ಬೆಂಗಳೂರಿನ ಈ ಏರಿಯಾದಲ್ಲಿ ಸ್ವಯಂ ಘೋಷಿತ ಕರ್ಫ್ಯೂ; ಸ್ವಿಗ್ಗಿ-ಜೊಮ್ಯಾಟೋ ಸಿಗಲ್ಲ, ಆಟೋ ಬರಲ್ಲ! ಕಾರಣ?

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಅಂಜನಾಪುರದ ನಿವಾಸಿಗಳಿಗೆ ಸಂಜೆಯಾದರೆ ಸಾಕು ಎಲ್ಲಿಲ್ಲದ ನಡುಕ ಶುರುವಾಗುತ್ತದೆ. ಕತ್ತಲಾಗುತ್ತಿದ್ದಂತೆ ಈ ಏರಿಯಾದ ಚಿತ್ರಣವೇ ಬದಲಾಗುತ್ತದೆ. ಕಾರಣ ‘ಚಿರತೆ’ (Leopard) ಭಯ.

author-image
Ganesh Kerekuli
bengaluru leopard (1)
Advertisment

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಅಂಜನಾಪುರದ ನಿವಾಸಿಗಳಿಗೆ ಸಂಜೆಯಾದರೆ ಸಾಕು ಎಲ್ಲಿಲ್ಲದ ನಡುಕ ಶುರುವಾಗುತ್ತದೆ. ಕತ್ತಲಾಗುತ್ತಿದ್ದಂತೆ ಈ ಏರಿಯಾದ ಚಿತ್ರಣವೇ ಬದಲಾಗುತ್ತದೆ. ಕಾರಣ ‘ಚಿರತೆ’ (Leopard) ಭಯ.
ಆನ್‌ಲೈನ್ ಡೆಲಿವರಿ ಬಂದ್, ಆಟೋ ಕೂಡ ಇಲ್ಲ!

ಅಂಜನಾಪುರ ಅಂದ್ರೆ ಸಾಕು ಆನ್‌ಲೈನ್ ಫುಡ್ ಡೆಲಿವರಿ ಬಾಯ್ಸ್ (Swiggy, Zomato) ಬೆಚ್ಚಿಬೀಳುತ್ತಾರೆ. ಸಂಜೆ 4 ಗಂಟೆ ಕಳೆದರೆ ಸಾಕು, ಈ ಏರಿಯಾಗೆ ಯಾವುದೇ ಫುಡ್ ಡೆಲಿವರಿ ಸಿಗುವುದಿಲ್ಲ. ಅಪ್ಪಿತಪ್ಪಿ ಆರ್ಡರ್ ಮಾಡಿದರೂ, 'ಅಂಜನಾಪುರ' ಲೊಕೇಶನ್ ನೋಡಿದ ತಕ್ಷಣ ಡೆಲಿವರಿ ಬಾಯ್ಸ್ ಆರ್ಡರ್ ಕ್ಯಾನ್ಸಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಬಂದ ಕನ್ನಡಿಗರ ಕೆರಳಿಸಿದ್ದ ಗಾಯಕ ಸೋನು ನಿಗಮ್..!

bengaluru leopard

ಇದಕ್ಕೆ ಪ್ರಮುಖ ಕಾರಣ, ಕಳೆದ ವರ್ಷ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನಿಗೆ ಚಿರತೆ ಎದುರಾಗಿದ್ದು. ಆ ಭಯದಿಂದಾಗಿ ಈಗ ಯಾರೂ ಇತ್ತ ಕಡೆ ಬರಲು ಧೈರ್ಯ ಮಾಡುತ್ತಿಲ್ಲ. ಇನ್ನು ಆಟೋ ಚಾಲಕರು ಕೂಡ ಸಂಜೆಯ ನಂತರ ಬಾಡಿಗೆಗೆ ಬರಲು ನಿರಾಕರಿಸುತ್ತಿದ್ದಾರೆ.

ಸಂಜೆ 6ಕ್ಕೆ ಸ್ವಯಂ ಘೋಷಿತ ಕರ್ಫ್ಯೂ!

ಚಿರತೆ ಭಯ ಎಷ್ಟರಮಟ್ಟಿಗಿದೆ ಎಂದರೆ, ಸಂಜೆ 6 ಗಂಟೆಯಾಗುತ್ತಿದ್ದಂತೆ ಇಲ್ಲಿನ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಡುತ್ತವೆ. ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತವೆ. ನಿವಾಸಿಗಳು 6 ಗಂಟೆಗೆಲ್ಲಾ ಮನೆಯ ಬಾಗಿಲು ಭದ್ರಪಡಿಸಿಕೊಂಡು ಒಳಗೆ ಸೇರಿಕೊಳ್ಳುತ್ತಾರೆ. ಏನೇ ತುರ್ತು ಕೆಲಸವಿದ್ದರೂ, ಅಥವಾ ಅಗತ್ಯ ವಸ್ತುಗಳು ಬೇಕಿದ್ದರೂ ಒಂಟಿಯಾಗಿ ಹೋಗುವಂತಿಲ್ಲ. ಕೇವಲ ಕಾರುಗಳಲ್ಲೇ (Car) ಓಡಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

4 ವರ್ಷಗಳಿಂದ ತಪ್ಪದ ಸಂಕಷ್ಟ

ಅಂಜನಾಪುರದಲ್ಲಿ ಚಿರತೆ ಹಾವಳಿ ಇಂದು ನಿನ್ನೆಯದಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಚಿರತೆ ಬೀಡುಬಿಟ್ಟಿದೆ. ಅನೇಕ ಸ್ಥಳೀಯರು ಮತ್ತು ಆಟೋ ಚಾಲಕರು ಚಿರತೆಯನ್ನು ಕಣ್ಣಾರೆ ಕಂಡಿದ್ದಾರೆ. ಹಲವು ಬಾರಿ ವಾಹನಗಳಿಗೆ ಅಡ್ಡಬಂದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ ಬೆಂಗಳೂರಿನಲ್ಲೇ ಇದ್ದರೂ, ಅಂಜನಾಪುರ ನಿವಾಸಿಗಳು ಮಾತ್ರ ಸಂಜೆಯಾದರೆ ಕಾಡಿನ ಮಧ್ಯೆ ಇರುವಂತೆ ಭಯದಲ್ಲಿ ಬದುಕುವಂತಾಗಿದೆ.

ಇದನ್ನೂ ಓದಿ: ಮದುವೆಗೆ ಸಿದ್ಧತೆ ನಡೆದಿತ್ತು.. ತಾಯಿ-ಮಗಳು ಹಠಾತ್ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

cheetah
Advertisment