/newsfirstlive-kannada/media/media_files/2025/12/09/belagavi-bjp-protest-1-2025-12-09-13-38-40.jpg)
/newsfirstlive-kannada/media/media_files/2025/12/09/belagavi-bjp-protest-2025-12-09-13-38-52.jpg)
ಬೃಹತ್ ಪ್ರತಿಭಟನೆ, ರೈತ ನಾಯಕರೂ ಭಾಗಿ
ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಮುಂದಾಗಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಅವರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಿಜೆಪಿ ನಾಯಕರ ಹೋರಾಟಕ್ಕೆ ರೈತರು ಕೂಡ ಸಾಥ್ ನೀಡಿದ್ದಾರೆ.
/newsfirstlive-kannada/media/media_files/2025/12/09/belagavi-bjp-protest-2-2025-12-09-13-39-19.jpg)
ಪೊಲೀಸರಿಂದ ಬಿಗಿ ಬಂದೋಬಸ್ತ್
ಸಾವಿರಾರು ರೈತರ ಜೊತೆ ಕೇಸರಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ತಡೆಯುವ ಉದ್ದೇಶದಿಂದ ಪೊಲಿಸರು ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದರು.
/newsfirstlive-kannada/media/media_files/2025/12/09/belagavi-bjp-protest-4-2025-12-09-13-39-39.jpg)
ಯಡಿಯೂರಪ್ಪ ಮಾದರಿಯಲ್ಲೇ ಹೋರಾಟ
ರೈತ ಹೋರಾಟ ಯಶಸ್ಸು ಆಗೋವರೆಗೆ ನಿದ್ದೆ ಮಾಡಲ್ಲ. ಅದೇ ರೀತಿ ನಾನು ರೈತ ಪರ ನಿಲ್ತೀನಿ. ರೈತ ಪರ ಬಿಜೆಪಿ ಹೋರಾಟ ಮಾಡುತ್ತದೆ. ಯಡಿಯೂರಪ್ಪ ಕೂಡ ರೈತರ ಪರ ಇದೇ ರೀತಿ ಹೋರಾಟ ಮಾಡುತ್ತಿದ್ದರು ಎಂದು ವಿಜಯೇಂದ್ರ ಹೇಳಿದ್ದಾರೆ.
/newsfirstlive-kannada/media/media_files/2025/12/09/belagavi-bjp-protest-3-2025-12-09-13-39-56.jpg)
ಸಿದ್ದರಾಮಯ್ಯ ನಾಟಕ
ಕೇಂದ್ರ ಸರ್ಕಾರ ಪರಿಹಾರ ನೀಡಿಲ್ಲ ಅಂತ ಸಿದ್ದರಾಮಯ್ಯ ನಾಟಕ ಮಾಡ್ತಿದ್ದಾರೆ. ಅದರೆ ಯಡಿಯೂರಪ್ಪ ನಾಟಕ ಮಾಡದೆ ತಕ್ಷಣವೇ ಮನೆ ಕಳೆದುಕೊಂಡ ರೈತರಿಗೆ ಐದು ಲಕ್ಷ ಪರಿಹಾರ ನೀಡಿದ್ರು. ಇವ್ರ ಯೋಗ್ಯತೆ ರೈತ ಪರ ಯೋಜನೆ ಘೋಷಣೆ ಮಾಡಿಲ್ಲ. ಸಿದ್ದರಾಮಯ್ಯ 2.5 ವರ್ಷ ಸರ್ಕಾರದಲ್ಲಿ 2500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.
/newsfirstlive-kannada/media/media_files/2025/12/09/belagavi-bjp-protest-5-2025-12-09-13-40-12.jpg)
ಡಿಕೆಶಿ ಕೌಂಟರ್
ಬಿಜೆಪಿ ನಾಯಕರ ಪ್ರತಿಭಟನೆಗೆ ಡಿಸಿಎಂ ಡಿಕೆ ಶಿವಕುಮಾರ್ ಕೌಂಟರ್ ನೀಡಿದ್ದಾರೆ. ಬಿಜೆಪಿಯವರು ಕೇಂದ್ರದ ವಿರುದ್ಧ ಪ್ರತಿಭಟಿಸಬೇಕು. ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವುದಲ್ಲ. ಮೆಕ್ಕೆಜೋಳ, ಸಕ್ಕರೆ, ಎಥಿನಾಲ್ ಬಗ್ಗೆ ಅನ್ಯಾಯವಾಗಿದೆ. ಯಾವುದೇ ಗ್ರ್ಯಾಂಟ್ ಕೂಡ ಕೇಂದ್ರ ಸರ್ಕಾರ ಕೊಡ್ತಿಲ್ಲ. ಒಂದು ದಿನ ಹೋಗಿ ಬಿಜೆಪಿ ಸಂಸದರು ಬಾಯಿ ತೆಗೆದಿಲ್ಲ. ಇವರಿಗೆ ಮಾನ ಮರ್ಯಾದೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ.
/newsfirstlive-kannada/media/media_files/2025/12/09/belagavi-bjp-protest-6-2025-12-09-13-40-29.jpg)
ಹೆಬ್ಬಾಳ್ಕರ್ ಆಕ್ರೋಶ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ.. ರೈತರ ಬಗ್ಗೆ ಬಿಜೆಪಿಯವರಿಗೆ ಕರುಣೆ ಬಂದಂಗಿದೆ. ರೈತರ ಪರವಾಗಿ ಎನು ಮಾಡಿದ್ದಾರೆ ಪಟ್ಟಿ ಬಿಡಲಿ. ಪ್ರತಿಭಟನೆ ವೇಳೆ ರೈತರಿಗೆ ಗೋಲಿಬಾರ್ ಮಾಡಿದ್ರು. ರೈತರ ಗಾಡಿ ಹತ್ತಿಸಿದ್ರು ಇಂಥವರಿಗೆ ನಾಚಿಕೆಯಾಬೇಕು ಎಂದು ಕಿಡಿಕಾರಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us