/newsfirstlive-kannada/media/media_files/2026/01/06/basavanth-kadolkar-stabbed-2026-01-06-16-33-39.jpg)
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರನ ಕಾರ್ ಚಾಲಕನಿಗೆ ಚೂರಿ ಇರಿತ ಪ್ರಕರಣದ ಆರೋಪಿಗಳ್ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆಗೆ ಹತ್ಯೆ ಯತ್ನ ಮಾಡಿದ್ದಾರೆ ಎಂಬುದು ಈಗ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸಚಿವೆ ಪುತ್ರ ಮೃಣಾಲ್ ಹೆಬ್ಬಾಳಕರ ಕಾರ್ ಚಾಲಕ ಬಸವಂತ ಕಡೋಲ್ಕರ್ (32) ಮೇಲೆ ನಿನ್ನೆ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಚಾಕುವಿನಿಂದ ದಾಳಿ ಮಾಡಲಾಗಿತ್ತು. ಬಸವಂತ ಮೇಲೆ ಅಟ್ಯಾಕ್ ಮಾಡಿದವರು ಸ್ನೇಹಿತರೆೇ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ . ಬೆಳಗಾವಿ ತಾಲೂಕಿನ ಬೋಜಗಾ ಗ್ರಾಮದ ಶಿವಯ್ಯಾ, ನಿತೀಶ್ ಎಂಬುವವರಿಂದ ಹತ್ಯೆಗೆ ಯತ್ನ ನಡೆದಿದೆ . ಆರೋಪಿಗಳು ಮತ್ತು ಬಸವಂತ ಒಟ್ಟಾಗಿ ಬ್ಯುಸಿನೆಸ್ ಮಾಡುತ್ತಿದ್ದರು. ಹಣಕಾಸಿನ ವಿಚಾರಕ್ಕೆ ಇವರ ಮಧ್ಯೆ ಮನಸ್ತಾಪ ಬಂದಿದೆ . ಇದೇ ಕಾರಣಕ್ಕೆ ಚೂರಿಯಿಂದ ನಾಲ್ಕು ಬಾರಿ ಚುಚ್ಚಿ ಪರಾರಿಯಾಗಿದ್ದಾರೆ. ಚಾಕುವಿನಿಂದ ದಾಳಿಗೊಳಗಾದ ಚಾಲಕ ಬಲವಂತ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಇನ್ನೂ ಆರೋಪಿಗಳಾದ ಶಿವಯ್ಯ, ನೀತೀಶ್ ಎಂಬ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಮಹಾರಾಷ್ಟ್ರ, ಗೋವಾಕ್ಕೆ ಆರೋಪಿಗಳು ಪರಾರಿಯಾಗಿರುವ ಸಾಧ್ಯತೆ ಇದೆ. ಬೆಳಗಾವಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲಾಗಿದೆ.
/filters:format(webp)/newsfirstlive-kannada/media/media_files/2026/01/07/pavithra-gowda-and-kushi-gowda-1-2026-01-07-12-22-02.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us