/newsfirstlive-kannada/media/media_files/2025/10/31/subramanya-pura-police-station02-2025-10-31-18-58-53.jpg)
ಮಗಳಿಂದ ಹತ್ಯೆಯಾದ ತಾಯಿ ನೇತ್ರಾವತಿ
ಅಪ್ರಾಪ್ತ ಮಗಳೇ ತನ್ನ ಹೆತ್ತ ತಾಯಿಯನ್ನೇ ಹತ್ಯೆಗೈದ್ದಿರುವ ಅಮಾನುಷ ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಅಪ್ರಾಪ್ತ ಮಗಳೇ ತನ್ನ ತಾಯಿ ನೇತ್ರಾವತಿಯನ್ನು ಹತ್ಯೆಗೈದಿದ್ದಾಳೆ. ಮಗಳು ಚಿಕ್ಕ ವಯಸ್ಸಿನಲ್ಲಿ ಪ್ರೀತಿ, ಗೀತಿ ಅಂತ ಹುಡುಗನ ಜೊತೆ ಓಡಾಡುವುದನ್ನು ನೋಡಿದ ತಾಯಿ ಮಗಳಿಗೆ ಬುದ್ದಿವಾದ ಹೇಳಿದ್ದಾಳೆ. ತಾಯಿ ಬುದ್ದಿಮಾತು ಹೇಳಿದ್ದಕ್ಕೆ ತಾಯಿಯನ್ನೇ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಹತ್ಯೆಗೈದ್ದಿದ್ದಾಳೆ. ನೇತ್ರಾವತಿಯ ಮಗಳ ಜೊತೆ ಸೇರಿ ಕೊಲೆಗೈದ ಆರೋಪದ ಮೇಲೆ ಪೊಲೀಸರು ಈಗ ಐವರನ್ನು ಬಂಧಿಸಿದ್ದಾರೆ.
ಕಳೆದ ಶನಿವಾರವೇ ನೇತ್ರಾವತಿಯನ್ನು ಆಕೆಯ ಅಪ್ರಾಪ್ತ ಮಗಳು ಹಾಗೂ ಉಳಿದ ನಾಲ್ಕು ಮಂದಿ ಅಪ್ರಾಪ್ತ ಹುಡುಗರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರು. ಬೆಂಗಳೂರಿನ ಸುಬ್ರಮಣ್ಯಪುರದ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಈ ಕೊಲೆ ನಡೆದಿತ್ತು. ನೇತ್ರಾವತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಬಳಿಕ ನೇಣು ಹಾಕಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ನೇತ್ರಾವತಿ ಸಾವು ಅನ್ನು ಆತ್ಮಹತ್ಯೆ ಎಂದು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಆದರೇ, ನೇತ್ರಾವತಿಯ ಶವ ಸಂಸ್ಕಾರ ಆದ ಬಳಿಕ ಮಗಳು ಮನೆಯಲ್ಲಿ ಇರಲಿಲ್ಲ. ತನ್ನ ತಂಗಿ ಸಾವಿನ ಬಳಿಕ ಮಗಳು ಎಲ್ಲೂ ಕಾಣಿಸುತ್ತಿಲ್ಲ ಎಂದು ನೇತ್ರಾವತಿಯ ಅಕ್ಕ ಅನಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನೇತ್ರಾವತಿ ಸಾವನ್ನಪ್ಪಿದ 2 ದಿನದ ಬಳಿಕ ಮಗಳು ಮನೆಗೆ ವಾಪಸ್ ಬಂದಿದ್ದಳು. ನಾನು ಅವತ್ತು ತಾಯಿ ಮನೆಗೆ ಹೋಗಿದ್ದೆ. ಐದು ಜನ ಸ್ನೇಹಿತರನ್ನು ಗಮನಿಸಿದೆ. ಟವಲ್ ನಲ್ಲಿ ಕುತ್ತಿಗೆ ಬಿಗಿದು ನೇಣು ಹಾಕಿದ್ದನ್ನು ನೋಡಿದ್ದೆ. ನಂತರ ನನಗೆ ಬೆದರಿಕೆ ಹಾಕಲಾಗಿತ್ತು. ಭಯಪಟ್ಟು ಫ್ರೆಂಡ್ಸ್ ಮನೆಗೆ ತೆರಳಿದ್ದೆ ಎಂದು ಮಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಳು.
ಆದರೇ, ಪೊಲೀಸರಿಗೆ ಅನುಮಾನ ಬಂದು, ವಿಚಾರಣೆ ನಡೆಸಿದಾಗ, ತಾಯಿ ನೇತ್ರಾವತಿಯನ್ನು ಅಪ್ರಾಪ್ತ ಮಗಳೇ ತನ್ನ ಬಾಯ್ ಫ್ರೆಂಡ್ ಹಾಗೂ ಉಳಿದವರ ಜೊತೆ ಸೇರಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮಗಳೇ ತಾಯಿಯನ್ನು ಹತ್ಯೆ ಮಾಡಿದ್ದಾಳೆ ಎಂಬುದು ತನಿಖೆಯಿಂದ ಗೊತ್ತಾಗಿದೆ.
/filters:format(webp)/newsfirstlive-kannada/media/media_files/2025/10/31/subramanya-pura-police-station-2025-10-31-17-37-30.jpg)
ಲವ್ ನಲ್ಲಿ ಬಿದ್ದ ಮಗಳಿಂದ ಹೆತ್ತ ತಾಯಿಯ ಹತ್ಯೆ!
ಮೃತ ನೇತ್ರಾವತಿ ಮಗಳು ಓರ್ವ ಯುವಕನನ್ನ ಪ್ರೀತಿ ಮಾಡುತ್ತಿದ್ದಳು. ಆಗಾಗ ಪ್ರಿಯಕರನ ಜೊತೆ ಮನೆಗೆ ನೇತ್ರಾವತಿ ಮಗಳು ಬರುತ್ತಿದ್ದಳು. ಶನಿವಾರ ರಾತ್ರಿ ಕೂಡ ಮನೆಗೆ ಪ್ರಿಯಕರನ ಜೊತೆ ಬಂದಿದ್ದಳು. ಪ್ರಿಯಕರನ ಮೂವರು ಸ್ನೇಹಿತರು ಕೂಡ ಮನೆಗೆ ಬಂದಿದ್ರು. ಶನಿವಾರ ರಾತ್ರಿ 11 ಗಂಟೆಗೆ ಮಲಗಿದ್ದ ನೇತ್ರಾವತಿಗೆ ಎಚ್ಚರವಾಗಿದೆ. ಈ ವೇಳೆ ಮಗಳ ಸಹವಾಸ ಕಂಡು ಬೈದು ಜಗಳ ಆಡಿದ್ದಳು. ಇದರಿಂದ ಕೋಪಗೊಂಡ ಮಗಳು ಮತ್ತು ಸ್ನೇಹಿತರು ಜಗಳ ಮಾಡಿದ್ದಾರೆ. ಜಗಳದ ವೇಳೆ ಬಲವಂತವಾಗಿ ನೇತ್ರಾವತಿ ಬಾಯಿ ಮುಚ್ಚಿದ್ದಾರೆ. ಬಳಿಕ ಟವಲ್ ನಿಂದ ನೇತ್ರಾವತಿ ಕುತ್ತಿಗೆ ಬಿಗಿದಾಗ ಉಸಿರು ನಿಂತಿದೆ. ನೇತ್ರಾವತಿ ಕೊಲೆಯಾಗಿದ್ದನ್ನ ನೋಡಿ ಗಾಬರಿಯಾದ ಅಪ್ರಾಪ್ತರ ಟೀಂ, ತಕ್ಷಣವೇ ನೇತ್ರಾವತಿ ಕತ್ತಿಗೆ ಸೀರೆ ಬಿಗಿದು ಫ್ಯಾನಿಗೆ ನೇತುಹಾಕಿದ್ದಾರೆ. ನಂತರ ಮನೆ ಲಾಕ್ ಮಾಡಿ ಮಗಳು ಮತ್ತು ಸ್ನೇಹಿತರು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್ ನಲ್ಲಿದ್ದ ನೇತ್ರಾವತಿ ಮಗಳು ಕೂಡ ನಾಪತ್ತೆಯಾಗಿದ್ದಳು. ಮರುದಿನ ನೇತ್ರಾವತಿ ಅಕ್ಕ ತನ್ನ ತಂಗಿ ಮತ್ತು ಮಗಳಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿರಲಿಲ್ಲ. ಅನುಮಾನ ಬಂದು ಸೋಮವಾರ ಮನೆ ಬಳಿ ಹೋಗಿದ್ದರು. ಮನೆಯ ಕಿಟಿಕಿ ಮೂಲಕ ನೋಡಿದಾಗ ನೇತ್ರಾವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಳಿಕ ಸುಬ್ರಮಣ್ಯ ಪುರ ಪೊಲೀಸರು ಸ್ಥಳಕ್ಕೆ ಬಂದು UDR ದಾಖಲು ಮಾಡಿಕೊಂಡಿದ್ರು. ಶವ ಸಂಸ್ಕಾರಕ್ಕೂ ನೇತ್ರಾವತಿ ಮಗಳು ಬಂದಿರುವುದಿಲ್ಲ. ಇದರಿಂದ ಬುಧವಾರ ನೇತ್ರಾವತಿ ಮಗಳು ಮಿಸ್ಸಿಂಗ್ ಅಂತ ದೊಡ್ಡಮ್ಮ ದೂರು ನೀಡ್ತಾರೆ. ಅನುಮಾನಗೊಂಡ ಪೊಲೀಸರು ನೇತ್ರಾವತಿ ಮಗಳ ಡಿಟೇಲ್ಸ್ ಪರಿಶೀಲನೆ ಮಾಡ್ತಾರೆ. ಈ ವೇಳೆ ಆಕೆಯ ಪ್ರಿಯಕರನನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಾರೆ. ವಿಚಾರಣೆ ವೇಳೆ ಅಪ್ರಾಪ್ತರ ಗ್ಯಾಂಗ್ ನಿಂದ ನೇತ್ರಾವತಿ ಕೊಲೆ ರಹಸ್ಯ ಬಟಾಬಯಲಾಗಿದೆ.
ಒರಿಸ್ಸಾ ರಾಜ್ಯದಲ್ಲೂ ಕೆಲ ತಿಂಗಳ ಹಿಂದೆ ಸಾಕುತಾಯಿಯನ್ನು ಸಾಕು ಮಗಳೇ ಹತ್ಯೆ ಮಾಡಿದ್ದಳು. ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಗಳು ಸಾಕು ತಾಯಿಯ ಆಸ್ತಿ, ಜ್ಯುವೆಲ್ಲರಿ ಲಪಟಾಯಿಸಲು ಲವ್ವರ್ ಜೊತೆ ಸೇರಿ ಸಾಕುತಾಯಿಯನ್ನು ಹತ್ಯೆಗೈದ್ದಿದ್ದಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us