/newsfirstlive-kannada/media/media_files/2026/01/08/inamdar-sugar-factory-blast-6-deaths-2026-01-08-17-43-50.jpg)
ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಪೋಟದಿಂದ 7 ಮಂದಿ ಸಾವು
ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆವೊಂದರಲ್ಲಿ ನಿನ್ನೆ ಮಧ್ಯಾಹ್ನದ ವೇಳೆಯಲ್ಲಿ ಬಾಯ್ಲರ್ ಸ್ಪೋಟಗೊಂಡಿದೆ. ಈ ವೇಳೆ ಮಳ್ಳಿ ಮೈ ಮೇಲೆ ಬಿದ್ದು 8 ಜನ ಕಾರ್ಮಿಕರ ಗಂಭೀರವಾಗಿ ಗಾಯವಾಗಿತ್ತು. ಇವರನ್ನು ಉಳಿಸಿಲು ಜೀರೋ ಟ್ರಾಫಿಕ್ ನಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೇ ಗಾಯಾಳುಗಳ ಪೈಕಿ 7 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕಾರ್ಖಾನೆ ಮಾಲೀಕರು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವ ರೀತಿಯಲ್ಲಿ ವರ್ತನೆ ತೋರಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.
/filters:format(webp)/newsfirstlive-kannada/media/media_files/2026/01/08/inamdar-sugar-factory-blast-6-deaths-1-2026-01-08-17-45-51.jpg)
ಈ ಫೋಟೋದಲ್ಲಿ ಕಾಣುತ್ತಿರೋ ಎಲ್ಲರೂ 25-30 ವಯಸ್ಸಿನ ಒಳಗಿನವರು. ಕೇವಲ ಒಂದೆರಡು ವರ್ಷಗಳಿಂದ ಕೆಲಸ ಆರಂಭಿಸಿದ್ದ ಇವರು ಮನೆ ಕಟ್ಟಬೇಕು, ಮದುವೆಯಾಗಬೇಕು, ಮನೆಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಕನಸು ಕಂಡಿದ್ದರು. ಆದರೇ ವಿಧಿ ಆಟವೇ ಬೇರೆಯಾಗಿದೆ. ನಿನ್ನೆ ಮಧ್ಯಾಹ್ನದ ವೇಳೆಗೆ ಬೆಳಗಾವಿಯ ಬೈಲಹೊಂಗಲದ ಇನಾಮಾದಾರ್ ಸಕ್ಕರೆ ಕಾರ್ಖಾನೆಯ ಬಾಯ್ಲರ್ ನಲ್ಲಿ ದೋಷ ಕಂಡು ಬಂದಿದ್ದು, ಯೂನಿಟ್ ನಂಬರ್ ಒಂದರಲ್ಲಿ ವಾಯ್ಸರ್ ದುರಸ್ಥಿಗೆ ಮುಂದಾಗಿದ್ದಾರೆ. ಈ ವೇಳೆಯಲ್ಲಿ ಬಾಯ್ಲರ್ ಸ್ಪೋಟಗೊಂಡಿದೆ. ಸ್ಪೋಟದ ರಭಸಕ್ಕೆ ಬಾಯ್ಲರ್ ನಲ್ಲಿ ಇದ್ದ ಮಳ್ಳಿ ಉಕ್ಕಿದೆ. ಈ ಬಿಸಿ ಮಳ್ಳಿ 8 ಜನ ಕಾರ್ಮಿಕರ ಮೇಲೆ ಬಿದ್ದು, ಬಹುತೇಕ ಎಲ್ಲರಿಗೂ ತೀವ್ರ ರೀತಿಯಲ್ಲಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಬಳಿ ಇರೋ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ತಕ್ಷಣ ಗಾಯಾಳುಗಳನ್ನು ಬೈಲಹೊಂಲಗದ ಆಸ್ಪತ್ರೆಗೆ ಶೀಫ್ಟ್ ಮಾಡಲಾಗಿದೆ. ಈ ವೇಳೆಯಲ್ಲಿ ಗಾಯ ಗಂಭೀರವನ್ನು ತಿಳಿದ ವೈದ್ಯರು ಪೊಲೀಸರ ನೆರವು ಪಡೆದು ಜಿರೋ ಟ್ರಾಫಿಕ್ ನಲ್ಲಿ ಎಲ್ಲರನ್ನು ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರು. ನಿನ್ನೆಯಿಂದಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೇ ಘಟನೆಯಲ್ಲಿ ಗಾಯಗೊಂಡ 8 ಜನರ ಪೈಕಿ ಏಳು ಜನ ಇಂದು ಮೃತಪಟ್ಟಿದ್ದಾರೆ. ಈ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ದೌಡಾಯಿಸಿದ ಸಂಬಂಧಿಗಳು ಮಕ್ಕಳನ್ನು ನೆನೆದು ಕಣ್ಣಿೀರು ಹಾಕಿದ್ರು.
ಇನಾಮದಾರ್ ಸಕ್ಕರೆ ಕಾರ್ಖಾನೆ ಎರಡನೇ ಸಲ ತನ್ನ ಕಬ್ಬು ನುರಿಸುವ ಕೆಲಸ ಮಾಡುತ್ತಿದೆ. ಈ ವೇಳೆಯಲ್ಲಿ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದೆ. ಇನ್ನೂ ಈ ವೇಳೆ ಅಕ್ಷಯ್ ಚೋಪಡೆ, ದೀಪಕ್ ಮುನ್ನೋಳಿ, ಸುದರ್ಶನ ಬನೋಶಿ, ಭರತೇಶ ಸಾರವಾಡೆ, ಗುರು ತಮ್ಮನ್ನವರ್ ಹಾಗೂ ಮಂಜುನಾಥ್ ಕಾಜಗಾರ್ ಹಾಗೂ ಮಂಜುನಾಥ ತೇರದಾಳ ಎಂಬ ಇಂಜಿನಿಯರ್ ಮತಪಟ್ಟಿದ್ದಾರೆ. ನಿನ್ನೆ ಸಂಜೆಯಿಂದ ಸಾವು ನೋವು, ಗಾಯಾಳುಗಳ ಸಮಸ್ಯೆ ಇಷ್ಟೆಲ್ಲ ನಡೆದ್ರು, ಕಾರ್ಖಾನೆಯ ಮಾಲೀಕರು ಈ ಕಡೆ ತಿರುಗಿ ನೋಡಿಲ್ಲ. ಇನ್ನೂ ಮೃತರ ಪೈಕಿ ಇಂಜಿನಿಯರ್ ಮಂಜುನಾಥ ತೇರದಾಳ ಪತ್ನಿಗೆ ಇನ್ನೂ ಎರಡು ದಿನಗಳಲ್ಲಿ ಹೆರಿಗೆ ಆಗಬೇಕಿತ್ತು. ಈ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮಟ್ಟಿದೆ. ಇನ್ನೂ ಯಾವುದಕ್ಕೂ ಸ್ಪಂದನೆ ನೀಡದ ಕಾರ್ಖಾನೆಯ ಮಾಲೀಕರ ವಿರುದ್ದ ಕೆಎಲ್ಇ ಶವಾಗಾರದ ಬಳಿ ಪೋಷಕರು ಪ್ರತಿಭಟನೆ ಸಹ ನಡೆಸಿದ್ದರು. ಇನ್ನೂ ಸೂಕ್ತ ಪರಿಹಾರ ನೀಡಬೇಕು ಎಂಬುದು ಕುಟುಂಬಸ್ಥರ ಒತ್ತಾಯವಾಗಿದೆ.
ಒಟ್ಟಾರೆಯಾಗಿ ನೂರಾರು ಕನಸ್ಸು ಕಂಡು ಸಕ್ಕರೆ ಕಾರ್ಖಾನೆಯ ಕೆಲಸಕ್ಕೆ ಸೇರಿದ್ದ ಕಾರ್ಮಿಕರು ಇಂದು ಮಣ್ಣಲ್ಲಿ ಮಣ್ಣಾಗಿದ್ದಾರೆ. ಇಷ್ಟಾದ್ರು ಕಾರ್ಖಾನೆಯ ಮಾಲೀಕರು ಕನಿಷ್ಟ ಸಾಂತ್ವನ ಹೇಳದೆ ಇರೋದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಇನಾಮದಾರ್ ಸಕ್ಕರೆ ಕಾರ್ಖಾನೆ ಉದ್ಯಮಿ ಮೆಟಗುಡ್, ಮಾಜಿ ಸಂಸದ ಪ್ರಭಾಕರ ಕೋರೆ ಹಾಗೂ ಮಾಜಿ ಸಚಿವ ಡಿ. ಬಿ. ಇನಾಮದಾರ ಪುತ್ರ ವಿಕ್ರಂ ಇನಾಮದಾರ್ ಪಾಲುದಾರಿಕೆ ಹೊಂದಿದೆ. ಇನ್ನೂ ಜಿಲ್ಲಾಡಳಿತ ಸಹ ಘಟನೆಯ ಬಗ್ಗೆ ಸದ್ಯ ವರದಿಯನ್ನು ಕೇಳಿದೆ. ಇನ್ನಾದರೂ ಸರ್ಕಾರ ಕಾರ್ಖಾನೆ ಮಾಲೀಕರಿಂದ ಪರಿಹಾರ ಕೊಡಿಸುವಲ್ಲಿ ಮಧ್ಯಸ್ಥಿಕೆ ವಹಿಸಬೇಕು. ಜೊತೆಗೆ ಸರ್ಕಾರದಿಂದಲೂ ಪರಿಹಾರ ನೀಡಬೇಕು ಎನ್ನುವ ಆಗ್ರಹವನ್ನು ಸಂತ್ರಸ್ಥರ ಕುಟುಂಬ ವರ್ಗ ಮಾಡಿವೆ.
ಶ್ರೀಕಾಂತ ಕುಬಕಡ್ಡಿ. ನ್ಯೂಸ್ ಫಸ್ಟ್, ಬೆಳಗಾವಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us