/newsfirstlive-kannada/media/media_files/2025/12/26/dowry-harassment-death-of-ganavi-2025-12-26-15-01-14.jpg)
ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ಗಾನವಿ
ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲ. ಹುಡುಗಿ ಸಿಗದೇ ಅನೇಕರು ಮದುವೆಯಾಗದೇ ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಿದ್ದಾರೆ. ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮದುವೆಯಾಗಲು ಹೆಣ್ಣು ಕೊಟ್ಟು 40 ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದರೇ, ಇನ್ನೂ ಹೆಚ್ಚಿನ ವರದಕ್ಷಿಣೆ ಬೇಕೆಂದು ನವ ವಧುವಿಗೆ ಕಿರುಕುಳ ಕೊಡುವ ಧನದಾಹಿಗಳು ನಮ್ಮ ಸಮಾಜದಲ್ಲಿ ಇದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆಯಾದ ಒಂದೇ ವಾರಕ್ಕೆ ಗಂಡ ಹಾಗೂ ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ನವ ವಧು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳಕ್ಕೆ ಮದುವೆಯಾಗಿ ಒಂದೇ ತಿಂಗಳಿಗೆ ನವ ವಧು ಗಾನವಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
40 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಗಾನವಿ ತಂದೆ ಶಶಿ ಕುಮಾರ್ ಮಗಳ ಮದುವೆ ರಿಸೆಪ್ಷನ್ ಮಾಡಿದ್ದರು. ಮದುವೆ ಅಗಿ ಒಂದೇ ವಾರಕ್ಕೆ ಗಾನವಿ ಪತಿ ಸೂರಜ್ ಹಾಗೂ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಆರಂಭವಾಗಿದೆ. ವರದಕ್ಷಿಣೆ ನೀಡುವವರೆಗೆ ಮನೆಗೆ ಸೇರಿಸಲ್ಲ ಎಂದು ಪತಿ ಸೂರಜ್ ಹಾಗೂ ಕುಟುಂಬದವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿ ಮನೆಯಿಂದ ಮಗಳು ಗಾನವಿಯನ್ನು ತವರು ಮನೆಗೆ ತಂದೆ ಶಶಿಕುಮಾರ್ ಕರೆದುಕೊಂಡು ಬಂದಿದ್ದರು. ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಬಿ. ಚನ್ನಸಂದ್ರದ ತವರು ಮನೆಯಲ್ಲಿ ಗಾನವಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾನವಿ ಪೋಷಕರು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಗಾನವಿಯನ್ನು ಸೇರಿಸಿದ್ದರು. ಆದರೇ ಗಾನವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಗಾನವಿ ಪತಿ ಸೂರಜ್ ಗೆ ಕರೆ ಮಾಡಿ ವಿಷಯ ತಿಳಿಸಲು ಶಶಿಕುಮಾರ್ ಯತ್ನಿಸಿದ್ದಾರೆ. ಈ ವೇಳೆ ಸೂರಜ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಅಗಿದ್ದಾನೆ. ಬೆಂಗಳೂರಿನ ರಾಮಮೂರ್ತಿ ನಗರ ಠಾಣೆಯಲ್ಲಿ ಸೂರಜ್, ತಾಯಿ ಜಯಂತಿ, ಅಣ್ಣ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ.
ಗಾನವಿ ಹಾಗೂ ಸೂರಜ್ ಶ್ರೀಲಂಕಾಗೆ ಹನಿಮೂನ್ ಗೆ ಹೋಗಿದ್ದರು. ಆದರೇ, ಕಳೆದ ಭಾನುವಾರ ಹನಿಮೂನ್ ನಿಂದ ಅರ್ಧಕ್ಕೆ ವಾಪಸ್ ಬೆಂಗಳೂರಿಗೆ ಬಂದಿದ್ದರು. ಪತಿ ಹಾಗೂ ಪತ್ನಿ ನಡುವೆ ಜಗಳದ ಹಿನ್ನಲೆಯಲ್ಲಿ ಸೋಮವಾರ ಮಗಳನ್ನು ತಮ್ಮ ಮನೆಗೆ ಶಶಿಕುಮಾರ್ ಕರೆ ತಂದಿದ್ದರು. ನಿನ್ನೆ ಮನೆಯಲ್ಲಿ ಇದ್ದಕ್ಕಿದ್ದಂತೆ ಗಾನವಿ ನೇಣಿಗೆ ಶರಣಾಗಿದ್ದರು. ಈ ವೇಳೆ ಮನೆಯವರು ನೋಡಿ ರಕ್ಷಿಸಲು ಮುಂದಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೇ, ಬ್ರೇನ್ ಡೆಡ್ ಆಗಿದ್ದರಿಂದ ಗಾನವಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದರು.
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಗಾನವಿ ಪತಿ ಸೂರಜ್, ಪೋಷಕರ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಕೇಸ್ ದಾಖಲಾಗಿದೆ. ಸೂರಜ್ ಹಾಗೂ ಪೋಷಕರನ್ನು ವಿಚಾರಣೆ ನಡೆಸಲು ರಾಮಮೂರ್ತಿ ನಗರ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಸೂರಜ್ ಮನೆ ಬಳಿಗೆ ಪೊಲೀಸರು ತೆರಳಿದ್ದಾರೆ.
ಸೂರಜ್ ಹಣದ ದಾಹ ಎಷ್ಟಿತ್ತು ಎನ್ನುವುದನ್ನು ಗಾನವಿ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮದುವೆ ಬಳಿಕ ಶ್ರೀಲಂಕಾಗೆ ಹನಿಮೂನ್‌ಗೆ ನವ ದಂಪತಿ ಹೋಗಿದ್ದರು. ಹನಿಮೂನ್ ನಲ್ಲಿಯೂ ಸೂರಜ್ ಗೆ ವರದಕ್ಷಿಣೆಯದ್ದೇ ಜಪ ಮಾಡುತ್ತಿದ್ದ. ಪ್ರೀತಿಯಿಂದ ಹೆಂಡತಿ ಹತ್ತಿರ ಹೋದರೂ, ಸೂರಜ್ ಮುಟ್ಟುತ್ತಿರಲಿಲ್ಲವಂತೆ. ಫಸ್ಟ್ ನೈಟ್ ಆಗಬೇಕು ಅಂದರೇ, ಫಸ್ಟ್ ನನ್ನ ಡಿಮ್ಯಾಂಡ್ ಈಡೇರಬೇಕು ಎಂದು ಸೂರಜ್ ಹೇಳಿದ್ದನಂತೆ. ವರದಕ್ಷಿಣೆ ಡಿಮ್ಯಾಂಡ್ ಈಡೇರಿದರೇ ಮಾತ್ರವೇ ನಿನ್ನಾಸೆ ಈಡೇರೋದು ಎಂದು ಪತಿ ಸೂರಜ್ ಹೇಳಿದ್ದನಂತೆ. ಇದೇ ವಿಚಾರಕ್ಕೆ ಜಗಳ ಮಾಡಿಕೊಂಡು ಗಾನವಿ ಹನಿಮೂನ್ ನಿಂದ ಅರ್ಧಕ್ಕೆ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಮನೆಗೆ ಬಂದರೂ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ. ಮಾತುಕತೆಗೆ ಹೋಗಿದ್ದ ಗಾನವಿ ಫೋಷಕರ ಮೇಲೆಯೂ ಸೂರಜ್ ಫ್ಯಾಮಿಲಿ ದರ್ಪ ತೋರಿದೆ. ನಮ್ಮ ಮನೆಯಿಂದ ನಿಮ್ಮ ಮಗಳನ್ನ ಕರೆದುಕೊಂಡು ಗೆಟ್ ಔಟ್ ಎಂದು ಸೂರಜ್ ಹೇಳಿದ್ದಾನೆ. ಪೊಲೀಸ್ ರಿಗೆ ನೀಡಿದ ದೂರಿನಲ್ಲಿ ಸೂರಜ್ ಹಣದ ದಾಹ, ಗಾನವಿಗೆ ನೀಡ್ತಿದ್ದ ಕಿರುಕುಳ ಬಗ್ಗೆ ಉಲ್ಲೇಖ…ಮಾಡಲಾಗಿದೆ. ಮದುವೆಯಾದ ದಿನದಿಂದ ಪತಿ ಸೂರಜ್ ಹಾಗೂ ಮನೆಯವರು ಕಿರುಕುಳ ಕೊಡ್ತಿದ್ದ ಆರೋಪ ಮಾಡಲಾಗಿದೆ.
/filters:format(webp)/newsfirstlive-kannada/media/media_files/2025/12/26/dowry-harassment-death-of-ganavi-1-2025-12-26-15-03-52.jpg)
ಆರು ಸೆಟ್ ಒಡವೆ ತಂದು ಕೊಡು, ಇನ್ನೋವಾ ಕಾರು ಬೇಕು ಅಂಥ ಪತಿ ಸೂರಜ್ ಡಿಮ್ಯಾಂಡ್ ಮಾಡಿದ್ದಾನೆ. ಮಗಳನ್ನ ಮನೆಗೆ ಸೇರಿಸಿಕೊಳ್ಳಿ ಅಂಥ ಅಳಿಯನ ಕಾಲಿಗೆ ಗಾನವಿ ತಂದೆ ಶಶಿ ಕುಮಾರ್ ಹೇಳಿದ್ದಾರೆ. ಈ ವೇಳೆ ಗಾನವಿ ಹಾಗೂ ತಂದೆಗೆ ಸೂರಜ್ ಮನೆಯವರು…ನಿಂದಿಸಿದ್ದಾರೆ. ಬಳಿಕ ತಮ್ಮ ಮನೆಗೆ ಗಾನವಿ ಹಾಗೂ ತಂದೆ ಶಶಿಕುಮಾರ್…ವಾಪಸ್ ಬಂದಿದ್ದಾರೆ. ತನ್ನ ತಂದೆಗೂ ಅವಮಾನ ಮಾಡಿದ್ದರು ಅನ್ನೋ ನೋವಿನಲ್ಲಿ ಗಾನವಿ ಇದ್ದರು. ಬಿ.ಕಾಂ ಮುಗಿಸಿದ್ದ ಗಾನವಿಗೆ ಪೋಷಕರು ಆರೇಜ್ ಮ್ಯಾರೇಜ್ ಮಾಡಿದ್ದರು.
ಹುಡುಗ ಸೂರಜ್ ತಮಗೆ ರೆಸಾರ್ಟ್ ಇದೆ ಅಂಥ ಹೇಳಿದ್ದ. … ನಾವು ತುಂಬಾ ಹೈಪ್ರೊಪೈಲ್ ಅಂಥ ಹೇಳಿಕೊಂಡಿದ್ದರು. … ನಮ್ಮ ಮಗಳು ಚೆನ್ನಾಗಿರುತ್ತಾಳೆ ಅಂಥ ಮದುವೆ ಮಾಡಿ ಕೊಟ್ಟಿದ್ದೇವು. … ಮದುವೆ ಮಾಡಿದ ದಿನದಿಂದ ಟಾರ್ಚರ್…ಕೊಟ್ಟಿದ್ದಾರೆ. ಶ್ರೀಲಂಕಾಗೇ ಹೋಗಿದ್ದಾಗ ಗಾನವಿಗೆ ಜ್ವರ…ಇತ್ತು. ಊಟ ತಿಂಡಿ ನೀರು ಕೊಡದೇ ಅಲ್ಲೂ ಗಲಾಟೆ…ಮಾಡಿದ್ದಾರೆ. ಶ್ರೀಲಂಕಾದಲ್ಲಿ ಗಾನವಿ ಬಹಳ ನೊಂದಿದ್ದಳು. ಬಳಿಕ ಮನೆಯವರಿಗೆ ವಿಚಾರ ತಿಳಿಸಿದ್ದರು. ಪತಿ ಸೂರಜ್ ಐವಿಎಫ್ ನಲ್ಲಿ ಮಗು ಮಾಡ್ಕೊಳೋಣ ಅಂಥ ಹೇಳಿದ್ದನಂತೆ. ಅದಕ್ಕೆ ನಮ್ಮ ಮನೆಯ ಹುಡುಗಿನೇ ಬೇಕಿತ್ತಾ? ಎಂದು ಗಾನವಿ ಪೋಷಕು ಪ್ರಶ್ನೆ ಮಾಡುತ್ತಿದ್ದಾರೆ. ಆತ ಗಂಡಸೇ ಅಲ್ಲ ಅಂಥ ಮೃತ ಗಾನವಿ ಕುಟುಂಬಸ್ಥರು…ಹೇಳುತ್ತಿದ್ದಾರೆ. ಕೊಲಂಬಿಯಾ ಆಸ್ಪತ್ರೆ ಬಳಿ ಗಾನವಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
/filters:format(webp)/newsfirstlive-kannada/media/media_files/2025/12/26/dowry-harassment-death-of-ganavi-2-2025-12-26-15-06-06.jpg)
ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಪ್ರತಿ, ಗಾನವಿ ಹಾಗೂ ಸೂರಜ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us