/newsfirstlive-kannada/media/media_files/2025/12/02/atm-robberry-failed-attempt-2025-12-02-18-08-48.jpg)
ಬೆಳಗಾವಿಯಲ್ಲಿ ಎಟಿಎಂ ದರೋಡೆ ಯತ್ನ ವಿಫಲ!
ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಕಳೆದ ರಾತ್ರಿ ಕಳ್ಳರು ಎಟಿಎಂ ಮೆಷಿನ್ ಅನ್ನೇ ತಳ್ಳುವ ಗಾಡಿಯಲ್ಲಿ ತುಂಬಿಕೊಂಡು ಹೋಗಿದ್ದರು. ಹೊಸ ವಂಟಮೂರಿ ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದವರೆಗೂ ಎಟಿಎಂ ಮೆಷಿನ್ ಅನ್ನು ತೆಗೆದುಕೊಂಡು ಹೋಗಿದ್ದರು. ಆಗ ಎಟಿಎಂ ಮೆಷಿನ್ ನಲ್ಲಿ ಒಂದು ಲಕ್ಷ ರೂಪಾಯಿ ನಗದು ಹಣ ಕೂಡ ಇತ್ತು. ಆದರೇ, ಕಳ್ಳರಿಗೆ ಅದೃಷ್ಟ ಕೈ ಕೊಟ್ಟಿದೆ. ಎಷ್ಟೇ ಪ್ರಯತ್ನಪಟ್ಟರೂ ಎಟಿಎಂ ಮೆಷಿನ್ ಅನ್ನು ಓಪನ್ ಮಾಡಲು ಕಳ್ಳರಿಂದ ಸಾಧ್ಯವಾಗಿಲ್ಲ. ಎಟಿಎಂ ಮೆಷಿನ್ ಅನ್ನು ಹೊಡೆಯುವ ಪ್ರಯತ್ನ ಕೂಡ ನಡೆಸಿದ್ದಾರೆ. ಅದು ಕೂಡ ಸಾಧ್ಯವಾಗಿಲ್ಲ. ಗ್ಯಾಸ್ ಕಟ್ಟರ್ ಅನ್ನು ಕೂಡ ಕಳ್ಳರು ತಮ್ಮ ಜೊತೆ ತಂದಿದ್ದರು. ಗ್ಯಾಸ್ ಕಟ್ಟರ್ ನಿಂದ ಎಟಿಎಂ ಮೆಷಿನ್ ಅನ್ನು ಓಪನ್ ಮಾಡಲು ಯತ್ನಿಸಿದ್ದಾರೆ. ಆದರೇ, ಗ್ಯಾಸ್ ಕಟ್ಟರ್ ಬಳಸಿದರೂ, ಮೆಷಿನ್ ಓಪನ್ ಆಗಿಲ್ಲ. ಹೀಗಾಗಿ ಹೊಸ ವಂಟಮೂರಿ ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎಟಿಎಂ ಮೆಷಿನ್ ಅನ್ನು ಬಿಟ್ಟು ಕಳ್ಳಿರು ಪರಾರಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸ್ಥಳೀಯರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೆಳಗಾವಿ ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಎಟಿಎಂ ಮೆಷಿನ್ ಅನ್ನು ತಳ್ಳುವ ಗಾಡಿಯಲ್ಲಿ ತುಂಬಿಕೊಂಡು ಹೋಗುವ ದೃಶ್ಯ ಗ್ರಾಮದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಕಳ್ಳರೆಲ್ಲಾ ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದು ಎಟಿಎಂ ಅನ್ನು ಎತ್ತಿಕೊಂಡು ಹೋಗಿ ಹಣ ದರೋಡೆ ಮಾಡಲು ಹೋಗಿ ವಿಫಲವಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us