Advertisment

ಬೆಳಗಾವಿಯಲ್ಲಿ ಆಧುನಿಕ ಟಾರ್ಜನ್ : ಮರದ ಎಲೆ, ಸೊಪ್ಪು ತಿಂದು 10 ವರ್ಷ ಕಳೆದ ಯುವಕ

ಬೆಳಗಾವಿ ಜಿಲ್ಲೆಯಲ್ಲೊಬ್ಬ ಆಧುನಿಕ ಟಾರ್ಜನ್ ಇದ್ದಾನೆ. ಈತ ಊಟ, ತಿಂಡಿ ತಿನ್ನಲ್ಲ. ಅನ್ನ, ರೊಟ್ಟಿ ಮುಟ್ಟಲ್ಲ. ಬೆಳಗಾದರೇ ಸಾಕು ಮರದ ಎಲೆ, ಸೊಪ್ಪುಗಳೇ ಈತನ ಆಹಾರ. ಜೊತೆಗೆ ಊರಿನಲ್ಲೂ ಎಲ್ಲರ ಜೊತೆ ವಾಸ ಮಾಡಲ್ಲ. ಊರ ಹೊರಗಿನ ಬೆಟ್ಟಗುಡ್ಡಗಳಲ್ಲೇ ಈತನ ವಾಸ. ಏಕೆ ಹೀಗೆ? ಏನಾಗಿದೆ ಈತನಿಗೆ?

author-image
Chandramohan
BELAGAVI TARGAN

ಆಧುನಿಕ ಟಾರ್ಜನ್ ಬುಡನ್ ಖಾನ್ ಹೊಸಮನಿ

Advertisment
  • ಆಧುನಿಕ ಟಾರ್ಜನ್ ಬುಡನ್ ಖಾನ್ ಹೊಸಮನಿ
  • ಮರದ ಸೊಪ್ಪು, ಎಲೆ ತಿಂದು ಬದುಕುವ ಬುಡನ್ ಖಾನ್ ಹೊಸಮನಿ

ಬೆಳಗಾವಿಯಲ್ಲೊಬ್ಬ ಆಧುನಿಕ ಟಾರ್ಜನ್! ಇದ್ದಾನೆ. ಈತನ ಆಹಾರ ಪದ್ದತಿ ವೈದ್ಯಲೋಕಕ್ಕೆ ಸವಾಲಾಗಿದೆ. ಪ್ರಾಣಿಗಳಂತೆ ಒಬ್ಬಂಟಿಯಾಗಿ ಬೆಟ್ಟಗುಡ್ಡಗಳಲ್ಲಿ ವಾಸ ಮಾಡುತ್ತಾನೆ. ಗಿಡಗಳ ಎಲೆಗಳನ್ನೇ ತಿಂದು ಈತ ಬದುಕುತ್ತಿದ್ದಾನೆ. ನಿತ್ಯವು ಈತನಿಗೆ ಗಿಡಗಂಟೆಗಳ ಎಲೆಗಳೇ ಆಹಾರವಾಗಿ ಬೇಕು. ಗಿಡಗಳ ಎಲೆಗಳನ್ನೇ ತಿಂದುಬದುಕುವ ಈತ ಆಧುನಿಕ ಟಾರ್ಜನ್ ಎಂದರೂ ತಪ್ಪಾಗಲಾರದು. 
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಯುವಕ ಬುಡನ್ ಖಾನ್ ಹೊಸಮನಿ( 34)  ಎಂಬಾತನೇ ಆಧುನಿಕ ಯುಗದ ಟಾರ್ಜನ್.  ಉಗರಗೋಳ ಗ್ರಾಮದ ಹೊರವಲಯದ ಹೆಗ್ಗೊಳ್ಳ ಎಂಬ ಗುಡ್ಡದಲ್ಲಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾನೆ. ಕಳೆದ ಹತ್ತು ವರ್ಷಗಳಿಂದ ಊಟವಿಲ್ಲದೇ ಎಲೆಯನ್ನು  ಸೇವನೆ ಮಾಡುತ್ತಿದ್ದಾನೆ.  ಗುಡ್ಡಗಾಡಿನಲ್ಲಿರುತಪ್ಪಲನ್ನೇ ತಿಂದು  ಬುಡನಖಾನ್ ಜೀವನ ನಡೆಸುತ್ತಿದ್ದಾನೆ.  ಬೆಳಿಗ್ಗೆ ಎದ್ದರೆ ಸಾಕು,  ಈತನಿಗೆ  ಮರದ ಸೊಪ್ಪು ಹಾಗೂ ಎಲೆಗಳೇ ಬೇಕು. ಅವುಗಳೇ ಆತನ ಆಹಾರ. 
ಮಂಗಗಳನ್ನ ನೋಡಿ ಸೊಪ್ಪು ತಿನ್ನುವುದನ್ನು   ಬುಡನ್ ಖಾನ ಹೊಸಮನಿ ಕಲಿತಿದ್ದಾನಂತೆ. 
ಎಲೆ, ಸೊಪ್ಪು ಜೀರ್ಣಿಸಿಕೊಳ್ಳಲು ಯೋಗಾಸನಗಳನ್ನು  ಟಾರ್ಜನ್ ಮಾಡುತ್ತಿದ್ದಾನೆ. ಮನೆಯಲ್ಲಿ ಮದುವೆ ಮಾಡಿಕೊಂಡು ಸಂಸಾರ ಮಾಡು ಎಂದಿದ್ದಕ್ಕೆ ಮನೆ ಬಿಟ್ಟು ಬಂದಿದ್ದಾನೆ. ಈ ವೇಳೆ ಕೋತಿಗಳು ಸೊಪ್ಪು, ಎಲೆ ತಿನ್ನುವುದನ್ನು ನೋಡಿ ಸೊಪ್ಪು ತಿನ್ನಲು ಕಲಿತಿದ್ದಾನೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
modern tarzan
Advertisment
Advertisment
Advertisment