ಬೆಳಗಾವಿ ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರ ಕೇಸ್‌: 12 ಅಪರಾಧಿಗಳಿಗೆ ಐದು ವರ್ಷ ಜೈಲುಶಿಕ್ಷೆ

ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಕಳೆದ ವರ್ಷ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಲಾಗಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕೇಸ್ ನಲ್ಲಿ ಈಗ 12 ಅಪರಾಧಿಗಳಿಗೆ 5 ವರ್ಷ ಜೈಲುಶಿಕ್ಷೆ ಪ್ರಕಟಿಸಲಾಗಿದೆ. ಕೋರ್ಟ್ ನಲ್ಲಿ ಅಪರಾಧಿಗಳು ಕಣ್ಣೀರು ಹಾಕಿದ್ದಾರೆ.

author-image
Chandramohan
belagavi vantamuri naked case

ಅಪರಾಧಿಗಳಿಗೆ 5 ವರ್ಷ ಜೈಲುಶಿಕ್ಷೆ ಪ್ರಕಟ

Advertisment
  • ಬೆಳಗಾವಿಯ ವಂಟಮೂರಿನಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್
  • 12 ಅಪರಾಧಿಗಳಿಗೆ 5 ವರ್ಷ ಜೈಲುಶಿಕ್ಷೆ ಪ್ರಕಟಿಸಿದ ಕೋರ್ಟ್
  • ಕೋರ್ಟ್ ಹಾಲ್ ನಲ್ಲಿ ಕಣ್ಣೀರು ಹಾಕಿದ ಅಪರಾಧಿಗಳು


ಬೆಳಗಾವಿ ಜಿಲ್ಲೆಯ  ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ಶಿಕ್ಷೆಯ ಪ್ರಮಾಣವನ್ನು   ಕೋರ್ಟ್ ಇಂದು ಪ್ರಕಟಿಸಿದೆ. ನಿನ್ನೆಯೇ 12 ಮಂದಿ ದೋಷಿಗಳು ಎಂದು ಕೋರ್ಟ್ ತೀರ್ಪು ಪ್ರಕಟಿಸಿತ್ತು. 
12 ಜನ‌ ಅಪರಾಧಿಗಳಿಗೆ   ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. 
ಬೆಳಗಾವಿಯ ಹೆಚ್ಚುವರಿ 10 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟವಾಗಿದೆ.  ನ್ಯಾಯಾಧೀಶರಾದ ಎಚ್.ಎಸ್.ಮಂಜುನಾಥ ಅವರು ಅಪರಾಧಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿದೆ.  ಕೋರ್ಟ್ ಹಾಲ್ ನಲ್ಲಿ  ಅಪರಾಧಿಗಳಿಗೆ  ಆಯಾ ಸೆಕ್ಷನ್ ಅಡಿ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.  ಅಪರಾಧಿಗಳಾದ ಬಸಪ್ಪ ನಾಯಿಕ, ರಾಜು ನಾಯಿಕ, ಕೆಂಪಣ್ಣ ನಾಯಿಕ, ಪಾರ್ವತಿ ನಾಯಕ, ಯಲ್ಲವ್ವ ನಾಯಿಕ, ಲಕ್ಕಪ್ಪ ನಾಯಿಕ,  ಗಂಗವ್ವ ನಾಯಿಕ,  ಸಂಗೀತಾ ಹೆಗ್ಗನಾಯಿಕ, ಸಂತೋಷ ನಾಯಿಕ,  ಶೋಭಾ ನಾಯಿಕ, ಲಕ್ಕವ್ವ ನಾಯಿಕ, ಶಿವಪ್ಪ ವನ್ನೂರಿಗೆ ಶಿಕ್ಷೆ ವಿಧಿಸಲಾಗಿದೆ.  ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿಗಳು, ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.ಸರ್ಕಾರಿ‌ ವಿಶೇಷ ಅಭಿಯೋಜಕ ಎಲ್.ಎಸ್. ಸುಳ್ಳದ, ಆರೋಪಿ ಪರ ವಕೀಲರಾದ ರವಿರಾಜ್ ಪಾಟೀಲ್, ಶೇಕ್ ಇಬ್ಬರೂ ಈ ವೇಳೆ ಗೈರಾಗಿದ್ದರು. 
ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಹುಡುಗಿ ಮನೆಯವರು, ಹುಡುಗನ ಮನೆಗೆ ಬಂದು, ಹುಡುಗನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಾಗರಿಕ ಸಮಾಜ ತಲೆ ತಗ್ಗಿಸಲು ಕಾರಣವಾಗಿತ್ತು. 

belagavi vantamuri naked case (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Belagavi vantamuri naked assault case
Advertisment