2 ಪೆಗ್ ವಿಸ್ಕಿ ಕುಡಿದ್ದೀವಿ, 2 ಪೀಸ್ ಮಾಂಸ ತಿಂದಿದ್ದೀವಿ -ಡಿನ್ನರ್ ಮೀಟಿಂಗ್ ಬಗ್ಗೆ ರಾಜಣ್ಣ ಮಾತು

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯನನ್ನು ಭೇಟಿಯಾಗಿ ಚರ್ಚಿಸಿರೋದು ಸಂಚಲನ ಮೂಡಿಸಿದೆ. ಕಾಂಗ್ರೆಸ್​ನಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ಸಿದ್ದುರನ್ನ ಭೇಟಿಯಾಗಿರೋದು ಕುತೂಹಲ ಮೂಡಿಸಿದೆ. ಇದರ ಮಧ್ಯೆ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ನಡೆಸಿ ಗಮನ ತಮ್ಮತ್ತ ಸೆಳೆದಿದ್ದಾರೆ.

author-image
Ganesh Kerekuli
KN Rajanna
Advertisment

ಬೆಳಗಾವಿ: ಸಿಎಂ ಭೇಟಿ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೆ ಆಪ್ತ ಶಾಸಕರ ಜೊತೆ ಸಚಿವ ಸತೀಶ್​ ಜಾರಕಿಹೋಳಿ ಡಿನ್ನರ್​ ಮೀಟಿಂಗ್​ ನಡೆಸಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಸತೀಶ್ ಜಾರಕಿಹೋಳಿ ನೇತೃತ್ವದಲ್ಲಿ ಡಿನ್ನರ್​ ಮೀಟಿಂಗ್​ ಆಯೋಜಿಸಲಾಗಿತ್ತು.

ಡಿನ್ನರ್​ ಮೀಟಿಂಗ್​ನಲ್ಲಿ ಕೆಲವು ಶಾಸಕರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. 15ಕ್ಕೂ ಹೆಚ್ಚು ಶಾಸಕರು ಹಾಗೂ ಸಚಿವರು ಡಿನ್ನರ್ ಮೀಟಿಂಗ್​ನಲ್ಲಿ ಭಾಗಿಯಾಗಿದ್ದರು. ಡಿನ್ನರ್ ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆಎನ್ ರಾಜಣ್ಣ, ಡಿನ್ನರ್ ಮಿಟಿಂಗ್​ನಲ್ಲಿ 2 ಪೆಗ್ ವಿಸ್ಕಿ ಕುಡಿದ್ದೀವಿ.

2 ಪೀಸ್ ಮಾಂಸ ತಿಂದಿದ್ದೀವಿ. 2 ಸ್ಪೂನ್ ಅನ್ನ ತಿಂದಿದ್ದೀವಿ. ನಮ್ಮ ಶಾಸಕರು ಒಳ್ಳೆಯ ಕಲಾವಿದರಿದ್ದಾರೆ. ನಮ್ಮ ಶಾಸಕರು ಒಳ್ಳೆ ಹಾಡುಗಳನ್ನ ಹಾಡಿದ್ದಾರೆ. ಕಲಾವಿದರ ಗುಣಗಳನ್ನ ನಮ್ಮ ಕಲಾವಿದರು ಹೊಂದಿದ್ದಾರೆ ಎಂದಿದ್ದಾರೆ. 

ಸಿಎಂ ಭೇಟಿಯಾದ ರಮೇಶ್ ಜಾರಕಿಹೊಳಿ

ಮಾಜಿ ಸಚಿವ ರಮೇಶ ಜಾರಕಿಹೊಳಿ ಏಕಾಂಗಿಯಾಗಿ ಸಿಎಂ ಸಿದ್ದರಾಮಯ್ಯನನ್ನು ಭೇಟಿಯಾಗಿ ಚರ್ಚಿಸಿರೋದು ಸಂಚಲನ ಮೂಡಿಸಿದೆ..
ಕಾಂಗ್ರೆಸ್​ನಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಜಾರಕಿಹೊಳಿ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

satish jaraliholi Dinner Party jarkiholi brothers Dinner meeting Ramesh Jarkiholi
Advertisment