ಬೆಂಗಳೂರಿನಲ್ಲಿ 7 ಕೋಟಿ ರೂಪಾಯಿ ದರೋಡೆ ಕೇಸ್‌ : ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

ಬೆಂಗಳೂರಿನಲ್ಲಿ ನಿನ್ನೆ ನಡೆದ 7 ಕೋಟಿ ರೂಪಾಯಿ ದರೋಡೆ ಕೇಸ್ ನಲ್ಲಿ ಇಬ್ಬರು ಆರೋಪಿಗಳನ್ನು ಆಂಧ್ರದ ತಿರುಪತಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಬಾಣಸವಾಡಿ ಏರಿಯಾದ ಇಬ್ಬರು ಆರೋಪಿಗಳು ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದರು. ರಾಬರಿ ಕೇಸ್ ನಲ್ಲಿ ಮೊದಲ ಬ್ರೇಕ್ ಥ್ರೂ ಸಿಕ್ಕಿದೆ.

author-image
Chandramohan
robbary (1)

ಬೆಂಗಳೂರಿನಲ್ಲಿ ನಡೆದ ರಾಬರಿ ಕೇಸ್ ನಲ್ಲಿ ಇಬ್ಬರು ಆರೋಪಿಗಳು ವಶಕ್ಕೆ

Advertisment
  • ಬೆಂಗಳೂರಿನಲ್ಲಿ ನಡೆದ ರಾಬರಿ ಕೇಸ್ ನಲ್ಲಿ ಇಬ್ಬರು ಆರೋಪಿಗಳು ವಶಕ್ಕೆ
  • ಆಂಧ್ರದ ತಿರುಪತಿಯಲ್ಲಿ ಇಬ್ಬರು ಆರೋಪಿಗಳು ವಶಕ್ಕೆ

ಬೆಂಗಳೂರಿನ ಡೈರಿ ಸರ್ಕಲ್ ಮೇಲ್ಸೇತುವೆ ನಡೆದ ಕ್ಯಾಶ್ ಮ್ಯಾನೇಜ್ ಮೆಂಟ್ ಸರ್ವೀಸ್‌ ಕಂಪನಿಯ 7 ಕೋಟಿ ರೂಪಾಯಿ ಹಣ ದರೋಡೆ ಕೇಸ್ ನಲ್ಲಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ತಿರುಪತಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಬಾಣಸವಾಡಿಯ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಿನ್ನೆ ಮಧ್ಯಾಹ್ನ ಸಿಎಂಎಸ್ ವಾಹನದಲ್ಲಿ ಸಾಗಿಸುತ್ತಿದ್ದ ಹಣವನ್ನು ದರೋಡೆ ಮಾಡಿದ ಬಳಿಕ ಆರೋಪಿಗಳು ಬೆಂಗಳೂರು ಸಿಟಿ ಬಿಟ್ಟು, ತಿರುಪತಿಗೆ ಪರಾರಿಯಾಗಿದ್ದರು. ಈಗ ತಿರುಪತಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಬೆಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

robbary (2)



ಬೆಂಗಳೂರಲ್ಲಿ 7 ಕೋಟಿ ರಾಬರಿ ಪ್ರಕರಣದಲ್ಲಿ ಬಾಣಸವಾಡಿ ಕಲ್ಯಾಣನಗರದ ಇಬ್ಬರನ್ನು  ಸಿಸಿಬಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಕಾರಿನ  ನಂಬರ್ ಪ್ಲೇಟ್ ಬದಲಿಸಿ ಹೊರಟು  ಇನ್ನೋವಾ ಕಾರ್ ಸಮೇತ ಆರೋಪಿಗಳು ಎಸ್ಕೇಪ್ ಆಗಿದ್ದರು.  ಇನ್ನೋವಾ ಕಾರಿಗೆ  ಉತ್ತರ ಪ್ರದೇಶ(UP) ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಹಾಕಿಕೊಂಡು  ಪರಾರಿಯಾಗಿದ್ದರು.  ಬೆಂಗಳೂರಿನಲ್ಲಿ ಹಣದ   ರಾಬರಿ ಮಾಡುವಾಗ ಕರ್ನಾಟಕ ರಿಜಿಸ್ಟ್ರೇಷನ್ ನಂಬರ್ ಹಾಕಿ‌ ಓಡಾಡಿದ್ದ ದರೋಡೆಕೋರರು, ಬಳಿಕ ಉತ್ತರ ಪ್ರದೇಶದ ರಿಜಿಸ್ಟ್ರೇಷನ್ ನಂಬರ್ ಹಾಕಿಕೊಂಡು ಸಿಟಿ ಬಿಟ್ಟು  ಆಂಧ್ರಕ್ಕೆ ಪರಾರಿಯಾಗಿದ್ದರು. 

ಬೆಂಗಳೂರಿನ   ಕಲ್ಯಾಣ್ ನಗರದ ಸ್ವಿಫ್ಟ್ ಕಾರ್ ನಂಬರ್ ಪ್ಲೇಟ್ ಬಳಸಿದ್ದ ಆರೋಪಿಗಳು, ಬಳಿಕ ಅದೇ ಇನ್ನೋವಾ ಕಾರಿಗೆ ಉತ್ತರ ಪ್ರದೇಶದ ರಿಜಿಸ್ಟ್ರೇಷನ್ ನಂಬರ್ ಬಳಸಿದ್ದಾರೆ.  ಇದೀಗ ಸಿಸಿ ಟಿವಿ, ಮೊಬೈಲ್ ಲೊಕೇಶನ್ ಡಂಪಿಂಗ್ ನಿಂದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಂಧ್ರದಲ್ಲಿ ಹಿಂದಿ ಭಾಷೆಯಲ್ಲಿ   ಮಾತನಾಡಿ ಪೊಲೀಸರ  ದಾರಿ ತಪ್ಪಿಸೋ ಕೆಲಸ‌ವನ್ನು  ಆರೋಪಿಗಳು ಮಾಡಿದ್ದಾರೆ.

7 crore Robbery
Advertisment