ್ಲಿದ್ದ 26 ವರ್ಷದ ಮಹಿಳೆಯನ್ನು 52 ವರ್ಷದ ಕ್ಯಾಬ್ ಚಾಲಕ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಜೀವ ತೆಗೆದಿರುವ ಘಟನೆ ಬೆಂಗಳೂರಿನ ದಕ್ಷಿಣದ ಹುಳಿಮಾವುನಲ್ಲಿ ನಡೆದಿದೆ.
ಆನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿ ವನಜಾಕ್ಷಿ (26) ಮೃತ ದುರ್ದೈವಿ. ಇದೇ ಗ್ರಾಮದ ಕ್ಯಾಬ್ ಚಾಲಕನಾಗಿದ್ದ ವಿಠಲ (52) ಕೃತ್ಯ ಎಸಗಿದ್ದು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಇಬ್ಬರೂ ನಾಲ್ಕೈದು ವರ್ಷಗಳಿಂದ ಲಿವಿಂಗ್ ಟುಗೆದರ್ನಲ್ಲಿದ್ದರು. ಇಲ್ಲಿ ಉಂಟಾದ ಬಿರುಕು, ಕೊನೆಯಲ್ಲಿ ಜೀವ ತಗೆಯುವ ಹಂತಕ್ಕೆ ಹೋಗಿದೆ.
ವನಜಾಕ್ಷಿಗೆ ಮದುವೆ ಆಗಿದ್ದು ಆದರೆ ಗಂಡ ಮೃತಪಟ್ಟಿದ್ದನು. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದ ವಿಠಲನಿಗೆ ವನಜಾಕ್ಷಿಯ ಪರಿಚಯವಾಗಿತ್ತು. ಈ ವಿಠಲನಿಗೂ ಇಬ್ಬರು ಪತ್ನಿಯರಿದ್ದರು. ಮೊದಲನೇ ಪತ್ನಿ ಉಸಿರು ಚೆಲ್ಲಿದ್ದಳು. 2ನೇ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಳು. ಈ ಇಬ್ಬರ ಹೆಂಡತಿಯರ ನಂತರ ವನಜಾಕ್ಷಿಯ ಸಲುಗೆ ಬೆಳೆಸಿದ್ದನು. ಈ ಇಬ್ಬರು ಕಳೆದ 4-5 ವರ್ಷಗಳಿಂದ ಲಿವಿಂಗ್ ಟುಗೆದರ್ನಲ್ಲಿದ್ದರು.
ಆದರೆ ಇತ್ತೀಚೆಗೆ ವನಜಾಕ್ಷಿ ಅದೇ ಗ್ರಾಮದ ಬೇರೊಬ್ಬನ ಜೊತೆ ಸಲುಗೆ ಬೆಳೆಸಿದ್ದರಿಂದ ವಿಠ್ಠಲನ ದೂರ ಮಾಡಲು ಪ್ರಾರಂಭಿಸಿದ್ದಳು. ಕಳೆದ ಒಂದು ತಿಂಗಳಿನಿಂದ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಕಳೆದ ಶನಿವಾರ ಬೇರೊಬ್ಬನ ಜೊತೆ ಕಾರಿನಲ್ಲಿ ಪ್ರಯಾಣಿಸುವುದನ್ನು ವಿಠಲ ನೋಡಿದ್ದನು.
ಇದನ್ನೂ ಓದಿ: ಗಣೇಶ ವಿಸರ್ಜನಾ ಮೆರವಣಿಗೆ; DJ ಸೌಂಡ್ಗೆ ಡ್ಯಾನ್ಸ್ ಮಾಡುವಾಗ ವ್ಯಕ್ತಿ ನಿಧನ
ಆರೋಪಿ ವಿಠಲ ಹಾಗೂ ಮೃತ ವನಜಾಕ್ಷಿ.
ಸ್ಯಾಂಟ್ರೋ ಕಾರಿನಲ್ಲಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಇಬ್ಬರು ಹೋಗುತ್ತಿದ್ದರು. ಇದೇ ವೇಳೆ ವಿಠಲನು ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಆ ಕಾರನ್ನ ಹಿಂಬಾಲಿಸಿ ಪದೇ ಪದೇ ಹಾರ್ನ್ ಮಾಡಿ ನಿಲ್ಲಿಸುವಂತೆ ಸೂಚಿಸುತ್ತಿದ್ದನು. ಆದರೆ ಈ ಇಬ್ಬರು ನಿಲ್ಲಿಸದೇ ಹಾಗೇ ಮುಂದೆ ಹೋಗುತ್ತಿದ್ದರು. ಮೊದಲೇ ಜೊತೆಯಲ್ಲಿ 5 ಲೀಟರ್ ಪೆಟ್ರೋಲ್ ತಂದಿದ್ದ ವಿಠಲ ಏಕಾಏಕಿ ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ.
ಇದರಿಂದ ಭಯಗೊಂಡ ವನಜಾಕ್ಷಿ ಹಾಗೂ ಪ್ರಿಯಕರ ಓಡಿ ಹೋಗಲು ಶುರು ಮಾಡಿದ್ದಾರೆ. ಆದರೆ ವನಜಾಕ್ಷಿ ಹಿಂದೆ ಬಿದ್ದ ವಿಠಲ ಆಕೆಯ ಹಿಡಿದು ಪೆಟ್ರೋಲ್ ಸುರಿದು ಲೈಟರ್ನಿಂದ ಬೆಂಕಿ ಹಚ್ಚಿದ್ದಾನೆ. ಇದರಿಂದ ಮಹಿಳೆ ಶೇಕಡಾ 60 ರಷ್ಟು ಗಂಭೀರವಾಗಿ ಸುಟ್ಟಗಾಯಗಳಿಗೆ ಒಳಗಾಗಿದ್ದಳು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರು ಚಿಕಿತ್ಸೆ ಫಲಕಾರಿಯಾಗದೇ ಉಸಿರು ಚೆಲ್ಲಿದ್ದಾಳೆ. ಸದ್ಯ ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಆರೋಪಿ ವಿಠಲನನ್ನು ಬಂಧಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ