ಶಿವರಾತ್ರಿಗೆ ಬೆಲೆ ಏರಿಕೆ ಶಾಕ್! ಬೆಂಗಳೂರಿನಲ್ಲಿ ಗಗನಕ್ಕೇರಿದ ಹೂ-ಹಣ್ಣಿನ ಬೆಲೆ..!

ನಾಳೆ ನಾಡಿನಾದ್ಯಂತ ಮಹಾಶಿವರಾತ್ರಿ (Maha Shivaratri) ಹಬ್ಬದ ಸಡಗರ ಮನೆಮಾಡಿದೆ. ಶಿವನ ಪೂಜೆಗೆ ಭಕ್ತರು ಸಕಲ ತಯಾರಿ ನಡೆಸುತ್ತಿದ್ದಾರೆ. ಆದರೆ, ಮಾರುಕಟ್ಟೆಗೆ ಹೋದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಹೂವು ಮತ್ತು ಹಣ್ಣುಗಳ ದರ ಕಂಡು ದಂಗಾಗಿದ್ದಾರೆ.

author-image
Ganesh Kerekuli
flower market
Advertisment

ಬೆಂಗಳೂರು: ನಾಳೆ ನಾಡಿನಾದ್ಯಂತ ಮಹಾಶಿವರಾತ್ರಿ (Maha Shivaratri) ಹಬ್ಬದ ಸಡಗರ ಮನೆಮಾಡಿದೆ. ಶಿವನ ಪೂಜೆಗೆ ಭಕ್ತರು ಸಕಲ ತಯಾರಿ ನಡೆಸುತ್ತಿದ್ದಾರೆ. ಆದರೆ, ಮಾರುಕಟ್ಟೆಗೆ ಹೋದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಹೂವು ಮತ್ತು ಹಣ್ಣುಗಳ ದರ ಕಂಡು ದಂಗಾಗಿದ್ದಾರೆ.

ಕಳೆದ ವಾರಕ್ಕೆ ಹೋಲಿಸಿದರೆ ಹಬ್ಬದ ಮುನ್ನಾದಿನವಾದ ಇಂದು (ಶನಿವಾರ) ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು ಹಾಗೂ ಹಣ್ಣಿನ ದರದಲ್ಲಿ ಕೊಂಚ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಬೆಲೆ ಏರಿಕೆ 

ಸಿಲಿಕಾನ್ ಸಿಟಿಯ ಕೆ.ಆರ್. ಮಾರುಕಟ್ಟೆ (KR Market), ಮಲ್ಲೇಶ್ವರಂ, ಗಾಂಧಿ ಬಜಾರ್ ಹಾಗೂ ಯಶವಂತಪುರ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಜೋರಾಗಿದೆ. ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ದರ ಏರಿಕೆ ಮಾಡಿದ್ದಾರೆ.

ಇದನ್ನೂ ಓದಿ:ಕೊನೆಗೂ ಕ್ಯಾಪ್ಟನ್​ ಹೆಸರು ಘೋಷಿಸಿದ ರಾಜಸ್ಥಾನ್ ರಾಯಲ್ಸ್..! ಹೊಸ ನಾಯಕ ಯಾರು?

flower market (1)

ಶಿವರಾತ್ರಿ ಪೂಜೆಗೆ ಅತ್ಯಗತ್ಯವಾದ ಬಿಲ್ವಪತ್ರೆಗೆ (Bilva Patre) ಭಾರೀ ಬೇಡಿಕೆ ಉಂಟಾಗಿದೆ. ಪೂಜೆಗೆ ಬೇಕಾದ ಏಲಕ್ಕಿ ಬಾಳೆಹಣ್ಣು, ದ್ರಾಕ್ಷಿ, ಸೇಬು, ದಾಳಿಂಬೆ ಹಾಗೂ ಕಿತ್ತಳೆ ಹಣ್ಣುಗಳ ದರವೂ ಕಳೆದ ವಾರಕ್ಕಿಂತ ಶೇ.20-30 ರಷ್ಟು ಹೆಚ್ಚಾಗಿದೆ. ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಜಲ್ಲೆಗಳಿಗೂ ಬೇಡಿಕೆ ಕುದುರಿದೆ.

ಹೂಗಳ ಬೆಲೆ ಹೇಗಿದೆ?

ಹೂವು

ಪ್ರಸ್ತುತ ದರ

ಕಳೆದ ವಾರದ ದರ

ಸೇವಂತಿ250200
ಗುಲಾಬಿ200150
ಮಲ್ಲಿಗೆ1400600
ಕನಕಾಂಬರ 800500
ಚೆಂಡು ಹೂವು6040
ಸುಗಂಧ ರಾಜ12060
ತಾವರೆ (ಒಂದಕ್ಕೆ)4025
ಕಾಕಡ400300

ಹಣ್ಣುಗಳ ಬೆಲೆ ಹೇಗಿದೆ?

ಹಣ್ಣುಗಳು 

ಪ್ರಸ್ತುತ ದರ

ಹಿಂದಿನ ವಾರದ ದರ

ಸೇಬು 160140
ಆರೆಂಜ್8060
ದಾಳಿಂಬೆ 300270
ಪಪ್ಪಾಯ6040
ಕಾಬುಲ್ ದ್ರಾಕ್ಷಿ 1401420
ಕಲ್ಲಂಗಡಿ 3020
ಯಾಲಕ್ಕಿ ಬಾಳೆ ಹಣ್ಣು 12080
ಕಿವಿ ಹಣ್ಣು 300280
ಸಪೋಟ 8060
ಡ್ರ್ಯಾಗನ್ 200100
ಕರಬೂಜ 5030
ಬಟರ್ ಫ್ರೂಟ್ಸ್​ 300250

ಗ್ರಾಹಕರ ಪರದಾಟ

ಕಳೆದ ವಾರ ಬೆಲೆಗಳು ಕಡಿಮೆಯಿದ್ದವು. ಆದರೆ ಹಬ್ಬ ಹತ್ತಿರ ಬರುತ್ತಿದ್ದಂತೆ ವ್ಯಾಪಾರಿಗಳು ದುಪ್ಪಟ್ಟು ಬೆಲೆ ಹೇಳುತ್ತಿದ್ದಾರೆ. ಆದರೂ ವರ್ಷಕ್ಕೊಮ್ಮೆ ಬರುವ ಹಬ್ಬವಾದ್ದರಿಂದ ದೇವರ ಪೂಜೆಗೆ ತೆಗೆದುಕೊಳ್ಳಲೇಬೇಕಿದೆಎಂದು ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಒಟ್ಟಿನಲ್ಲಿ ಬೆಲೆ ಏರಿಕೆಯ ನಡುವೆಯೂ ಭಕ್ತರು ಜಾಗರಣೆ ಮತ್ತು ಶಿವಪೂಜೆಗೆ ಬೇಕಾದ ಸಿದ್ಧತೆಗಳನ್ನು ಉತ್ಸಾಹದಿಂದಲೇ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Maha Shivaratri
Advertisment