/newsfirstlive-kannada/media/media_files/2026/02/06/hidden-camera-video-blackmail-1-2026-02-06-17-23-53.jpg)
ಮನೆಯಲ್ಲಿ ಹಿಡನ್ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್, ಅಧಿಕಾರಿಗೆ ಬ್ಲ್ಯಾಕ್ ಮೇಲ್
ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಗೆ ಮೂವರು ನಕಲಿ ಪತ್ರಕರ್ತರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಸಿನಿಮಾ ಸ್ಟೈಲ್‌ನಲ್ಲಿ ಪ್ಲಾನ್ ಮಾಡಿದ್ದ ಕಿರಾತಕರು ಮನೆಕೆಲಸದವ ಸಹಾಯದಿಂದ ಮನೆ ಹೊಕ್ಕಿ ರಹಸ್ಯ ಕ್ಯಾಮರಾಗಳನ್ನ ಅಡಗಿಸಿಟ್ಟಿದ್ರು. ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕಿಡಿಗೇಡಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಹಿಳಾ ಅಧಿಕಾರಿಯೊಬ್ಬರ ಮನೆಯಲ್ಲಿ ರಹಸ್ಯ ಕ್ಯಾಮರಾ ಫಿಕ್ಸ್​
ಖಾಸಗಿ ವಿಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆ ಇಟ್ಟವರು ಅರೆಸ್ಟ್
ಈ ಫೋಟೋದಲ್ಲಿ ಕಾಣ್ತಿರೋ ಇವರೇ ಕಥೆಯ ಮೇನ್ ವಿಲನ್‌ಗಳು.. ಬೆಳಗಾವಿಯ ಮಹಿಳಾ ಅಧಿಕಾರಿಯೊಬ್ಬರ ಮನೆಯ ಲೈಟ್ ಹೋಲ್ಡರ್‌ನಲ್ಲಿ ರಹಸ್ಯ ಕ್ಯಾಮರಾ ಫಿಕ್ಸ್ ಮಾಡಿದ್ದ ಕಿರಾತಕರು.. ಮಹಿಳಾ ಅಧಿಕಾರಿ ಬೆಡ್ ರೂಂ, ಹಾಲ್‌ನಲ್ಲಿ ರಹಸ್ಯ ಕ್ಯಾಮರಾ ಅಡಗಿಸಿಟ್ಟಿದ್ದ ಇವ್ರು ಅನ್ಯ ವ್ಯಕ್ತಿ ಜೊತೆಗೆ ಅಧಿಕಾರಿ ಖಾಸಗಿ ಸಮಯ ಕಳೆಯುವ ದೃಶ್ಯ ಸೆರೆ ಹಿಡಿದು 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ಲೇಡಿ ಆಫೀಸರ್ ಮನೆಯಲ್ಲಿ ಕ್ಯಾಮರಾ ಇಟ್ಟ ಕಥೆಯೇ ಇಂಟ್ರೆಸ್ಟಿಂಗ್ ಆಗಿದೆ.
‘ಕ್ಯಾಮರಾ’ ಕಿರಾತಕರು
ಮಹಿಳಾ ಅಧಿಕಾರಿ ಮನೆಕೆಲಸದವನಿಗೆ ಗಾಳ ಹಾಕಿದ್ದ ಕಿರಾತಕರು
ಕಚೇರಿಗೆ ಹೋಗುವಾಗ ಆಗಾಗ ಕಿಟಕಿಯಲ್ಲಿ ಕೀ ಇಟ್ಟು ಹೋಗ್ತಿದ್ರು
ಕಿಟಕಿಯಲ್ಲಿ ಕೀ ಇಟ್ಟು ಹೋಗುವುದು ಮನೆ ಕೆಲಸದವನಿಗೆ ಗೊತ್ತಿತ್ತು
ಆತನಿಗೆ ಹಣ ಕೊಟ್ಟು ಕೀ ಇಟ್ಟು ಹೋದಾಗ ತಿಳಿಸುವಂತೆ ಹೇಳಿದ್ರು
2 ತಿಂಗಳ ಹಿಂದೆ ಕೀ ಇಟ್ಟು ಹೋದಾಗ ಕಿರಾತಕರಿಗೆ ಮಾಹಿತಿ ನೀಡಿದ್ದ
ಮನೆಗೆ ನುಗ್ಗಿ ಬೆಡ್ ರೂಂ, ಹಾಲ್‌ನ ಲೈಟ್ ಹೋಲ್ಡರ್‌ನಲ್ಲಿ ಕ್ಯಾಮರಾ ಫಿಕ್ಸ್​
ಅನ್ಯ ವ್ಯಕ್ತಿ ಜೊತೆಗೆ ಅಧಿಕಾರಿ ಖಾಸಗಿ ಸಮಯ ಕಳೆಯುವ ದೃಶ್ಯ ಸೆರೆ
ಅಧಿಕಾರಿ ಮನೆಯಲ್ಲಿ ಇಲ್ಲದಾಗ ಕ್ಯಾಮರಾ ತೆಗೆದುಕೊಂಡಿದ್ದ ಕಿರಾತಕರು
ಬಳಿಕ ಮೆಮೊರಿ ಕಾರ್ಡ್‌ನಲ್ಲಿದ್ದ ದೃಶ್ಯ ಪೆನ್‌ಡ್ರೈವ್‌ಗೆ ಹಾಕಿಕೊಂಡಿದ್ರು
2 ತಿಂಗಳಿಂದ 50 ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ದ ಆರೋಪಿಗಳು
ಹಣ ಕೊಡದಿದ್ರೆ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವ ಬೆದರಿಕೆ
( ಮಹಿಳಾ ಅಧಿಕಾರಿಯ ಮನೆ ಕೆಲಸದವನಿಗೆ ಈ ಕಿರಾತಕರು ಮೊದಲು ಗಾಳ ಹಾಕಿದ್ರು. ಕಚೇರಿಗೆ ಹೋಗುವಾಗ ಅಧಿಕಾರಿ ಮನೆ ಕೀಯನ್ನು ಆಗಾಗ ಕಿಟಕಿಯಲ್ಲಿ ಇಟ್ಟು ಹೋಗ್ತಿದ್ರು. ಕಿಟಕಿಯಲ್ಲಿ ಕೀ ಇಟ್ಟು ಹೋಗುವುದು ಮನೆ ಕೆಲಸದವನಿಗೆ ಗೊತ್ತಿತ್ತು. ಆತನಿಗೆ ಹಣ ಕೊಟ್ಟು ಕೀ ಇಟ್ಟು ಹೋದಾಗ ತಿಳಿಸುವಂತೆ ಹೇಳಿದ್ರು. ಎರಡು ತಿಂಗಳ ಹಿಂದೆ ಅಧಿಕಾರಿ ಕೀ ಇಟ್ಟು ಹೋದಾಗ ಮನೆ ಕೆಲಸದವ ಕಿರಾತಕರಿಗೆ ಮಾಹಿತಿ ನೀಡಿದ್ದ. ಮನೆಗೆ ನುಗ್ಗಿದ್ದ ಇವರು ಬೆಡ್ ರೂಂ, ಹಾಲ್‌ನ ಲೈಟ್ ಹೋಲ್ಡರ್‌ನಲ್ಲಿ ಕ್ಯಾಮರಾ ಫಿಕ್ಸ್ ಮಾಡಿದ್ರು. ಬೇರೆ ವ್ಯಕ್ತಿ ಜೊತೆ ಅಧಿಕಾರಿ ಖಾಸಗಿ ಸಮಯ ಕಳೆಯುವ ದೃಶ್ಯವನ್ನ ಸೆರೆಹಿಡಿದಿದ್ರು. ನಂತರ ಅಧಿಕಾರಿ ಮನೆಯಲ್ಲಿ ಇಲ್ಲದಿದ್ದಾಗ ಆರೋಪಿಗಳು ಕ್ಯಾಮರಾ ತಗೊಂಡು ಹೋಗಿದ್ರು. ಬಳಿಕ ಮೆಮೊರಿ ಕಾರ್ಡ್‌ನಲ್ಲಿದ್ದ ಖಾಸಗಿ ದೃಶ್ಯವನ್ನ ಪೆನ್‌ಡ್ರೈವ್‌ಗೆ ಹಾಕಿಕೊಂಡು, ಎರಡು ತಿಂಗಳಿಂದ 50 ಲಕ್ಷ ಹಣ ಕೊಡುವಂತೆ ಪೀಡಿಸುತ್ತಿದ್ರು. ಒಂದ್ವೇಳೆ ಹಣ ಕೊಡದಿದ್ರೆ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ರು.)
ಕಿರಾತಕರ ಕಿರುಕುಳಕ್ಕೆ ಬೇಸತ್ತ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್ ಮೊರೆ ಹೋಗಿದ್ರು. ಬೆಳಗಾವಿ ಮಾಳಮಾರುತಿ ಪೊಲೀಸರು ಗೋಕಾಕ್ ನಗರ ನಿವಾಸಿಗಳಾದ ಸಮೀರ್ ನಿಸಾರ್‌ಅಹ್ಮದ್ ಶೇಖ್, ಅಬ್ಬುಲ್‌ರಶೀದ್ ಮಕಾಂದಾರ್ ಮತ್ತು ಮೊಹಮ್ಮದ್ ಬಾಳೇಕುಂದ್ರಿಯನ್ನ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 2 ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಅಲ್ಟ್ರಾ, ವಿವೋ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಜೊತೆಗೆ 64 ಜಿಬಿ ಪೆನ್‌ಡ್ರೈವ್, 6 ಹಿಡನ್ ಕ್ಯಾಮೆರಾ, 2 ಓಟಿಜಿ, 128 ಜಿಬಿಯ ಎಂಟು ಮೆಮೊರಿ ಕಾರ್ಡ್ ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಲಾಗಿದೆ.
ಮಹಿಳಾ ಅಧಿಕಾರಿಗೆ ಕಾಟ ಕೊಟ್ಟ ನಕಲಿ ಪತ್ರಕರ್ತ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಮಹಿಳಾ ಅಧಿಕಾರಿಗೆ ಮಾತ್ರ ಈ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದಾರಾ.. ಇನ್ನೂ ಯಾರಿಗಾದ್ರೂ ಕಿರುಕುಳ ಕೊಟ್ಟಿದ್ದಾರಾ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಶ್ರೀಕಾಂತ್, ನ್ಯೂಸ್‌ಫಸ್ಟ್, ಬೆಳಗಾವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us