Advertisment

ಬೆಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದ ಯುವತಿಗೆ ಬುಲೆಟ್ ಬೈಕ್ ಡಿಕ್ಕಿ : ಆಸ್ಪತ್ರೆಯಲ್ಲಿ ಯುವತಿ ಸಾವು

ಬೆಂಗಳೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಯುವತಿಗೆ ಬುಲೆಟ್ ಬೈಕ್ ಡಿಕ್ಕಿ ಹೊಡೆದು ಯುವತಿ ಸಾವನ್ನಪ್ಪಿದ್ದಾಳೆ. ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿಯಾಗಿದ್ದ ಯೋಗೇಶ್ವರಿ(27) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ದೀಪನ್‌(22 ) ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

author-image
Chandramohan
DEADLY ACCIDENT IN BANGALORE GIRL DEATH

ಬುಲೆಟ್ ಬೈಕ್ ಡಿಕ್ಕಿಯಿಂದ ಮೃತಪಟ್ಟ ಯೋಗೇಶ್ವರಿ

Advertisment
  • ಬುಲೆಟ್ ಬೈಕ್ ಡಿಕ್ಕಿಯಿಂದ ಮೃತಪಟ್ಟ ಯೋಗೇಶ್ವರಿ
  • ಬೆಂಗಳೂರಿನ ರಾಜಕುಮಾರ್ ರಸ್ತೆಯಲ್ಲಿ ಅಪಘಾತ
  • ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ವರಿ ಸಾವು


ಊಟಕ್ಕೆ ಹೋಗಲು ರಸ್ತೆ ದಾಟುವಾಗ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.  ಬೈಕ್ ಗುದ್ದಿದ ರಭಸಕ್ಕೆ ಯುವತಿ ಸಾವನ್ನಪ್ಪಿದ್ದಾಳೆ. ಬೆಂಗಳೂರಿನ ರಾಜ್ ಕುಮಾರ್ ರಸ್ತೆಯ ಹೆಚ್ ಡಿ ಎಫ್ ಸಿ ಬ್ಯಾಂಕ್  ಎದುರು ಅಪಘಾತ ಸಂಭವಿಸಿ ಯೋಗೇಶ್ವರಿ ಎಂಬ 27 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. 
ಯೋಗೇಶ್ವರಿ ಬೆಂಗಳೂರಿನ  ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿ.  ಮಧ್ಯಾಹ್ನದ ಊಟಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬುಲೆಟ್ ಬೈಕ್ ಯೋಗೇಶ್ವರಿಗೆ ಡಿಕ್ಕಿ ಹೊಡೆದಿದೆ. ಸ್ಪೀಡ್ ನಲ್ಲಿದ್ದ ಬೈಕ್‌ , ಡಿಕ್ಕಿ ಹೊಡೆದ ರಭಸಕ್ಕೆ ಯೋಗೇಶ್ವರಿಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಗಾಯಗೊಂಡ ಯೋಗೇಶ್ವರಿ ಅವರನ್ನು ಹತ್ತಿರದ ಸುಗುಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ, ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ವರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ರಾಜಾಜಿನಗರ ಸಂಚಾರಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisment

ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಈ ಅಪಘಾತ ನಡೆದಿದೆ.  ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಕೆಲಸ ಮಾಡ್ತಿದ್ದ ಯೋಗೇಶ್ವರಿ,  ಸಹೋದ್ಯೋಗಿ ಜೊತೆ ಊಟ ತರಲು  ರಸ್ತೆ ದಾಟಿ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.  ಸ್ನೇಹಿತೆ ಬೈಕ್ ಬರೋದು ನೋಡಿ ರಸ್ತೆ ದಾಟದೇ ನಿಂತಿದ್ದರು. ಆದರೇ, ಬೈಕ್ ಬರುವುದರೊಳಗೆ  ರಸ್ತೆ ದಾಟಬಹುದು ಎಂಬ ಲೆಕ್ಕಾಚಾರದಲ್ಲಿ ಯೋಗೇಶ್ವರಿ ರಸ್ತೆ ದಾಟಲು ಹೋಗಿದ್ದಾರೆ. ಈ ವೇಳೆ ಸ್ಪೀಡಾಗಿ ಬಂದ ಬುಲೆಟ್ ಬೈಕ್ ಯೋಗೇಶ್ವರಿಗಿ ಡಿಕ್ಕಿ ಹೊಡೆದಿದೆ.  ಬೈಕ್ ಸವಾರ ದೀಪನ್ ಕೂಡ ಬಿದ್ದು ಗಾಯಗೊಂಡಿದ್ದ. ಕಮಾಂಡೋ ಆಸ್ಪತ್ರೆಗೆ ದೀಪನ್ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೇ, ಸುಗುಣ ಆಸ್ಪತ್ರೆಗೆ ದಾಖಲಾಗಿದ್ದ ಯೋಗೇಶ್ವರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 

DEADLY ACCIDENT IN BANGALORE GIRL DEATH (1)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

road accident Accident NEWS accident
Advertisment
Advertisment
Advertisment