/newsfirstlive-kannada/media/media_files/2026/02/02/preetham-death-in-bwssb-chamber-2026-02-02-12-52-46.jpg)
ಜಲಮಂಡಳಿಯ ಗುಂಡಿಗೆ ಬಿದ್ದು ಬಾಲಕ ಪ್ರೀತಂ ಸಾವು!
ಬೆಂಗಳೂರು ಜಲಮಂಡಳಿ ಕಾಮಗಾರಿ ವೇಳೆಯ ಯಡವಟ್ಟುಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಕಾಂಕ್ರೀಟ್ ಚೇಂಬರ್ ಗೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಕನಕಪುರ ರಸ್ತೆ ಪೈಪ್ ಲೈನ್ ರೋಡ್ ನಲ್ಲಿ ಬೆಂಗಳೂರು ಜಲಮಂಡಳಿ ಕಾಮಗಾರಿ ನಡೆಸುತ್ತಿತ್ತು. ಕಾಮಗಾರಿಗಾಗಿ ಚೇಂಬರ್ ಅನ್ನು ತೆಗೆದು ಮುಚ್ಚದೇ ಹಾಗೆ ಬಿಟ್ಟಿತ್ತು. ಬಾಯಿ ತೆರೆದುಕೊಂಡಿದ್ದ ಜಲಮಂಡಳಿಯ ಚೇಂಬರ್‌ಗೆ 9ನೇ ತರಗತಿಯ ಬಾಲಕ ಪ್ರೀತಂ ಬಿದ್ದು ಸಾವನ್ನಪ್ಪಿದ್ದಾನೆ. ಜನವರಿ 28 ರಂದೇ ಬಾಲಕ ಪ್ರೀತಂ ಜಲಮಂಡಳಿಯ ಚೇಂಬರ್‌ಗೆ ಬಿದ್ದಿದ್ದಾನೆ. ಪ್ರೀತಂ ಪೋಷಕರಿಗೆ ತಮ್ಮ ಮಗ, ಜಲಮಂಡಳಿಯ ಚೇಂಬರ್‌ಗೆ ಬಿದ್ದಿರುವುದು ಗೊತ್ತಾಗಿಲ್ಲ. ಪ್ರೀತಂ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ಜಲಮಂಡಳಿಯ ಈ ಬಲಿ ಪಡೆದ ಜಲಮಂಡಳಿಯ ಚೇಂಬರ್ ಇದೆ.
ಪ್ರೀತಂ ಪೋಷಕರು ಮಗ ನಾಪತ್ತೆಯಾದ ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕನಕಪುರ ಉತ್ಸವದಲ್ಲಿ ಕಗ್ಗಲೀಪುರ ಪೊಲೀಸರು ಬ್ಯುಸಿಯಾಗಿದ್ದರು. ಹೀಗಾಗಿ ಬಾಲಕನ ನಾಪತ್ತೆ ಕೇಸ್ ಕಡೆಗೆ ಸರಿಯಾಗಿ ಗಮನ ನೀಡಿಲ್ಲ. ನಿನ್ನೆ ರಾತ್ರಿ ಜಲಮಂಡಳಿಯ ಚೇಂಬರ್ ನಿಂದ ಕೊಳೆತ ವಾಸನೆ ಬಂದಿದೆ. ಹೀಗಾಗಿ ಸ್ಥಳೀಯರು ನೋಡಿದಾಗ, ಬಾಲಕ ಚೇಂಬರ್‌ಗೆ ಬಿದ್ದಿರುವುದು ಗೊತ್ತಾಗಿದೆ. ನಿನ್ನೆ ರಾತ್ರಿ ಜಲಮಂಡಳಿಯ ಚೇಂಬರ್ ನಿಂದ ಬಾಲಕನ ಶವವನ್ನು ಹೊರ ತೆಗೆಯಲಾಗಿದೆ.
ಜಲ ಮಂಡಳಿ ವಿರುದ್ಧ ಈಗ ಬಾಲಕ ಪ್ರೀತಂ ಕುಟುಂಬಸ್ಥರ ಹಿಡಿಶಾಪ ಹಾಕುತ್ತಿದ್ದಾರೆ. ಜಲಮಂಡಳಿಯ ಚೇಂಬರ್ ನಲ್ಲಿ ತೇಲುತ್ತಿರುವ ಮೃತ ದೇಹ ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ. 9ನೇ ತರಗತಿಯ ಬಾಲಕ ಪ್ರೀತಂ ಸಾವಿಗೆ ಜಲಮಂಡಳಿಯ ಅಧಿಕಾರಿಗಳೇ ಕಾರಣ ಎಂದು ಅಧಿಕಾರಿಗಳಿಗೆ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಇದು ಜಲಮಂಡಳಿಗೆ ಸೇರಿದ್ದ ಜಾಗ. ಪೈಪ್ ಲೈನ್ ಕಾಮಗಾರಿ ಮುಗಿದು ತುಂಬ ಸಮಯ ಆಗಿದೆ. ಆದರೆ ವಾಲ್ ಕವರ್ ಓಪನ್ ಆಗಿದೆ. ವಾಲ್ ಕವರ್ ಓಪನ್ ಇರೋದು ಗೊತ್ತಿರಲಿಲ್ಲ. ನಮಗೂ ಯಾರೂ ದೂರು ಕೊಟ್ಟಿರಲಿಲ್ಲ. ಯಾರೂ ಓಪನ್ ಮಾಡಿದ್ರು ಎನ್ನುವುದನ್ನು ತನಿಖೆ ಮಾಡುತ್ತೇವೆ. ತನಿಖೆ ಮಾಡಿ ಶೀಘ್ರವೇ ಮಾಹಿತಿ ಕೊಡುತ್ತೇವೆ ಎಂದು ಬೆಂಗಳೂರು ಜಲಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ಜನವರಿ 28 ರಂದು ಬಾಲಕ ಪ್ರೀತಂ ಮನೆಯಿಂದ ಆಚೆ ಆಟ ಆಡಲು ಹೋಗಿದ್ದ. ಅದಾದ ಬಳಿಕ ವಾಪಸ್ ಆಗಿಲ್ಲ. ಅಂದೇ ಪೋಷಕರು ಮಿಸ್ಸಿಂಗ್ ದೂರು ಕೊಟ್ಟಿದ್ದಾರೆ.
ಪ್ರೀತಂ ಬುಧವಾರ ಮನೆಯಿಂದ ಹೋಗಿದ್ದ. ಬೆಳ್ಳಿಗೆ 9 ಗಂಟೆಗೆ ಮನೆಯಿಂದ ಹೋಗಿದ್ದ. ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೇವು. ಆದರೇ, ಪೊಲೀಸರು ಬಂದಿರಲಿಲ್ಲ. ಕನಕಪುರ ಉತ್ಸವದಿಂದಾಗಿ ಪೊಲೀಸರು ಯಾರು ಇರಲಿಲ್ಲ . ಕಂಪ್ಲೇಟ್ ಕೊಟ್ರು ಯಾರು ಬಂದಿರಲಿಲ್ಲ. ನಾವೇ ಹುಡುಕಿಕೊಂಡು ಹೋದಾಗ ಪ್ರೀತಂ ಶವ ಸಿಕ್ಕಿದೆ. ಯಾಕೆ ಹೋಗಿದ್ದ ಅನ್ನೋದು ಗೊತ್ತಿಲ್ಲ. ತುಂಬಾ ದಿನದಿಂದ ಚೇಂಬರ್ ಅನ್ನು ಮುಚ್ಚಿರಲಿಲ್ಲ. ಮುಚ್ಚಿದ್ದರೇ, ಹೀಗೆ ಆಗುತ್ತಿರಲಿಲ್ಲ. ಒಬ್ಬ ಮಗ, ಮಗಳು ಇದ್ದಾರೆ. ಇವತ್ತು ಮಗನನ್ನು ಕಳೆದುಕೊಂಡಿದ್ದೇವೆ ಎಂದು ಪ್ರೀತಂ ತಂದೆ ರಜನಿಕಾಂತ್ ಹೇಳಿದ್ದಾರೆ.
ಜಲಮಂಡಳಿ ನಿರ್ಲಕ್ಷ್ಯಕ್ಕೆ ಪ್ರಾಣ ಹೋಗ್ತಿರೋದು ಇದೇ ಮೊದಲಲ್ಲ. ಇದರ ಪಕ್ಕದಲ್ಲೇ ಒಂದು ವರ್ಷದ ಹಿಂದೆ ಪ್ರಾಣ ಕಳೆದುಕೊಂಡಿದ್ದ 15 ವರ್ಷದ ಬಾಲಕ. ಪೈಪ್ ಲೇನ್ ಕಾಮಗಾರಿಗೆ ತೆಗೆಯಲಾಗಿದ್ದ ಹೊಂಡಕ್ಕೆ ಎಸ್‌ಎಸ್‌ಎಲ್‌ಸಿ ಹುಡುಗ ಬಿದ್ದಿದ್ದ. ನಾಲ್ಕು ಜನರ ಹುಡುಗರ ಪೈಕಿ ಓರ್ವ ಹುಡುಗ ಬಿದ್ದು ಸಾವನ್ನಪ್ಪಿದ್ದ. ಇದೀಗ ಕೂಗಳತೆ ದೂರದಲ್ಲಿ 14 ವರ್ಷದ ಬಾಲಕ ಪ್ರೀತಂ ಬಿದ್ದು ಸಾವನ್ನಪ್ಪಿದ್ದಾನೆ. ಪ್ರತಿ ವರ್ಷ ಇಲ್ಲಿ ಒಂದಿಲ್ಲೊಂದು ದುಘಟನೆ ಆಗುತ್ತಿದೆ ಎಂದು ಸ್ಥಳೀಯರು ಕೂಡ ದೂರಿದ್ದಾರೆ. ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆಲ್ಲಾ ಕಾರಣ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.
ಅಕ್ಕ ಮನೆಯಲ್ಲಿದ್ದಳು. ಬೆಳಿಗ್ಗೆ ತಿಂಡಿ ಮಾಡಿ ಹೋಗಿದ್ದಾನೆ. ಸಂಜೆ ಕೆಲಸದಿಂದ ಬಂದಾಗ ಇರಲಿಲ್ಲ. ಗಾಬರಿ ಆಯಿತು. ಎಲ್ಲ ಕಡೆ ಹುಡುಕಾಡಿದ್ದೇವು. ಪೊಲೀಸರು ಸರಿಯಾಗಿ ಸ್ಪಂದನೆ ಕೊಟ್ಟಿಲ್ಲ..ನನ್ನ ಮಗ ಚೇಂಬರ್ ನಲ್ಲಿ ಸತ್ತಿದ್ದಾನೆ. ಇದೊಬ್ಬ ಮಗನನ್ನ ಕಳೆದುಕೊಂಡು ಅನಾಥರಾಗಿದ್ದೇವೆ. ಕೊಳೆತ ದೇಹ ತಗೊಂಡು ಊರಿಗೆ ಹೋಗ್ಬೇಕು ಎಂದು ಪ್ರೀತಂ ತಾಯಿ ಪುಷ್ಪಾ ನೋವು ತೋಡಿಕೊಂಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವವನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us