Subscribe

0

user
  • Manage Subscription
  • Bookmarks
  • My Profile
  • Log Out
  • LIVE
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ವಿದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಲೈಫ್‌ಸ್ಟೈಲ್
  • ಎಜುಕೇಶನ್
  • ಟೆಕ್
  • Sign in with Email

By clicking the button, I accept the Terms of Use of the service and its Privacy Policy, as well as consent to the processing of personal data.

Don’t have an account? Signup

ad_close_btn
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸ್ಪೋರ್ಟ್ಸ್
  • ಆರೋಗ್ಯ
  • ಸಿನಿಮಾ

Powered by :

ಬೆಂಗಳೂರು ಟಾಪ್ ನ್ಯೂಸ್

ಬೆಂಗಳೂರಿನಲ್ಲಿ ಸ್ನೇಹಿತನಿಗೆ ಬ್ಯಾಂಕ್ ಖಾತೆ ಡೀಟೈಲ್ಸ್ ಕೊಟ್ಟ ಯಾಮಾರಿದ ಸ್ನೇಹಿತ: 7 ಕೋಟಿ ರೂ. ಸೈಬರ್ ವಂಚನೆ ಪತ್ತೆ!

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಸ್ನೇಹಿತ ಆಯುಷ್‌ಗೆ ತನ್ನ ಬ್ಯಾಂಕ್ ಖಾತೆಯ ಡೀಟೈಲ್ಸ್ ಕೊಟ್ಟು ಯಾಮಾರಿದ್ದಾನೆ. ಸ್ನೇಹಿತನ ಬ್ಯಾಂಕ್ ಖಾತೆ ಬಳಸಿಕೊಂಡು ಆಯುಷ್ ಎಂಬಾತ 7 ಕೋಟಿ ರೂಪಾಯಿ ಸೈಬರ್ ವಂಚನೆಯ ಹಣ ವರ್ಗಾವಣೆ ಮಾಡಿದ್ದಾನೆ. ಇದೆಲ್ಲಾ ಹೇಗೆ ನಡೀತು?

author-image
Chandramohan
23 Feb 2026 13:51 IST
Follow Us
CYBER FRAUD IN BANGALORE
Advertisment


ಯಾರಿಗೆ ಆಗಲಿ ನಮ್ಮ ಬ್ಯಾಂಕ್ ಅಕೌಂಟ್ ಡೀಟೈಲ್ಸ್ , ಪಾಸ್ ವರ್ಡ್, ಪಿನ್ ಸೇರಿದಂತೆ ಹಣಕಾಸಿನ ಗೌಪ್ಯ ಮಾಹಿತಿಗಳನ್ನು ನೀಡಬೇಡಿ ಎಂದು ಆರ್‌ಬಿಐ ಅಭಿಯಾನವನ್ನೇ ನಡೆಸುತ್ತಿದೆ. ಆದರೂ ಜನರು ತಮ್ಮ ಬ್ಯಾಂಕ್ ಖಾತೆ, ಪಾಸ್ ವರ್ಡ್, ಪಿನ್ ಸೇರಿದಂತೆ ಕೆಲ ಮಹತ್ವದ ಡೀಟೈಲ್ಸ್  ಅನ್ನು ಸ್ನೇಹಿತರು, ಸಂಬಂಧಿಗಳು ಅನ್ನೋ ಕಾರಣಕ್ಕಾಗಿ ಬೇರೆಯವರಿಗೆ ನೀಡಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದಕ್ಕೊಂದು ತಾಜಾ  ಉದಾಹರಣೆ, ಬೆಂಗಳೂರಿನಲ್ಲಿ ನಡೆದಿರುವ ಘಟನೆ.
ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಓದುತ್ತಿದ್ದ ವಿದ್ಯಾರ್ಥಿಗೆ  ಆಯುಷ್ ಎಂಬ ಸ್ನೇಹಿತನಿದ್ದಾನೆ. ಆಯುಷ್ ಒಂದೆರೆಡು ತಿಂಗಳ ಹಿಂದೆ ತನ್ನ ಸ್ನೇಹಿತನಿಗೆ ಪೋನ್ ಕಾಲ್ ಮಾಡಿದ್ದು, ತಾನು ಸಂಕಷ್ಟದಲ್ಲಿದ್ದೇನೆ. ತನ್ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ. ಹೀಗಾಗಿ ಹಣ ವರ್ಗಾವಣೆ ಮಾಡಲು ನಿನ್ನ ಬ್ಯಾಂಕ್ ಖಾತೆಯ ಡೀಟೈಲ್ಸ್ ಬೇಕು, ಸ್ಪಲ್ಪ ದಿನ ಹಣ ವರ್ಗಾವಣೆ ಮಾಡಿ, ಹಣ ವಿತ್ ಡ್ರಾ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ. ಇದನ್ನು ನಂಬಿದ ಬೆಂಗಳೂರಿನ ಸ್ನೇಹಿತ, ಆಯುಷ್  ಹೇಗಿದ್ದರೂ ನನ್ನ ಸ್ನೇಹಿತ.  ಬ್ಯಾಂಕ್ ಖಾತೆ ಡೀಟೈಲ್ಸ್ ಕೊಡುವುದರಿಂದ ಆತನಿಗೆ ಅನುಕೂಲವಾಗುತ್ತೆ. ಇದರಿಂದ ನಾನು ಕಳೆದುಕೊಳ್ಳುವುದು ಏನೂ ಇಲ್ಲ ಎಂದು ಯೋಚಿಸಿ , ತನ್ನ ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ಆಯುಷ್‌ಗೆ ನೀಡಿದ್ದಾನೆ. ಬ್ಯಾಂಕ್ ಖಾತೆಯ ಸಂಖ್ಯೆ, ಪ್ಯಾನ್ ನಂಬರ್, ಪಾಸ್ ವರ್ಡ್, ಪಿನ್ ಸೇರಿದಂತೆ ಎಲ್ಲ ವಿವರಗಳನ್ನು ಆಯುಷ್ ಗೆ ನೀಡಿದ್ದಾನೆ. 
ತನ್ನ ಸ್ನೇಹಿತನನ್ನು ನಂಬಿ, ವಿದ್ಯಾರ್ಥಿಯು ತನ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಯ ಪ್ರವೇಶ ವಿವರಗಳನ್ನು ಹಂಚಿಕೊಂಡಿದ್ದಾನೆ, ಇದರಲ್ಲಿ ಎಟಿಎಂ-ಲಿಂಕ್ಡ್ ಏರ್‌ಟೆಲ್ ಸಿಮ್ ಕಾರ್ಡ್, ನೆಟ್ ಬ್ಯಾಂಕಿಂಗ್ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಸೇರಿವೆ ಎಂದು ವರದಿಯಾಗಿದೆ. ಈ ವಿವರಗಳನ್ನು ಪೋಸ್ಟ್ ಮೂಲಕ ಹಂಚಿಕೊಳ್ಳಲಾಗಿದೆ.

ಆದರೇ, ಈಗ ಅಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸ್ನೇಹಿತನ ಬ್ಯಾಂಕ್ ಖಾತೆಯ ವಿವರ ಬಳಸಿಕೊಂಡು, 7 ಕೋಟಿ ರೂಪಾಯಿ ಮೊತ್ತದ ಸೈಬರ್ ವಂಚನೆ ನಡೆಸಲಾಗಿದೆ ಎಂಬುದು ಈಗ ಬೆಳಕಿಗೆ ಬಂದಿದೆ. ಆಯುಷ್‌ಗೆ ಬ್ಯಾಂಕ್ ಖಾತೆ ವಿವರ ನೀಡಿದ ಸ್ನೇಹಿತನಿಗೆ ತಾನು ಕಾನೂನಿನ ಸಂಕಷ್ಟಕ್ಕೆ ಸಿಲುಕುತ್ತೇನೆ ಎಂಬ ಅರಿವು, ಜ್ಞಾನವೇ ಇರಲಿಲ್ಲ. 
ಆದರೇ, ಬ್ಯಾಂಕ್ ನಿಂದ ಕಾಲ್ ಮಾಡಿ, ನಿಮ್ಮ ಬ್ಯಾಂಕ್ ಖಾತೆಯಿಂದ 7 ಕೋಟಿ ರೂಪಾಯಿವರೆಗೂ ಹಣದ ವರ್ಗಾವಣೆ ನಡೆದಿದೆ ಎಂದು ಹೇಳಿದಾಗ, ಸ್ನೇಹಿತನಿಗೆ ಶಾಕ್  ಆಗಿದೆ.  ಆಯುಷ್ ನನ್ನು ನಂಬಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರಿಂದ ಮೋಸ ಹೋದೆ ಎಂಬ ಅರಿವು ಆಗಿದೆ. ಸೈಬರ್ ವಂಚನೆಗೆ ತನ್ನ ಬ್ಯಾಂಕ್ ಖಾತೆಯನ್ನು ಬಳಸಿಕೊಳ್ಳಲಾಗಿದೆ ಎಂಬುದು ಈಗ ಗೊತ್ತಾಗಿದೆ. 
ಈಗ  ಇಂಜಿನಿಯರಿಂಗ್ ವಿದ್ಯಾರ್ಥಿಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ. 

CYBER FRAUD IN BANGALORE (1)




ತನ್ನ ಖಾತೆಯನ್ನು ಸೈಬರ್ ಅಪರಾಧ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅರಿತುಕೊಂಡ ವಿದ್ಯಾರ್ಥಿ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆಯುಷ್ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Investment cyber crimes cyber crime cyber fraud and digital arrest
Advertisment
FOLLOW NEWSFIRST FOR
LATEST UPDATES
YouTubeFacebookTwitterInstagram
Subscribe to our Newsletter! Be the first to get exclusive offers and the latest news
logo

Related Articles
Read the Next Article
Latest Stories
Subscribe to our Newsletter! Be the first to get exclusive offers and the latest news



Quick Links

  • IC
  • GRIEVANCE
  • FEED
  • CONTACT US

Olecom Media Pvt Ltd. © 2025

Powered by