ಯಾವ ವಿಷ್ಯದಲ್ಲಿ ರಾಜಕಾರಣ ಮಾಡಬೇಕು ಎನ್ನುವ ಪ್ರಜ್ಞೆ ಇರಬೇಕು; ಲೇಖಕಿ ಬಾನು ಮುಷ್ತಾಕ್

ಬೂಕರ್ ಪ್ರಶಸ್ತಿ ಪಡೆಯುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಪ್ರಶಸ್ತಿ ಬಗ್ಗೆ ಕೆಲವರು, ಕೇವಲವಾಗಿ ಮಾತನಾಡುತ್ತಿದ್ದಾರೆ. ಅವರವರ ಮಟ್ಟಕ್ಕೆ ತಕ್ಕಂತೆ ಮಾತಾಡುತ್ತಿದ್ದಾರೆ ಎಂದು ಲೇಖಕಿ ಬಾನು ಮುಷ್ತಾಕ್ ಅವರು ಹೇಳಿದ್ದಾರೆ.     

author-image
Bhimappa
Advertisment

2025ರ ದಸರಾ ಮಹೋತ್ಸವವನ್ನು ಲೇಖಕಿ ಬಾನು ಮುಷ್ತಾಕ್ ಅವರು ಈ ಬಾರಿ ಉದ್ಘಾಟನೆ ಮಾಡಲಿದ್ದಾರೆ. ಸದ್ಯ ಈ ಸಂಬಂಧ ಕೆಲವರು ವಿರೋಧ ಮಾಡುತ್ತಿರುವ ಬೆನ್ನಲ್ಲೆ ಸ್ವತಹ ಲೇಖಕಿ ಬಾನು ಮುಷ್ತಾಕ್ ಅವರು ಪ್ರತಿಕ್ರಿಯಿಸಿದ್ದಾರೆ. ಬೂಕರ್ ಪ್ರಶಸ್ತಿ ಪಡೆಯುವುದು ಅಷ್ಟೊಂದು ಸುಲಭವಲ್ಲ. ಆದರೆ ಈ ಪ್ರಶಸ್ತಿ ಬಗ್ಗೆಯು ಕೆಲವು ಕೇವಲವಾಗಿ ಮಾತನಾಡುತ್ತಿದ್ದಾರೆ. ಅವರವರ ಮಟ್ಟಕ್ಕೆ ತಕ್ಕಂತೆ ಮಾತಾಡುತ್ತಿದ್ದಾರೆ ಎಂದು ಹೇಳಿದ್ದಾರೆ.     

ಕೋಟ್ಯಾಂತರ ಕನ್ನಡಿಗರು ಪ್ರೀತಿ ಅಭಿಮಾನ ಕೊಡುತ್ತಿದ್ದಾರೆ ಎಂದರೆ ಒಬ್ಬರು, ಇಬ್ಬರ ಮಾತುಗಳಿಗೆ ಯಾಕೆ ಪ್ರತಿಕ್ರಿಯೆ ಕೊಡಬೇಕು. ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು, ಯಾವ ವಿಷಯದಲ್ಲಿ ರಾಜಕಾರಣ ಮಾಡಬಾರದು ಎನ್ನುವಂತ ಪ್ರಜ್ಞೆ ರಾಜಕಾರಣಿಗಳಲ್ಲಿ ಇರಬೇಕು. ಬಿಜೆಪಿ ಪಕ್ಷದಲ್ಲಿ ಮೈಸೂರಿನ ಸಂಸದರಾದ ಯಧುವೀರ್ ಅಂತವರ ಸಂತತಿ ಜಾಸ್ತಿ ಆಗಲಿ ಎಂದು ಅಪೇಕ್ಷ ಪಡುತ್ತೇನೆ. ಒಂದು ವಿಷಯವನ್ನು ಸಮತೋಲನದಿಂದ ಅನ್ವೇಷಿಸಿ ಯಾವುದೇ ಒಂದು ದ್ವಂದಕ್ಕೆ ಅವಕಾಶ ಇಲ್ಲದಂತೆ ಹೇಳಿಕೆ ನೀಡಿದ್ದಾರೆ. ಯಧುವೀರ್ ಅಂತವರ ವಿದ್ಯಾವಂತ, ಸುಸಂಸ್ಕೃತ ಮನಸುಗಳಿಗೆ ಮಾತ್ರ ಸಾಧ್ಯ ಎಂದು ಬಾನು ಮುಷ್ತಾಕ್ ಅವರು ಹೇಳಿದ್ದಾರೆ.     

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Banu Mushtaq Dasara
Advertisment