/newsfirstlive-kannada/media/media_files/2025/11/08/prisoners-had-smart-phone-in-jail-2025-11-08-18-37-26.jpg)
ಜೈಲಿನಲ್ಲಿರುವ ಶಂಕಿತ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಕೈನಲ್ಲಿ ಸ್ಮಾರ್ಟ್ ಪೋನ್!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆ, ರೇಪ್ ಆರೋಪಿಗಳು, ಅಪರಾಧಿಗಳಿಗೆ ಮಾತ್ರವಲ್ಲ, ದೇಶದ್ರೋಹದ ಕೆಲಸ ಮಾಡಿದ ಉಗ್ರರಿಗೆ ರಾಜಾತಿಥ್ಯ ನೀಡಿದ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಾಕ್ಷ್ಯಗಳು ಬಿಡುಗಡೆಯಾಗಿವೆ. ಐಸಿಎಸ್ ಭಯೋತ್ಪಾದನಾ ಸಂಘಟನೆಗೆ ಉಗ್ರರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಎಂಬಾತನಿಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಲಕ್ಷುರಿ ಸೌಲಭ್ಯ ನೀಡಲಾಗಿದೆ. ಜುಹಾದ್ ಹಮೀದ್ ಶಕೀಲ್ ಮನ್ನಾ ಕೈಯಲ್ಲಿ ಮೊಬೈಲ್ ಇರುವ ವಿಡಿಯೋ ಈಗ ಬಿಡುಗಡೆಯಾಗಿದೆ. ಕೈನಲ್ಲಿ ಸ್ಮಾರ್ಟ್ ಪೋನ್ ಹಿಡಿದುಕೊಂಡು ಜೈಲಿನಲ್ಲಿ ಬಿಂದಾಸ್ ಆಗಿ ದಿನಗಳನ್ನು ಕಳೆಯುತ್ತಿದ್ದಾನೆ. ಈತನ ಕೈನಲ್ಲಿ ಮೊಬೈಲ್ ಇರುವ ವಿಡಿಯೋ ಲಿಂಕ್ ಅನ್ನು ಇಲ್ಲಿ ನೋಡಿದ್ದೇವೆ. ನೋಡಿ.
Terrorist or VIP? Bengaluru Parappana Agrahara Jail Turns Into a 5-Star Suite for ISIS Operative
— Karnataka Portfolio (@karnatakaportf) November 8, 2025
The walls of Parappana Agrahara Central Jail have once again been breached not by escape, but by corruption. A video showing ISIS terrorist Juhad Hamid Shakeel Manna casually using a… pic.twitter.com/UXexocvzgi
ಬೆಂಗಳೂರಿನ ತಿಲಕನಗರದವನಾದ ಜುಹಾದ್ ಹಮೀದ್ ಶಕೀಲ್ ಮನ್ನಾ , ಮೂಲಭೂತವಾದಿ ಮನಸ್ಥಿತಿಯ ಉಗ್ರರನ್ನ ಐಸಿಸ್​ಗೆ ನೇಮಕಾತಿ ಮಾಡುತ್ತಿದ್ದ. ಬೆಂಗಳೂರಿನ ನಾಲ್ವರನ್ನು ಸಿರಿಯಾಗೆ ಕಳಿಸಲು ಪ್ರಯತ್ನ ನಡೆಸಿದ್ದ . ಇಕ್ರಾ ಸರ್ಕಲ್ ಎಂಬ ಆನ್​ಲೈನ್ ಗ್ರೂಪ್ ಮಾಡಿ ಉಗ್ರರನ್ನು ಐಸಿಎಸ್ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದ. ಬೆಂಗಳೂರಿನಿಂದ ನಾಲ್ವರನ್ನು ಸಿರಿಯಾಗೆ ಕರೆದೊಯ್ದಿದ್ದ.
ಈತ ಸಿರಿಯಾಗೆ ಕಳಿಸಿದ್ದ ನಾಲ್ವರ ಪೈಕಿ ಇಬ್ಬರು ಟರ್ಕಿಯ ಇಸ್ತಾಂಬುಲ್‌ನ ನಿರಾಶ್ರಿತರ ಕ್ಯಾಂಪ್ ನಲ್ಲೇ ಮೃತಪಟ್ಟಿದ್ದರು. ಸಿರಿಯಾದ ಐಸಿಸ್ ಉಗ್ರರ ಜತೆ ಉಗ್ರ ಶಕೀಲ್ ನಿರಂತರ ಸಂಪರ್ಕದಲ್ಲಿದ್ದ. ಸಿರಿಯಾಗೆ ದೇಶದ ಹಲವೆಡೆಯಿಂದ ಯುವಕರನ್ನು ಕಳಿಸಲು ಪ್ರಯತ್ನಿಸಿದ್ದಾನೆ. ದೇಶಾದ್ಯಂತ ಐಸಿಸ್ ಉಗ್ರರ ಜತೆ ಸಂಪರ್ಕವನ್ನು ಈ ಜುಹಾದ್ ಹಮೀದ್ ಶಕೀಲ್ ಮನ್ನಾ ಹೊಂದಿದ್ದ.
ಉಗ್ರರ ಜೊತೆಗಿನ ಈತನ ಸಂಪರ್ಕವನ್ನು ಕಡಿದು ಹಾಕಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದರೇ, ಜೈಲಿನಲ್ಲೂ ಹೊರಗಿರುವ ಉಗ್ರರ ಜೊತೆ ಸಂಪರ್ಕ ಸಾಧಿಸಲು ಈತನ ಕೈಗೆ ಮೊಬೈಲ್ ಕೊಟ್ಟಿದ್ದಾರೆ ಜೈಲು ಸಿಬ್ಬಂದಿ.
ಈತನಿಗೆ ಜೈಲು, ಹೊರ ಪ್ರಪಂಪಕ್ಕೂ ಯಾವುದೇ ವ್ಯತ್ಯಾಸ ಗೊತ್ತೇ ಆಗದಂತೆ ಮೊಬೈಲ್, ಟಿವಿ ಸೇರಿದಂತೆ ಎಲ್ಲ ಸೌಲಭ್ಯ ಕೊಟ್ಟು ಆರಾಮಾಗಿ ಇರುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು, ಸಿಬ್ಬಂದಿ ನೋಡಿಕೊಳ್ಳುತ್ತಿರುವುದು ಅಘಾತಕಾರಿ. ಜೈಲಿನಿಂದಲೇ ಮತ್ತಷ್ಟು ವಿಧ್ವಂಸಕ ಕೃತ್ಯ ಮಾಡಿದರೇ, ಜೈಲು ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತೆ. ಈಗಾಗಲೇ ಸುಪ್ರೀಂಕೋರ್ಟ್ , ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕೆ ಜೈಲು ಸೂಪರಿಂಟೆಂಡೆಂಟ್ ರನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ತನ್ನ ಆದೇಶದಲ್ಲೇ ಹೇಳಿದೆ. ಆದರೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ಅದ್ಯಾವ ಹಣದ ಭೂತ ಮೆಟ್ಟಿಕೊಂಡಿದೆಯೋ ಗೊತ್ತಿಲ್ಲ. ಜೈಲು ಎಡಿಜಿಪಿ ಬಿ.ದಯಾನಂದ್ ಅವರಾದರೂ, ಜೈಲು ಅಧಿಕಾರಿಗಳಿಗೆ, ,ಸಿಬ್ಬಂದಿಗೆ ಸರಿಯಾದ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us