ಕರ್ನಾಟಕದ ಈ ಗ್ರಾಮದಲ್ಲಿ ಸಂಜೆ 7 ರಿಂದ 9 ಗಂಟೆವರೆಗೆ ಮೊಬೈಲ್, ಟಿವಿ ಬಂದ್​..!

ಮೊಬೈಲ್, ಟಿವಿ ಬಳಕೆಯಿಂದ ಇವತ್ತು ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಕೊಡ್ತಿಲ್ಲ. ಮಕ್ಕಳ ಆರೋಗ್ಯ, ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಪಂಚಾಯ್ತಿಯೊಂದು ಮಾದರಿ ಕ್ರಮಕ್ಕೆ ಮುಂದಾಗಿದೆ.

author-image
Ganesh Kerekuli
Belagavi halaga village (1)
Advertisment

ಬೆಳಗಾವಿಯ ಹಲಗಾ ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ನಿತ್ಯ ಎರಡು ಗಂಟೆ ‘ಡಿಜಿಟಲ್ ಆಫ್ ಪ್ರಯೋಗ’ ಮಾಡಲಾಗ್ತಿದೆ. 

ಇಂದು ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್, ಟಿವಿ ಬಿಟ್ಟಿರಲಾಗದ ಸ್ಥಿತಿ ಉಂಟಾಗಿದೆ. ಇದ್ರಿಂದಾಗಿ ಮೊಬೈಲ್, ಟಿವಿ ಬಿಟ್ಟು ವಿದ್ಯಾಭ್ಯಾಸ ಇತರೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಈ ಹಿನ್ನೆಲೆಯಲ್ಲಿ ಮೊಬೈಲ್, ಟಿವಿ ಬಳಕೆ ಮಾಡದೆ ಶಿಕ್ಷಣಕ್ಕೆ ಒತ್ತು ನೀಡಲು ಹಲಗಾ ಗ್ರಾಮದಲ್ಲಿ ನಿತ್ಯ ಸಂಜೆ 7 ಗಂಟೆಯಿಂದ 9 ಗಂಟೆವರೆಗೆ ‘ಡಿಜಿಟಲ್ ಆಫ್’ ಮಾಡಲಾಗ್ತಿದೆ.

ರಾಜ್ಯಕ್ಕೆ ಮಾದರಿಯಾದ ಪಂಚಾಯ್ತಿ

ಸಂಜೆ 7 ಗಂಟೆಗೆ ಗ್ರಾಮ ಪಂಚಾಯ್ತಿಯಲ್ಲಿ ದೊಡ್ಡದಾಗಿ ಸೈರನ್ ಮೊಳಗುತ್ತದೆ. ಸೈರನ್ ಕೂಗುತ್ತಿದ್ದಂತೆಯೇ ಎಲ್ಲರೂ ಟಿವಿ, ಮೊಬೈಲ್ ಆಫ್ ಮಾಡಿ ಅಗತ್ಯ ಕೆಲಸಗಳನ್ನು ಮಾಡಿಕೊಳ್ತಿದೆ. ಈ ‘ಸ್ಕ್ರೀನ್ ಟೈಂ ಓವರ್​’ ಪ್ರಯೋಗಕ್ಕೆ ಗ್ರಾಮಸ್ಥರಿಂದ ಭಾರೀ ಬೆಂಬಲ ಸಿಕ್ಕಿದೆ. 
ಡಿಸೆಂಬರ್ 17 ರಿಂದ ಪ್ರಯೋಗ ಶುರುವಾಗಿದ್ದು, ಗ್ರಾಮಸ್ಥರು ವರ್ಷವಿಡೀ ಯಶಸ್ವಿಗೊಳಿಸಲು ಉತ್ಸುಕರಾಗಿದ್ದಾರೆ. ಇದರಿಂದ ಮಕ್ಕಳ ಮೊಬೈಲ್ ಬಳಕೆ ತಪ್ಪುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿದಂತೆ ಆಗ್ತಿದೆ. ಮಹಾರಾಷ್ಟ್ರ ರಾಜ್ಯದ ಗ್ರಾಮ  ಒಂದನ್ನ ಮಾದರಿಯನ್ನಾಗಿಸಿಕೊಂಡು ಈ ಪ್ರಯೋಗ ಜಾರಿ ಮಾಡಲಾಗಿದೆ. 

ಇದನ್ನೂ ಓದಿ: ಮೊಟ್ಟೆಯಿಂದ ಕ್ಯಾನ್ಸರ್ ವದಂತಿ.. ವ್ಯಾಪಾರಿಗಳಿಗೆ ಭಾರೀ ಪೆಟ್ಟು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Digital Off Halaga village
Advertisment