/newsfirstlive-kannada/media/media_files/2026/02/01/ghataprabha_sdt_school_inaugaration_05-2026-02-01-19-02-48.png)
ಘಟಪ್ರಭಾ.(ಬೆಳಗಾವಿ) 400 ವರ್ಷಗಳ ಇತಿಹಾಸ ಹೊಂದಿರುವ ಅರಭಾವಿ ಶ್ರೀ ದುರದುಂಡೇಶ್ವರ ಮಠದಿಂದ 3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ SDT ಹೈಸ್ಕೂಲ್ ಹಾಗೂ PU ಕಾಲೇಜ್‌ನ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ, ನಾಗನೂರು ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಾಗೂ ಅರಬಾವಿ ಮಠದ ಶ್ರೀಗುರು ಬಸವಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನೆರವೇರಿತು. ಇದೇ ವೇಳೆ ಶಾಸಕರಾದ ಮಹಾಂತೇಶ ಕೌಜಲಿ, ಬಾಬಾ ಸಾಹೇಬ್ ಪಾಟೀಲ್ ಭಾಗವಹಿಸಿದ್ದರು.
/filters:format(webp)/newsfirstlive-kannada/media/media_files/2026/02/01/ghataprabha_sdt_school_inaugaration_01a-2026-02-01-19-02-48.png)
ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕೀಹೊಳಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ದಾಸೋಹ ಸೇವೆ ಇಂದಿಗೂ ನಡೆದುಬಂದಿದ್ದು, ಇಂದು ಅನೇಕ ನಾಗರಿಕರ ಬಾಳಿನ ದಾರಿದೀಪವಾಗಿ ಈ ದುರದುಂಡೇಶ್ವರ ಮಠವು ನಡೆದು ಮುಂದೆ ಸಾಗುತ್ತಿದ್ದು ಈ ಶ್ರೀ ಮಠದ ಶೈಕ್ಷಣಿಕ ಕ್ಷೇತ್ರಕ್ಕೆ ನಮ್ಮ ಸಹಕಾರ ಇದೆ ಎಂದು ಹೇಳಿದರು.
/filters:format(webp)/newsfirstlive-kannada/media/media_files/2026/02/01/ghataprabha_sdt_school_inaugaration_06-2026-02-01-19-02-48.png)
ಸಾನಿಧ್ಯವಹಿಸಿದ್ದ ಅರಭಾವಿ ದುರದುಂಡೇಶ್ವರ ಸಿದ್ದಸಂಸ್ಥಾನ ಮಠದ ಶ್ರೀ ಗುರುಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಮೊದಲಿನ ಕಾಲದಲ್ಲಿ ಶಿಕ್ಷಣದ ಕೊರತೆ ಇತ್ತು ಆದರೆ ಅವರಲ್ಲಿ ಸಂಸ್ಕಾರ ಇತ್ತು, ಆದರೆ ಈಗ ಉತ್ತಮ ಮಟ್ಟದ ಶಿಕ್ಷಣ ವ್ಯವಸ್ಥೆ ಇದೆ ಆದರೆ ಸಂಸ್ಕಾರ ಇಲ್ಲಾ ಅಣ್ಣ ತಮ್ಮಂದಿರು ಪಾಲು ತೆಗೆದುಕೊಳ್ಳುತ್ತಾರೆ ಆದರೆ ನಾವು ಕಲಿತ ಶಿಕ್ಷಣದಲ್ಲಿ ಪಾಲು ಕೊಡಲು ಆಗದು, ಶಿಕ್ಷಣದಿಂದ ಎಲ್ಲವು ಸಾಧ್ಯ ಇಲ್ಲಾ ಆದರೆ ವಿವೇಕದಿಂದ ಎಲ್ಲ ಸಾಧ್ಯವಿದೆ ಎಂದರು, ಅರಭಾವಿ ಮಠ ಅನೇಕ ಸಾಮಾಜಿಕ, ಶೈಕ್ಷಣಿಕ, ದಾಸೋಹ ಕೆಲಸ ಮಾಡಿ ಮುನ್ನಡೆದಿದೆ, ರಾಜ ಮಲ್ಲಸರ್ಜ, ಸಾಂಗ್ಲಿ ಪೆಶ್ವೇಗಳು ಮಠದ ಭಕ್ತರು, ಮಠವನ್ನು ಅನೇಕ ಪವಾಡ ಮಹಾನ್ ಶ್ರೀಗಳು ನಡೆಸಿಕೊಂಡು ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ್ ಲಕ್ಷ್ಮಣನಿಗೆ ಆಶ್ರಯ ನೀಡಿದ ಮಠ ಅಂದಿನಿಂದ ಇಂದಿನವರೆಗೂ ದಾಸೋಹ ನಿರಂತರವಾಗಿ ನಡೆದಿದೆ ಎಂದರು. ನಮ್ಮ ಹೈಸ್ಕೂಲ್ ಹಳೇ ವಿದ್ಯಾರ್ಥಿಗಳು ಜಾಗೃತವಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಶ್ರೀ ದುರದುಂಡೇಶ್ವರ ಶ್ರೀಗಳ ಕನಸನ್ನು ಇಂದು ಶ್ರೀ ಗುರುಬಸವ ಮಹಾಸ್ವಾಮಿಗಳು ಕೋಟ್ಯಂತರ ರೂ. ಗಳನ್ನು ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಈ ಭಾಗದ ವಿದ್ಯಾರ್ಥಿಗಳ ಕನಸಿನ ವ್ಯಾಸಂಗಕ್ಕೆ ಅನುವು ಮಾಡಿದ್ದಾರೆ. ತನ್ನ ಜ್ಞಾನದಿಂದ ಇಂದು ನಾವು ಏನೂ ಬೇಕಾದರೂ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
/filters:format(webp)/newsfirstlive-kannada/media/media_files/2026/02/01/ghataprabha_sdt_school_inaugaration_02-2026-02-01-19-02-48.png)
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ 1968 ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಗ್ರಾಮೀಣ ಮಟ್ಟದಲ್ಲಿ ಹೆಚ್ಚಿಗೆ ಶುಲ್ಕ ತೆಗೆದುಕೊಳ್ಳದೆ ಗುಣಮಟ್ಟದ ಶಿಕ್ಷಣ ನೀಡಿ ಇಂದು ಸುಸಜಿತ ಕಟ್ಟಡ ಹೊಂದಿ ಈ ಭಾಗದ ವಿದ್ಯಾರ್ಥಿಗಳಿಗೆ ಬೆಳಕಾಗಿದೆ ಎಂದರು.
ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಜೀವನದಲ್ಲಿ ಮುಂದೆ ಬರಲು ಗುಣಮಟ್ಟದ ಶಿಕ್ಷಣ ಅತೀ ಅವಶ್ಯ ಇದ್ದು ಸ್ಪರ್ಧೆ, ಗ್ಲೋಬಲ್ ಕ್ವಾಲಿಟಿ ಶಿಕ್ಷಣದಿಂದ ಪೈಪೋಟಿ ಮಾಡಿ ಶಿಕ್ಷಣ ನೀಡುತ್ತಿದ್ದು ಇದರ ಸದುಪಯೋಗ ಈ ಭಾಗದ ಜನ ಪಡೆಯಬೇಕು ಎಂದರು.
/filters:format(webp)/newsfirstlive-kannada/media/media_files/2026/02/01/ghataprabha_sdt_school_inaugaration_03-2026-02-01-19-02-48.png)
ಕಾರ್ಯಕ್ರಮದಲ್ಲಿ ಚಿಕ್ಕೋಡಿ ಪಿ ಯು ಉಪನಿರ್ದೇಶಕರಾದ ಪಿ ಆಯ ಭಂಡಾರಿ, ಜೆ ಜಿ ಸಹಕಾರಿ ಆಸ್ಪತ್ರೆ ಛೇರ್ಮನ್ ಅಪ್ಪಯ್ಯಪ್ಪ ಬಡಕುಂದ್ರಿ, ಶ್ರೀಮತಿ ಸಿದ್ದವ್ವ ಶೆಟ್ಟಪ್ಪ ಕಾಡದವರ, ತಹಶೀಲ್ದಾರ ಮೋಹನ ಬಸ್ಮೆ, ಘಟಪ್ರಭಾ PIHD ಮುಲ್ಲಾ, ಉದ್ಯಮಿ ಜಯಶೀಲ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಮ್ ಎಸ್ ಪಾಟೀಲ, ಮುಖಂಡರಾದ ಡಿ ಎಮ್ ದಳವಾಯಿ, ಮಾರುತಿ ವಿಜಯನಗರ, ಸುರೇಶ ಕಾಡದವರ, ರಮೇಶ ತುಕ್ಕಾನಟ್ಟಿ, ಗಂಗಾಧರ ಬಡಕುಂದ್ರಿ, ಮುತ್ತಣ್ಣ ಹತ್ತರವಾಟ,ಶರಣು ಕೊಗನೂರ, ಪ್ರವೀಣ್ ಮಟಗಾರ, ಸುಧೀರ ಜೋಡಟ್ಟಿ, ಸಚಿನ ಕಡಬಡಿ ಸೇರಿದಂತೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಸಮಸ್ತ ಭೋಧಕ, ಭೋಧಕೇತರ ಸಿಬ್ಬಂದಿ, SDT ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ ಎಸ್ ನಾಗರಾಜ್ ಸೇರಿಂದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ನಿರೂಪಣೆಯನ್ನು ಶ್ರೀಮತಿ ಬಾನುಮತಿ ನಡೆಸಿಕೊಟ್ಟರು, ವಂದನೆಯನ್ನು ಆರ್ ಡಿ ಉಪ್ಪಾರ, ಜಗದೀಶ ಮಠಪತಿ, ಕರಿಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಆರಂಭದಲ್ಲಿ ಜೀ ಟಿವಿ ಸರಿಗಮಪ ಖ್ಯಾತಿಯ ಮಹಬೂಬ್ ಸಾಬ್ ಸಂಗೀತ ರಸದೌತಣ ನೀಡಿದರು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us