Advertisment

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಬಿಜೆಪಿಯ ಜೊಲ್ಲೆಗೆ ನೀಡಿದ್ದೇಕೆ? ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ಸಿಗರೇ ಆಯ್ಕೆಯಾಗಿದ್ದರು. ಕಾಂಗ್ರೆಸ್ಸಿಗರು ಅಧ್ಯಕ್ಷರಾಗುವ ಅವಕಾಶ ಇತ್ತು. ಆದರೂ, ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆಗೆ ನೀಡಲಾಗಿದೆ. ಏಕೆ ಹೀಗೆ ಮಾಡಿದ್ದು ಎಂಬ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

author-image
Chandramohan
Jarakiholi brothers

ಕಾಂಗ್ರೆಸ್ಸಿಗರ ಬದಲು ಬಿಜೆಪಿ ನಾಯಕನಿಗೆ ಅಧ್ಯಕ್ಷ ಪಟ್ಟ ಕಟ್ಟಿದ ಜಾರಕಿಹೊಳಿ ಬ್ರದರ್ಸ್!

Advertisment
  • ಕಾಂಗ್ರೆಸ್ಸಿಗರ ಬದಲು ಬಿಜೆಪಿ ನಾಯಕನಿಗೆ ಅಧ್ಯಕ್ಷ ಪಟ್ಟ ಕಟ್ಟಿದ ಜಾರಕಿಹೊಳಿ ಬ್ರದರ್ಸ್!
  • ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ 30-30 ತಿಂಗಳ ಫಾರ್ಮುಲಾ ರಚಿಸಿದ ಜಾರಕಿಹೊಳಿ

ರಾಜ್ಯದಲ್ಲಿ ಬೆಂಗಳೂರು ನಂತರ ಅತಿ ದೊಡ್ಡ ಜಿಲ್ಲೆ ಅಂದರೇ, ಬೆಳಗಾವಿ ಜಿಲ್ಲೆ. ಬೆಳಗಾವಿ ಜಿಲ್ಲೆಯಲ್ಲಿ  18 ವಿಧಾನಸಭಾ ಕ್ಷೇತ್ರಗಳಿವೆ. 27 ಲಕ್ಷ ಜನಸಂಖ್ಯೆ ಇದೆ. ಬೆಳಗಾವಿ ಜಿಲ್ಲೆಯಲ್ಲಿ  ಚಿಕ್ಕೋಡಿ ಮತ್ತು ಬೆಳಗಾವಿ ಸೇರಿದಂತೆ 2 ಲೋಕಸಭಾ ಕ್ಷೇತ್ರಗಳಿವೆ.  ಇಂಥ ಜಿಲ್ಲೆಯ ಡಿಸಿಸಿ ಬ್ಯಾಂಕ್ ನಲ್ಲಿ ಬಂಡವಾಳವೂ ಹೆಚ್ಚಾಗಿದೆ.  ಹೀಗಾಗಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪ್ರತಿಷ್ಠಿತ ಸ್ಥಾನ. ಈ ಪ್ರತಿಷ್ಠಿತ ಸ್ಥಾನಕ್ಕೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ.  ಅಣ್ಣಾ ಸಾಹೇಬ್ ಜೊಲ್ಲೆ ಬಿಜೆಪಿ ಪಕ್ಷದವರಾದರೂ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.
ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಬಹುಮತ ಪಡೆದು ಮೇಲುಗೈ ಸಾಧಿಸಿದ್ದರು.  ಜಾರಕಿಹೊಳಿ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ್ದ ರಮೇಶ್ ಕತ್ತಿ-ಲಕ್ಷ್ಮಣ್ ಸವದಿ ಬಣಕ್ಕೆ ಹಿನ್ನಡೆಯಾಗಿತ್ತು.  ವೈಯಕ್ತಿಕವಾಗಿ ರಮೇಶ್ ಕತ್ತಿ ಮತ್ತು ಲಕ್ಷ್ಮಣ್ ಸವದಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.  ಆದರೇ, ತಮ್ಮ ಬಣದ ನಿರ್ದೇಶಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ. 

Advertisment

ANNA SAHEB JOLLE ELECTED AS DCC BANK PREZ



ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆಗೆ ನೀಡಿದ್ದರ ಬಗ್ಗೆ ಬೆಳಗಾವಿ ಉಸ್ತುವಾರಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.  ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೋಲ್ಲೆ, ಉಪಾಧ್ಯಕ್ಷ ರಾಗಿ ರಾಜು ಕಾಗೆ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.  30 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ.  ಬಿಜೆಪಿಗೆ ಈಗ ಅಧ್ಯಕ್ಷ ಸ್ಥಾನ , ಕಾಂಗ್ರೆಸ್ ಗೆ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದೇವೆ . ಈ ಹಿಂದೆ ನಾವು 3 ಜನ ಇದ್ದರೂ ಅಧ್ಯಕ್ಷ ಸ್ಥಾನ ಹಿಂದೆ ಬಿಟ್ಟು ಕೊಟ್ಟಿದ್ದರು.  ಈಗ ನಾವು ಬಿಜೆಪಿಯವರಿಗೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿದ್ದೇವೆ.  ನಮ್ಮನ್ನ ನಂಬಿ  ಅಣ್ಣಾಸಾಹೇಬ್ ಜೊಲ್ಲೆ ಬಂದಿದ್ದರು.   ಹೀಗಾಗಿ ಜೊಲ್ಲೆಯವರನ್ನ ಗೆಲ್ಲಿಸಿ, ಅಧ್ಯಕ್ಷರಾಗಿ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್ ಗೆ ಅಣ್ಣಾಸಾಹೇಬ್ ಜೊಲ್ಲೆ  ಅಗತ್ಯವಿದೆ .  

ಪ್ರತಿ ವರ್ಷವೂ ಬ್ಯಾಂಕ್ ನಿಂದ ಠೇವಣಿ ಹೋಗುತ್ತೆ,  ಬರುತ್ತದೆ .  ಅವಿರೋಧ ಆಯ್ಕೆ ಆಗುತ್ತೆ ಅಂತಾ ಆಸೆಯಿದೆ .  ಚುನಾವಣೆ ನಡೆದರೂ 13 ಜನ ಸದಸ್ಯ ಬಲ ತಮಗೆ ಇದೆ. ನಾವೇ ಗೆಲ್ಲುತ್ತೇವೆ ಎಂದು  ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. 
ನಮ್ಮ ಪರ ಸದಸ್ಯರ ಸೆಳೆಯಲು ಬೆಂಗಳೂರು, ಬೆಳಗಾವಿಯಲ್ಲಿ ಇದ್ದುಕೊಂಡು ಮಸಾಜ್ ಮಾಡಿದ್ರು . ಆದ್ರೆ ನಾವು ಆಯುರ್ವೇದಿಕ್ ಡಾಕ್ಟರ್ ಇದ್ದೇವೆ.  ಸರಿಯಾದ ಔಷಧ ಕೊಟ್ಟಿದ್ದೇವೆ .  ಹೀಗಾಗಿ ಸರಿಯಾಗಿದೆ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Satish jarakiholi reaction ON jolle elected as Dcc Bank Prez
Advertisment
Advertisment
Advertisment