/newsfirstlive-kannada/media/media_files/2025/08/10/metro-1-2025-08-10-06-57-14.jpg)
ಬೆಂಗಳೂರು: ಉದ್ಯಾನ ನಗರಿಯ ನಮ್ಮ ಮೆಟ್ರೋದ ಹಳದಿ ಮಾರ್ಗ (Namma Metro Yellow Line)ಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಇದು ನಗರದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ ಮೆಟ್ರೋ ಸಂಚಾರ ಆಗಿದ್ದು ಪ್ರಧಾನಿ ಮೋದಿಯವರು ಈ ಮಾರ್ಗಕ್ಕೆ ಇವತ್ತು ಹಸಿರು ನಿಶಾನೆ ತೋರಲಿದ್ದಾರೆ. ಸದ್ಯ ಯೆಲ್ಲೋ ಮಾರ್ಗದ ಪ್ರಯಾಣ ದರಗಳನ್ನ ಬಿಡುಗಡೆ ಮಾಡಲಾಗಿದೆ.
ಮೆಟ್ರೋದ ಹಳದಿ ಮಾರ್ಗದಲ್ಲಿ 16 ನಿಲ್ದಾಣಗಳು ಇದ್ದು 19.15 ಕಿಲೋ ಮೀಟರ್ ಉದ್ದವಿದೆ. ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವೆ ಮೂರು ಮೆಟ್ರೋ ರೈಲುಗಳು ಸಂಚಾರ ಮಾಡಲಿವೆ. ಅದರಂತೆ ತಿಂಗಳ ಕೊನೆಯಲ್ಲಿ 4ನೇ ಮೆಟ್ರೋ ಈ ಮಾರ್ಗಕ್ಕೆ ಸೇರಲಿದೆ. 2014ರಲ್ಲಿ ಆರಂಭವಾದ ಈ ಕಾಮಗಾರಿ 2021ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆ ಮಾಡಿ ಈಗ ಉದ್ಘಾಟನೆ ಮಾಡಲಾಗುತ್ತಿದೆ. ಈ ಮಾರ್ಗಕ್ಕೆ ಒಟ್ಟು 7,616 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಲೋಕಾರ್ಪಣೆ; PM ಮೋದಿಗಾಗಿ ಈ ಮಾರ್ಗದ ಮೆಟ್ರೋ ಕೂಡ ಬಂದ್
ಯಲ್ಲೋ ಮಾರ್ಗ ಮೆಟ್ರೋದ ಪ್ರಯಾಣ ದರ
ಆರ್ ವಿ ರಸ್ತೆ | ರಾಗಿಗುಡ್ಡ | ₹10 |
ಆರ್ ವಿ ರಸ್ತೆ | ಜಯದೇವ | ₹10 |
ಆರ್ ವಿ ರಸ್ತೆ | BTM ಲೇಔಟ್ | ₹20 |
ಆರ್ ವಿ ರಸ್ತೆ | ಬೊಮ್ಮನಹಳ್ಳಿ | ₹30 |
ಆರ್ ವಿ ರಸ್ತೆ | ಕೂಡ್ಲೂಗೇಟ್ | ₹40 |
ಆರ್ ವಿ ರಸ್ತೆ | ಸಿಂಗಸಂದ್ರ | ₹50 |
ಆರ್ ವಿ ರಸ್ತೆ | ಎಲೆಕ್ಟ್ರಾನಿಕ್ ಸಿಟಿ | ₹60 |
ಆರ್ ವಿ ರಸ್ತೆ | ಬೊಮ್ಮಸಂದ್ರ | ₹60 |
ಸಿಲ್ಕ್ ಬೋರ್ಡ್ | ಬೊಮ್ಮಸಂದ್ರ | ₹60 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ