ಅಂತೂ, ಇಂತೂ ಪವಿತ್ರ ಗೌಡ ಸೆಲ್​ಗೂ ಬಂತು ಟಿವಿ..!

ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಪವಿತ್ರಾಗೌಡ ಇರುವ ಸೆಲ್​ನಲ್ಲಿ ಟಿವಿ ಅಳವಡಿಸಲು ಕೋರ್ಟ್ ಆದೇಶಿಸಿದೆ. ದರ್ಶನ್ ಬಳಿಕ, ಪವಿತ್ರಗೌಡ ಅವರಿದ್ದ ಕೋಣೆಗೂ ಟಿವಿ ಬಂದಿದೆ.

author-image
Ganesh Kerekuli
Updated On
Pavitra Gowda
Advertisment

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಪವಿತ್ರಾಗೌಡ ಇರುವ ಸೆಲ್​ನಲ್ಲಿ ಟಿವಿ ಅಳವಡಿಸಲು ಕೋರ್ಟ್ ಆದೇಶಿಸಿದೆ. ದರ್ಶನ್ ಬಳಿಕ, ಪವಿತ್ರಗೌಡ ಅವರಿದ್ದ ಕೋಣೆಗೂ ಟಿವಿ ಬಂದಿದೆ. 

ಪವಿತ್ರಾಗೌಡ ಜೈಲಿನಲ್ಲಿ ಟಿವಿ, ದಿನಪತ್ರಿಕೆ, ಗ್ರಂಥಾಲಯ ಪುಸ್ತಕಗಳು, ರೇಡಿಯೋ ಮತ್ತು ಧ್ಯಾನಕ್ಕೆ ಅವಕಾಶ ನೀಡಲು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಲಭ್ಯವಿದ್ದಲ್ಲಿ ಟಿವಿ, ದಿನಪತ್ರಿಕೆ ಮತ್ತು ಗ್ರಂಥಾಲಯ ಪುಸ್ತಕಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.

ಇನ್ನು ನಿನ್ನೆಯಿಂದ 64ನೇ CCH ಕೋರ್ಟ್​ನಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಇಂದು 12 ಗಂಟೆಗೆ ರೇಣುಕಾಸ್ವಾಮಿ ತಂದೆ ತಾಯಿಯನ್ನ ಪ್ರವಿತ್ರಾಗೌಡ ಪರ ವಕೀಲ ಬಾಲನ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ.

ನಂತರ ಹಿರಿಯ ವಕೀಲ ಸಿವಿ ನಾಗೇಶ್​ರಿಂದ ರೇಣುಕಾಸ್ವಾಮಿ ತಾಯಿಯ ವಿಚಾರಣೆ ನಡೆಸಲಾಗುತ್ತೆ. ಇದೇ ವೇಳೆ ಜೈಲಿಂದ ವಿಸಿ ಮೂಲಕವಾಗಿ ದರ್ಶನ್, ಪವಿತ್ರಾಗೌಡ ಮತ್ತು ಗ್ಯಾಂಗ್ ಕೋರ್ಟ್​ಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಈಶ್ವರ ಖಂಡ್ರೆ ಆಯ್ಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda Renukaswamy case darshan thoogudeepa
Advertisment